ಸುದ್ದಿಗಳು

ಜನ್ಮದಿನದ ಸಂಭ್ರಮದಲ್ಲಿ ಪುಷ್ಕರ್: ವಿಶೇಷವಾಗಿ ವಿಶ್ ಮಾಡಿದ ಸಿಂಪಲ್ ಸುನಿ

ಚಂದನವನದಲ್ಲಿ ಸದಭಿರುಚಿಯ ನಿರ್ಮಾಪಕರೆಂದು ಗುರುತಿಸಿಕೊಂಡಿರುವವರಲ್ಲಿ ಪುಷ್ಕರ್ ಮಲ್ಲಿಕಾರ್ಜುನಯ್ಯ ಸಹ ಒಬ್ಬರು. ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದ ಮೂಲಕ ಹೊಸ ಪ್ರಕಾರದ ಸಿನಿಮಾಗಳನ್ನು ನಿರ್ಮಾಣ ಮಾಡಲು ಪ್ರಾರಂಭಿಸಿದ ಇವರು, ಇಲ್ಲಿಯವರೆಗೂ 12 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

ಸದ್ಯ ನಾಯಕ ನಟರಾಗುವತ್ತ ಪುಷ್ಕರ್ ಚಿತ್ತ ಹರಿಸಿದ್ದು, ಈ ನಡುವೆ ಮಾಲಿವುಡ್ ಚಿತ್ರರಂಗದತ್ತ ಸಾಗುತ್ತಿದ್ದಾರೆ. ವಿಶೇಷವೆಂದರೆ, ಇಂದು ಇವರು ಜನುಮದಿನ ಸಂಭ್ರಮದಲ್ಲಿದ್ದು, ಚಿತ್ರರಂಗದ ಕಲಾವಿದರು ಮತ್ತು ತಂತ್ರಜ್ಞರು ವಿಶೇಷವಾಗಿ ಶುಭಾಶಯ ತಿಳಿಸುತ್ತಿದ್ದಾರೆ.

ಸದ್ಯ ಪುಷ್ಕರ್ ನಿರ್ಮಿಸುತ್ತಿರುವ ‘ಅವತಾರ್ ಪುರುಷ’ ಚಿತ್ರದ ನಿರ್ದೇಶಕ ಸಿಂಪಲ್ ಸುನಿ ವಿಶೇಷವಾಗಿ ಶುಭ ಹಾರೈಸಿದ್ದಾರೆ. ‘ಭಾತೃ from ಬೇರೆ ಮಾತಾಪಿತೃ.. ಗುರು,,

ಹೀರೋ ಹಾಗೋಕೆ ಹೊರಟಿರುವೆ… ಆದರೆ ನೀವು ಆಲ್ ರೆಡಿ ಹಿರೋನೇ,,ನೀವು ನೆಡೆದು ಬಂದಿರುವ ದಾರಿ,,ನಿಮ್ಮ ಲೈಫ್ ಸ್ಟೈಲ್,,ನೀವು ತೆಗೆದುಕೊಂಡ ರಿಸ್ಕ್ ಡಿಸಿಷನ್ಸ್,, ನಿಮ್ಮ 100cr ರೀತಿಯ ಕನಸನ್ನು ಕಾರ್ಯರೂಪಕ್ಕೆ ತರುವ ರೀತಿ ನಿಮ್ಮೊಳಗಿರುವ ಹಿರೋನನ್ನು ಗುರುತಿಸಿದೆ… ಆದರೂ ಕ್ಯಾರಾವ್ಯಾನ್ ನಲ್ಲೇ ಕಥೆ ಕೇಳಿ..ಶೂಟಿಂಗ್ ಗೆ ಸತಾಯಿಸಿ..ಡೇಟ್ಸ್ ಗಾಗಿ ನಾವೇ ಪರದಾಡುವಂತೆ ದೊಡ್ಡ ಸೂಪರ್ ಸ್ಟಾರ್ ಆಗಿ ಬೆಳೆಯುವಂತಾಗಲಿ.. ನಿಮ್ಮ ಶ್ರಮ,,ಕನಸು ,, ಅದೃಷ್ಟಗಳೆಲ್ಲಾ ಒಟ್ಟೂಗೂಡಲಿ.. ನಾರಾಯಣನ ದಯೆ ನಿನ್ನ ಮೇಲಿರಲಿ…’ ಎಂದಿದ್ದಾರೆ.

ತಲೆಯಲ್ಲಿ ನಿರ್ದೇಶಕ

ನಿಜವಾಗಿಯು ನಿರ್ಮಾಪಕ

ನಿಜ ಜೀವನದ ನಾಯಕ

ಆಗಾಗ ವಿತರಕ

ಸ್ನಾನಕೊಠಡಿಯ ಗಾಯಕ…

ಅವತಾರ ಪುರುಷ ಚಿತ್ರದ ಬೆನ್ನೆಲುಬು ಪುಷ್ಕರ್ ರವರಿಗೆ “ಹುಟ್ಟುಹಬ್ಬದ ಶುಭಾಶಯಗಳು ” ಅಣ್ಣನ ತರ ಸದಾ ಜೊತೆಗಿರು….’ ಎಂದು ಶುಭ ಹಾರೈಸಿದ್ದಾರೆ. ನಮ್ಮ ಬಾಲ್ಕನಿ ನ್ಯೂಸ್ ಕಡೆಯಿಂದಲೂ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.

ತುಳಸಿ  ಟೀ ತಯಾರಿಸುವುದು ಹೇಗೆ?

#pushkarmallikarjunaiah #pushkarmallikarjunaiahBirthday #Simple suni #AvatharPurusha

Tags