ಸುದ್ದಿಗಳು

ಪುನೀತ್ ಕೈಯಲ್ಲಿವೆ ಸಾಲು ಸಾಲು ಸಿನಿಮಾಗಳು

ಬೆಂಗಳೂರು, ಮಾ.18:

ಪುನೀತ್ ರಾಜ್‌ಕುಮಾರ್ ಯಾವಾಗಪ್ಪಾ ಫ್ರೀ ಆಗ್ತಾರೆ ಅನ್ನುವಂತಾಗಿದೆ. ಯಾಕೆಂದರೆ ಒಂದಾದ ಮೇಲೊಂದರಂತೆ ಸಿನಿಮಾ ಬ್ಯುಸಿಯಲ್ಲಿದ್ದಾರೆ ಈ ನಟ. ಸದ್ಯ ತಮ್ಮ ಕೈಯಲ್ಲಿ ನಾಲ್ಕೈದು ಸಿನಿಮಾಗಳನ್ನು ಇಟ್ಟುಕೊಂಡಿದ್ದಾರೆ. ಹಾಗಾಗಿ ಇನ್ನೂ ಎರಡು ವರ್ಷದವರೆಗೂ ಅಪ್ಪು ಫ್ರೀ ಆಗಲ್ಲ ಅನ್ನೋದು ಹಲವಾರು ಮಂದಿಯ ಮಾತು.

ನಾಲ್ಕೈದು ಸಿನಿಮಾಗಳಲ್ಲಿ ಪುನೀತ್

ಹೌದು, ಸದ್ಯ ಪುನೀತ್ ರಾಜ್‌ ಕುಮಾರ್ ‘ಯುವರತ್ನ’, ‘ಜೇಮ್ಸ್’ ಸೇರಿದಂತೆ ನಾಲ್ಕೈದು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರಂತೆ. ‘ನಟಸಾರ್ವಭೌಮ’ ಮುಗಿದ ಬೆನ್ನಲ್ಲೇ ಇದೀಗ ‘ಯುವರತ್ನ’ ಸಿನಿಮಾ ಶೂಟಿಂಗ್ ಆರಂಭವಾಗಿದೆ. ಇದಾದ ನಂತರ ಈ ನಟ ‘ಜೇಮ್ಸ್’ ಸಿನಿಮಾದಲ್ಲಿ ಬ್ಯುಸಿಯಾಗಲಿದ್ದಾರಂತೆ. ಇನ್ನು ಹೆಸರಿಡದ ಮೂರ‍್ನಾಲ್ಕು ಸಿನಿಮಾದಲ್ಲೂ ಅಪ್ಪು ನಿರತರಾಗಿದ್ದಾರೆ ಎನ್ನಲಾಗಿದೆ.

ಪೌರಾಣಿಕ ಸಿನಿಮಾದಲ್ಲಿ ಅಪ್ಪು..?

ಇವೆಲ್ಲದರ ನಡುವೆ ಪುನೀತ್ ಪೌರಾಣಿಕ ಸಿನಿಮಾವೊಂದದರಲ್ಲಿ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಸಾಯಿಕೃಷ್ಣ ಅವರ ನಿರ್ದೇಶನದಲ್ಲಿ ಸಿನಿಮಾ ಬರಲಿದೆ ಅನ್ನೋದು ಹಲವರ ಮಾತು. ಇದೀಗ ಈ ಸಿನಿಮಾ ಕಥೆಯನ್ನು ಪುನೀತ್ ಗೆ ಕೇಳಿಸಿಲ್ಲ. ಆದರೆ ಸಿನಿಮಾ ಮಾಡೋದು ಪಕ್ಕಾ ಎನ್ನುತ್ತಿವೆ ಮೂಲಗಳು. ಸದ್ಯ ಮೂಲಗಳ ಪ್ರಕಾರ ಪುನೀತ್ ಇನ್ನೂ ಎರಡು ವರ್ಷ ಯಾವ ಹೊಸ ಪ್ರಾಜೆಕ್ಟ್ ಗೂ ಸಹಿ ಹಾಕಲ್ಲ ಎಂದು ವರದಿಯಾಗಿದೆ.

ಪ್ರೇಕ್ಷಕರನ್ನು ಮತ್ತೆ ರಂಜಿಸಲು ವೀಕೆಂಡ್ ವಿತ್ ರಮೇಶ್ ಜೊತೆಗೆ ಬರುತ್ತಿದ್ದಾರೆ ರಮೇಶ್ ಅರವಿಂದ್

#balkaninews #kannadamovies #puneethrajkumar #puneethrajkumartwitter #puneethrajkumarmovielist

Tags