ಸುದ್ದಿಗಳು

ಈ ಚಿತ್ರದ ಶೀರ್ಷಿಕೆ ಕೇಳಿ ಪುನೀತ್ ಭಯಗೊಂಡಿದ್ದರಂತೆ!!

'ನಟಸಾರ್ವಭೌಮ' ಹೆಸರಿಡುವುದು ನಿರ್ದೇಶಕರು ಮತ್ತು ನಿರ್ಮಾಪಕರ ನಿರ್ಧಾರ

ಬೆಂಗಳೂರು,ಸೆ,12: ಸ್ಯಾಂಡಲ್‌ ವುಡ್‌ ನ ಪವರ್ ಸ್ಟಾರ್ ಪುನೀತ್ ರಾಜ್‌ ಕುಮಾರ್ ಸಿನಿಮಾ ಹಾಗೆ ಏನಾದರೂ ಒಂದು ವಿಶೇಷತೆಗಳಿಂದ ಪ್ರೇಕ್ಷಕರ ಗಮನಸೆಳೆಯುತ್ತಲೇ ಇರುತ್ತೆ.. ಅಪ್ಪು ಅಭಿನಯದಲ್ಲಿ ಮೂಡಿ ಬರುತ್ತಿರುವ ಬಹು ನಿರೀಕ್ಷಿತ ಸಿನಿಮಾ ನಟಸಾರ್ವಭೌಮ. ಕನ್ನಡ ಸಿನಿಮಾ ಲೋಕದಲ್ಲಿ ಡ್ಯಾನ್ಸಿಗೆ ಸಮನಾರ್ಥಕ ಪದವೆಂದರೆ ಪವರ್ ಸ್ಟಾರ್ ಪುನೀತ್ ರಾಜ್‌ ಕುಮಾರ್..

ನಾನು ಒಪ್ಪಿಕೊಳ್ಳಲಿಲ್ಲ..

ಈ ಕುರಿತು ಮಾತನಾಡುವ ಅಪ್ಪು, ಚಿತ್ರಕ್ಕೆ ‘ನಟಸಾರ್ವಭೌಮ’ ಹೆಸರಿಡುವುದು ನಿರ್ದೇಶಕರು ಮತ್ತು ನಿರ್ಮಾಪಕರ ನಿರ್ಧಾರ. ಚಿತ್ರತಂಡದವರು ಮೊದಲು ನನಗೆ ಶೀರ್ಷಿಕೆ ಹೇಳಿದಾಗ, ನಾನು ಒಪ್ಪಿಕೊಳ್ಳಲಿಲ್ಲ. ಕಾರಣ ಇಷ್ಟೆ, ಆ ಹೆಸರಿಗೆ ತುಂಬಾ ತೂಕ ಇದೆ. ಹಾಗಾಗಿ ಇಂಥದ್ದೊಂದು ತೂಕದ ಹೆಸರು ಬೇಕಾ ಎಂದನಿಸಿತ್ತು. ಆದರೆ, ನಿರ್ದೇಶಕರ ಮಾತು ಅಂತಿಮ. ಅಂಥದ್ದೊಂದು ಶೀರ್ಷಿಕೆ ಬಗ್ಗೆ ಸಂತೋಷವಿದೆಯಾದರೂ, ಭಯವೂ ಇದೆ. ಇದು ಕೇವಲ ‘ನಟಸಾರ್ವಭೌಮ’ ಶೀರ್ಷಿಕೆ ಬಗ್ಗೆ ಅಷ್ಟೇ ಅಲ್ಲ, ‘ರಾಜಕುಮಾರ’ ಅಂತ ಹೆಸರು ಇಟ್ಟಾಗಲೂ ಯಾಕೆ ಇದೆಲ್ಲಾ ಮಾಡುತ್ತಾರೆ ಅಂತ ಅನಿಸುತಿತ್ತು’ ಎನ್ನುತ್ತಾರೆ ಅಪ್ಪು.

ಬಹುದೊಡ್ಡ ತಾರಾಗಣ

ಪವನ್ ಒಡೆಯರ್ ಕಥೆ ಮತ್ತು ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಕ್ಕೆ ರಾಕ್‌ಲೈನ್ ವೆಂಕಟೇಶ್ ಬಂಡವಾಳ ಹೂಡುತ್ತಿದ್ದಾರೆ.. ಡಿ.ಇಮ್ಮಾನ್ ಈ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಿದರೆ, ಬಾಹುಬಲಿ ಖ್ಯಾತಿಯ ಫೈಟಿಂಗ್ ಮಾಸ್ಟರ್ ಪೀಟರ್ ಹೈನ್ಸ್ ಪುನೀತ್ ಅವರ ಸಾಹಸ ದೃಶ್ಯಗಳನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಪುನೀತ್‌ ಗೆ ಜೋಡಿಯಾಗಿ ಸ್ಯಾಂಡಲ್‌ ವುಡ್‌ ನ ಡಿಂಪಲ್ ಕ್ವೀನ್ ರಚಿತಾ ರಾಮ್ ಕಾಣಿಸಿಕೊಳ್ಳುತ್ತಿದ್ದಾರೆ.. ಈ ಹಿಂದೆ ಚಕ್ರವ್ಯೂಹ ಸಿನಿಮಾದಲ್ಲಿ ಜೋಡಿಗಳಾಗಿ ಮಿಂಚಿದ್ದ ಈ ಜೋಡಿ ಮತ್ತೆ ಇಲ್ಲಿ ಒಂದಾಗಿದೆ..  ಹಿರಿಯ ನಟಿ ಬಿ. ಸರೋಜ ದೇವಿ ಅವರು ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

 

 

 

Tags

Related Articles