ಸುದ್ದಿಗಳು

ಚಂದನವನದ ಜನಪ್ರಿಯ ನಿರ್ಮಾಪಕನಿಗೆ ಕೊಲೆ ಬೆದರಿಕೆ

ಸ್ಯಾಂಡಲ್ ವುಡ್ ನಿರ್ಮಾಪಕ ಶೈಲೇಂದ್ರ ಬಾಬು

ಬೆಂಗಳೂರು, ಜ.11: ಕನ್ನಡದ ಸಿನಿಮಾ ರಂಗದಲ್ಲಿ ನಿರ್ಮಾಪಕರಿಗೆ, ನಿರ್ದೇಶಕರಿಗೆ ಹಾಗೂ ನಟಿ ನಟಿಯರಿಗೆ ಹಣ ಪಡೆದು ವಂಚನೆ ಮಾಡೋದು ಇಂದು ನಿನ್ನೆಯದಲ್ಲ. ಈಗಾಗಲೇ ಸಾಕಷ್ಟು ವಂಚನೆ ಪ್ರಕರಣಗಳು ಕೋರ್ಟ್ ಮೆಟ್ಟಿಲೇರಿದ್ದೂ ಉಂಟು. ಇದೀಗ ನಿರ್ಮಾಪಕ ಶೈಲೆಂದ್ರ ಬಾಬುಗೆ ಕೋಟಿ ಕೋಟಿ ವಂಚನೆಯಾಗಿದೆ.

ಕೊಲೆ ಬೆದರಿಕೆ ಹಾಕಿದ ಆರೋಪಿ

ಬಿ.ಎಚ್.ಬಸವರಾಜು ಎಂಬುವರಿಂದ ಶೈಲೇಂದ್ರ ಬಾಬು ಕನ್ನಡ ಚಿತ್ರ ನಿರ್ಮಾಪಕರಿಗೆ ವಂಚನೆಯಾಗಿದೆಯಂತೆ. ಬಿ.ಎಚ್.ಬಸವರಾಜು ಗೆ ಶೈಲೇಂದ್ರ ಬಾಬು ಸಾಲ ನೀಡಿದ್ದರಂತೆ. ಆಸ್ತಿ ಖರೀದಿ ಮಾಡಬೇಕೆಂದು ಎರಡು ಕೋಟಿ ಸಾಲ ಪಡೆದಿದ್ದ ಬಸವರಾಜು, ಎರಡು ಮೂರು ತಿಂಗಳಲ್ಲಿ ಹಣ ವಾಪಸ್ ನೀಡೋದಾಗಿ ಹೇಳಿಕೆ ನೀಡಿದ್ದಾರೆ. ನಂತರ ಹಣ ವಾಪಸ್ಸು ಕೇಳಲು ಕಾಫಿ ಕೆಫೆ ಬಳಿ ಶೈಲೇಂದ್ರ ಬಾಬು ಬಸವರಾಜು ಅವರನ್ನು ಕರೆಸಿಕೊಂಡು ಹಣ ಕೇಳಿದ್ದಾರೆ. ಈ ವೇಳೆ ಬಸವರಾಜು ಹಾಗೂ ಸಹಚರರು ಶೈಲೇಂದ್ರ ಬಾಬುಗೆ ಕೊಲೆ ಬೆದರಿಕೆ ಹಾಕಿದ್ದಾರೆ.

ಪೊಲೀಸ್ ಠಾಣೆಯಲ್ಲಿ ಪ್ರಕರಣ

ಇನ್ನು ಇದರಿಂದ ಬೇಸತ್ತ ನಿರ್ಮಾಪಕರು ಅಶೋಕನಗರ ಠಾಣೆಗೆ ದೂರು ದಾಖಲು ಮಾಡಿದ್ದಾರೆ. ಐಪಿಸಿ ೫೦೬,  ೪೨೦ ಹಾಗೂ ೩೪ ರ ಆಡಿ ಇದೀಗ ಪ್ರಕರಣ ದಾಖಲಾಗಿದೆ. ಇನ್ನು ಪೊಲೀಸರು ಕೂಡ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

#sandalwood #producers #shailendrababu #balkaninews

Tags