ಸುದ್ದಿಗಳು

ಪುನೀತ್ ಮನೆಗೆ ಡಿಕೆಶಿ ಭೇಟಿ…!

ಬೆಂಗಳೂರು, ಜ.04: ನಿನ್ನೆಯಿಂದ ಚಂದನವನದಲ್ಲಿ ಐಟಿ ದಾಳಿ ಮುಂದುವರೆದಿದೆ. ಈ ಬೆನ್ನಲ್ಲೇ ಡಿ ಕೆ ಶಿವಕುಮಾರ್ ಪುನೀತ್ ಮನೆ ಬಳಿ ಕಾಣಿಸಿಕೊಂಡಿದ್ದಾರೆ.

ಮುಂದುವರೆದ ಪರಿಶೀಲನೆ

ನಿನ್ನೆಯಿಂದ ಸ್ಯಾಂಡಲ್ ವುಡ್ ನಲ್ಲಿ ಸಿನಿಮಾಗಳಿಗಿಂತ ಹೆಚ್ಚಾಗಿ ಆಗುತ್ತಿರುವ ಸುದ್ದಿ ಐಟಿ ದಾಳಿ. ನಿನ್ನೆ ಬೆಳಗ್ಗೆಯಿಂದಲೂ ಕೂಡ ಐಟಿ ದಾಳಿ ಮುಂದುವರೆದಿದೆ. ಈಗಾಗಲೇ ನಟ, ನಿರ್ಮಾಪಕರ ಮನೆಯಲ್ಲಿ ದಾಖಲೆಗಳು, ಕಡತಗಳು ಕೂಡ ಸಿಕ್ಕಿದ್ದಾವೆ ಎನ್ನಲಾಗಿದೆ‌. ಅಷ್ಟೆ ಅಲ್ಲ ಫಾರಿನ್ ಅಕೌಂಟ್ ಗಳು ಕೂಡ ಸಿಕ್ಕಿವೆ ಎನ್ನಲಾಗಿದೆ‌. ಪುನೀತ್ ಮನೆಯಲ್ಲಿ ಕೂಡ ಕೆಲವೊಂದು ದಾಖಲೆಗಳು ಸಿಕ್ಕಿವೆ ಎನ್ನಲಾಗಿದೆ.

ಇನ್ನು ಮುಗಿದಿಲ್ವಾ ಎಂದ ಡಿಕೆಶಿ

ಹೌದು, ನಿನ್ನೆಯಿಂದಲೂ ಕೂಡ ಪುನೀತ್ ರಾಜ್‍ಕುಮಾರ್ ಮನೆಯಲ್ಲಿ ಐಟಿ ಪರಿಶೀಲನೆ ನಡೆಸಲಾಗುತ್ತಿದೆ. ನಿನ್ನೆ ತಡ ರಾತ್ರಿ ಕೂಡ ಪರಿಶೀಲನೆ ನಡೆದಿದೆ. ಈ ವೇಳೆ ಡಿಕೆ ಶಿವಕುಮಾರ್, ಪುನೀತ್ ಮನೆ ಬಳಿ ಬಂದಿದ್ದಾರೆ. ತಮ್ಮ ಕಾರಿನಿಂದ ಇಳಿದ ಬಳಿಕ ಇನ್ನೂ ಮುಗಿದಿಲ್ವಾ ಅಂತ ಮಾಧ್ಯಮದವರನ್ನು ಪ್ರಶ್ನಿಸಿದ್ದಾರೆ. ನಂತರ ಏನೂ ಆಗೋದಿಲ್ಲ ತಲೆ ಕೆಡಿಸಿಕೊಳ್ಳಬೇಡಿ ಅಂತ ಅಪ್ಪು ಅಭಿಮಾನಿಗಳಲ್ಲಿ ಧೈರ್ಯ ತುಂಬಿದ್ದಾರೆ.

Tags

Related Articles