ಸುದ್ದಿಗಳು

ಸಮಾಜ ಸೇವೆಗೆ ಮುಂದಾದ ಪವರ್ ಸ್ಟಾರ್ ಪುತ್ರಿ ಧೃತಿ

ನಟ ಸಾರ್ವಭೌಮ ಡಾ. ರಾಜ್ ಕುಮಾರ್ ನೇತ್ರದಾನ ಮಾಡಿ ಎಲ್ಲರಿಗೂ ಮಾದರಿಯಾಗಿದ್ದರು. ಅವರಂತೆಯೇ ಅವರ ಮಕ್ಕಳು ಸಹ ದೇಹದಾನ ಮಾಡಿದ್ದಾರೆ. ಇದೀಗ ಹೊಸ ವಿಷಯವೇನೆಂದರೇ ತಮ್ಮ ತಾತ ಹಾಗೂ ತಂದೆ, ದೊಡ್ಡಪ್ಪನವರ ಹಾದಿಯಲ್ಲಿ ಪುನೀತ್ ರಾಜ್ ಕುಮಾರ್ ರವರ  ಪುತ್ರಿ ಧೃತಿ ಸಮಾಜ ಸೇವೆಗೆ ಮುಂದಾಗಿದ್ದಾರೆ.

ಹೌದು, ಪುನೀತ್ ರಾಜ್ ಕುಮಾರ್ ತೊಂದೆರೆಯಲ್ಲಿರುವವರಿಗೆ ಸಹಾಯ ಮಾಡುತ್ತಾರೆ. ಹಾಗೂ ಟ್ರಸ್ಟ್ ಗಳನ್ನು ಮಾಡಿ ಯಾರಿಗೂ ತಿಳಿಯದೇ ಅವರಿಗೆ ನೆರವಾಗುತ್ತಾರೆ. ಇದೀಗ ತಂದೆಯ ಹಾದಿಯಲ್ಲಿಯೇ ಮಗಳು ಧೃತಿ ಕೂಡ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದು, ಕಷ್ಟದಲ್ಲಿರುವವರಿಗೆ ನೆರವಾಗುತ್ತಿದ್ದಾರೆ.

ಡಾ. ರಾಜ್ ಕುಮಾರ್ ರವರು ಶುರುಮಾಡಿದ್ದ ನೇತ್ರದಾನ ಅಭಿಯಾನ ಇಂದಿಗೂ ಕೂಡ ಸಾವಿರಾರು ಅಂಧರ ಬಾಳಿನಲ್ಲಿ ಬೆಳಕು ಮೂಡಿಸಿದೆ. ಇದೀಗ ಈ ಅಭಿಯಾನಕ್ಕೆ ಪುನೀತ್ ಪುತ್ರಿ ಧೃತಿ ಕೂಡ ಕೈ ಜೋಡಿಸಿದ್ದಾರೆ. ಕಣ್ಣಿಲ್ಲದೇ ಎಷ್ಟೋ ಜನರು ಕತ್ತಲೆಯಲ್ಲಿ ಮುಳುಗಿದ್ದಾರೆ. ಇವರಿಗೆ ಕಣ್ಣು ಬರಿಸಿ ಅವರ ಜೀವನದಲ್ಲಿ ಬೆಳಕು ಮೂಡಿಸುವ ಸಲುವಾಗಿ,  ದೃಷ್ಟಿಹೀನರಿಗೆ ಚಿಕಿತ್ಸೆಕೊಡಿಸುವ ಪ್ರಯತ್ನವನ್ನು ಪುನೀತ್ ಪುತ್ರಿ ಆರಂಭಿಸಿದ್ದಾರೆ.

ಇದಕ್ಕಾಗಿ ಧೃತಿ ಅಭಿಯಾನವನ್ನು ಶುರುಮಾಡಿದ್ದಾರೆ. ಈ ಅಭಿಯಾನದಲ್ಲಿ ಯಾರು ಬೇಕಾದರೂ ಸಹಾಯ ಮಾಡಬಹುದು ಎಂದಿದ್ದಾರೆ. ಇದರಿಂದ ಬಂದ ಹಣದ ಜೊತೆಗೆ  ಚಿಕಿತ್ಸೆಗೆ ಬೇಕಾಗುವ  ಪೂರ್ಣ ವೆಚ್ಚವನ್ನು ಧೃತಿ ಭರಿಸಲು ಸಿದ್ದರಾಗಿದ್ದಾರೆ ಎನ್ನಲಾಗಿದೆ. ಈ ಚಿಕ್ಕ ವಯಸ್ಸಿನಲ್ಲಿ ದಿಟ್ಟ ಹೆಜ್ಜೆಯನ್ನು ಮುಂದಿಟ್ಟಿರುವ ಇವರಿಗೆ ಎಲ್ಲೆಡೆಯಿಂದಲೂ ಮೆಚ್ಚುಗೆಯ ಮಹಾಪೂರ ವ್ಯಕ್ತವಾಗುತ್ತಿದೆ.

Related image

ಯಾವ ಗಾಸಿಪ್ ಗಳಿಗೂ ಕಿವಿಗೊಡದೆ ಸೋಶಿಯಲ್ ಮೀಡಿಯಾಗಳಲ್ಲಿ ಮುನ್ನುಗ್ಗುತ್ತಿರುವ ಕಿರಿಕ್ ಬೆಡಗಿ

#puneethrajkumar #puneethrajkumarmovies #sandalwood #kannadamovies #balkaninews #puneethrajkumardaughters

Tags