ಸುದ್ದಿಗಳು

ಮುಹೂರ್ತ ಆಚರಿಸಿಕೊಂಡ ಅಜೇಯ್ ರಾವ್ ಸಿನಿಮಾ

ರಾಯಲ್ ಸ್ಟಾರ್ ಅಜೇಯ್ ರಾವ್ ನಟಿಸುತ್ತಿರುವ ಹೊಸ ಚಿತ್ರದ ಮುಹೂರ್ತ ನಿನ್ನೆ ಹೊಸಕೆರೆಹಳ್ಳಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ದೇವಾಲಯದಲ್ಲಿ ನಡೆಯಿತು. ಅಂದ ಹಾಗೆ ಈ ಚಿತ್ರಕ್ಕೆ ಇನ್ನೂ ಟೈಟಲ್ ಅಂತಿಮವಾಗದ ಕಾರಣ, ‘ಪ್ರೊಡಕ್ಷನ್ ನಂ 7’ ಹೆಸರಿನಲ್ಲಿ ಮುಹೂರ್ತ ನೆರವೇರಿಸಲಾಗಿದೆ.

ಈಗಾಗಲೇ ‘ಚಮಕ್’, ‘ಅಯೋಗ್ಯ’ ಹಾಗೂ ‘ಬೀರ್ ಬಲ್’ ಚಿತ್ರಗಳನ್ನು ನಿರ್ಮಿಸಿದಂತ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಸಂಸ್ಥೆಯವರು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಈ ಚಿತ್ರದ ಮೂಲಕ ಜಾಕಿ ತಿಮ್ಮೆಗೌಡ ನಿರ್ದೇಶಕರಾಗಿ ಪರಿಚಯವಾಗುತ್ತಿದ್ದಾರೆ.

ಇನ್ನು ಚಿತ್ರಕ್ಕೆ ನಾಯಕಿಯಾಗಿ ಕರಿಯಪ್ಪನ ಸೊಸೆ ಸಂಜನಾ ಆನಂದ್ ನಟಿಸುತ್ತಿದ್ದಾರೆ. ಉಳಿದಂತೆ ,ಶರತ್ ಲೋಹಿತಾಶ್ವ , ಗಿರಿ, ಅರುಣಾ ಬಾಲರಾಜ್, ಮುನಿರಾಜ್ ,ತಬಲ ನಾಣಿ ,ಪ್ರಮೋದ್ ಶೆಟ್ಟಿ ಸೇರಿದಂತೆ ಅನೇಕರು ಮುಖ್ಯ ಭೂಮಿಕೆಯಲ್ಲಿದ್ದಾರೆ.

ಇನ್ನು ಚಿತ್ರಕ್ಕೆ ಚಿತ್ರದ ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ರವರು ಕ್ಲಾಪ್ ಮಾಡಿದರೆ, ಯೋಗಾನಂದ್ ರವರು ಕ್ಯಾಮರ ಚಾಲನೆ ಮಾಡಿದರು, ನಿರ್ದೇಶಕರಾದ ಜಾಕಿ ರವರು ಆಕ್ಷನ್ ಕಟ್ ಹೇಳುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಚಿತ್ರತಂಡದವರು, ಅಭಿಮಾನಿಗಳು ಸೇರಿದಂತೆ ಸಿನಿಮಾಮಂದಿಯರು ಸಹ ಉಪಸ್ಥಿತರಿದ್ದರು.

ಈ ಚಿತ್ರವು ಕೌಟುಂಬಿಕ ಮತ್ತು ಹಾಸ್ಯ ಪ್ರಧಾನ ಕಥಾಹಂದರವನ್ನು ಒಳಗೊಂಡಿದ್ದು, ಹಳ್ಳಿಯ ಹಿನ್ನೆಲೆಯಲ್ಲಿ ಸಿನಿಮಾದ ಕಥೆ ಸಾಗಲಿದೆ. ಇದಕ್ಕೆ ಸರಿಹೊಂದುವ ಶೀರ್ಷಿಕೆಯನ್ನು ಚಿತ್ರತಂಡದವರು ಶೀಘ್ರದಲ್ಲಿಯೇ ಪ್ರಕಟಿಸಲಿದ್ದಾರೆ. ಇದೇ 10ರಿಂದ ಮೊದಲ ಹಂತದ ಚಿತ್ರೀಕರಣ ಆರಂಭಗೊಳ್ಳಲಿದೆ.

 

#ajaiarao, #movie, #muhurtha, #news, #balkaninews #filmnews, #kannadasuddigalu, #sanjana #crystalparkcinemas

Tags