ಸುದ್ದಿಗಳು

ದ್ವಿತೀಯ ಪಿಯುಸಿಯಲ್ಲಿ ನಟ ಪ್ರೇಮ್ ಮಗಳ ಸಾಧನೆ!!

ಬೆಂಗಳೂರು,ಏ.15:ಇಂದು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಹೊರಬಂದಿದೆ.. ಯಾರು ಎಷಷ್ಟು ಅಂಕ ಗಳಿಸಿದ್ದಾರೆ, ಯಾರು ರಾಜ್ಯಕ್ಕೆ ಮೊದಲ ಸ್ಥಾನ ? ನಮ್ಮ ಪಕ್ಕದ ಮನೆಯವರ ಮಗ ಅಥವಾ ಮಗಳಿಗೆ ಎಷ್ಟುಅಂಕ ಬಂದಿದೆ ಹೀಗೆ ಕುತೂಹಲ ಇದ್ದೇ ಇರುತ್ತದೆ… ಇಂದು ಫಲಿತಾಂಶ ಹೊರಬಿದ್ದಿದ್ದು ಎಲ್ಲರೂ ಪಿಯುಸಿ ವಿದ್ಯಾರ್ಥಿಗಳು ಕಾತುರದಿಂದ ತಮ್ಮ ಫಲಿತಾಂಶ ನೋಡುತ್ತಿದ್ದಾರೆ..

ಪ್ರೇಮ್ ಮಗಳು ದ್ವಿತೀಯ ಪಿಯುಸಿಯಲ್ಲಿ ರ್ಯಾಂಕ್

ಈಗ ನಟ ನೆನಪಿರಲಿ ಪ್ರೇಮ್ ಪುತ್ರಿ ಕೂಡ ದ್ವಿತೀಯ ಪಿಯುಸಿ ಓದುತ್ತಿದ್ದು, ಆಕೆಯ ಫಲಿತಾಂಶ ಕೂಡ ಬಂದಿದೆ. ಹೌದು ನಟ ಪ್ರೇಮ್ ಅವರ ಮಗಳು ಕೂಡ ದ್ವಿತೀಯ ಪಿಯುಸಿ ಓದುತ್ತಿದ್ದು ಇಂದು ಈಗ ಅವರ ಮಗಳ ಫಲಿತಾಂಶ ಬಂದ ಕೂಡಲೇ ಪ್ರೇಮ್ ತಮ್ಮ ಮಗಳ ಬಗ್ಗೆ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

ಪ್ರೇಮ್ ಮಗಳು ಅಮೃತಾ ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದು, ಪರೀಕ್ಷೆಯಲ್ಲಿ 91 % ತೆಗೆದುಕೊಂಡಿದ್ದಾರೆ. ಇನ್ನು ಮಗ 8 ನೇ ತರಗತಿಯಲ್ಲಿ ಓದುತ್ತಿದ್ದು ಮೂರನೇ ರ್ಯಾಂಕ್ ಬಂದಿದ್ದಾರೆ.. ಇದನ್ನು ಪ್ರೇಮ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂತಸ ವ್ಯಕ್ತ ಪಡಿಸಿದ್ದಾರೆ

ಬಡವರ ಬಾದಾಮಿ ‘ಕಡಲೇಕಾಯಿ’ಯ ಆರೋಗ್ಯ ಪುರಾಣ

#balkaninews #sandalwood #prem #daughter #puc

Tags