ಸುದ್ದಿಗಳು

ಪುನೀತ್ ಮುಂದಿನ ಪ್ರಾಜೆಕ್ಟ್ ಗಳು

ಬೆಂಗಳೂರು, ಫೆ.12:

ಪವರ್ ಸ್ಟಾರ್  ಪುನೀತ್ ರಾಜ್ ಕುಮಾರ್ ಒಂದು ಸಿನಿಮಾ ಬಿಡುಗಡೆಯಾಗುವಷ್ಟರಲ್ಲಿ ಇನ್ನೊಂದು ಸಿನಿಮಾಗೆ ಬುಕ್ ಆಗಿರ‍್ತಾರೆ ಅನ್ನೋದು ಹಲವರ ಮಾತು, ಶಿವರಾಜ್ ಕುಮಾರ್ ಅಂತೇ ಇವರು ಕೂಡ ಸುಮ್ಮನೆ ಇರುವವರಲ್ಲ. ಈಗಾಗಲೇ ‘ನಟಸಾರ್ವಭೌಮ’ ಸಿನಿಮಾ ಬಿಡುಗಡೆಯಾಗಿ ಯಶಸ್ವಿಯತ್ತ ಸಾಗುತ್ತಿದೆ. ಇದರ ನಡುವೆ ಇವರ ಕೈಯಲ್ಲಿ ಒಂದಿಷ್ಟು ಸಿನಿಮಾಗಳಿದ್ದರೆ, ಇವರ ನಿರ್ಮಾಣ ಸಂಸ್ಥೆಗಳಲ್ಲಿ ಸಿನಿಮಾಗಳು ತೆರೆಗೆ ಬರಲು ರೆಡಿಯಾಗಿವೆ.

ಪುನೀತ್ ಕೈಯಲ್ಲಿವೆ ಮೂರ‍್ನಾಲ್ಕು ಸಿನಿಮಾಗಳು

ಹೌದು, ಪುನೀತ್ ಕೈಯಲ್ಲಿ ಸದ್ಯ ಸಾಲು ಸಾಲು ಸಿನಿಮಾಗಳು ಇವೆ. ‘ಯುವರತ್ನ’, ‘ಜೇಮ್ಸ್’ ಸೇರಿದಂತೆ ಹಲವು ಸಿನಿಮಾಗಳಿಗೆ ಪುನೀತ್ ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ ಈ ಸಿನಿಮಾಗಳು ಇನ್ನೇನು ಶೂಟಿಂಗ್ ಪ್ರಾರಂಭವಾಗಬೇಕಿದೆ. ‘ಯುವರತ್ನ’ ಸಿನಿಮಾವನ್ನು ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿದ್ರೆ, ಇತ್ತ ‘ಜೇಮ್ಸ್’ ಸಿನಿಮಾವನ್ನು ಬಹದ್ದೂರ್ ನಿರ್ದೇಶನ ಮಾಡಿದ್ದ ಚೇತನ್ ನಿರ್ದೇಶನ ಮಾಡುತ್ತಿದ್ದಾರೆ. ಈ ಇಬ್ಬರು ನಿರ್ದೇಶಕರು ಕೂಡ ಯಶಸ್ವಿ ಸಿನಿಮಾಗಳನ್ನು ಕೊಟ್ಟಿರೋದ್ರಿಂದ ಈ ಎರಡು ಸಿನಿಮಾಗಳ ಮೇಲೂ ಸಾಮಾನ್ಯವಾಗಿ ನಿರೀಕ್ಷೆ ಹೆಚ್ಚಿದೆ.

ನಿರ್ಮಾಣ ಸಂಸ್ಥೆಯಲ್ಲೂ ಸಾಲು ಸಾಲು ಸಿನಿಮಾಗಳು

ಒಂದೆಡೆ  ಪುನೀತ್ ಅಭಿನಯ ಮಾಡುತ್ತಿದ್ದಾರೆ. ಇವರ ನಿರ್ಮಾಣ ಸಂಸ್ಥೆ ಪಿಆರ್‌ ಕೆ ಅಡಿಯಲ್ಲೂ ಕೂಡ ಸಾಲು ಸಾಲು ಸಿನಿಮಾಗಳಿವೆ. ಹೌದು, ಈಗಾಗಲೇ ಚಿತ್ರೀಕರಣ ಮುಗಿಸಿರುವ ‘ಕವಲು ದಾರಿ’ ಇನ್ನೇನು ಬಿಡುಗಡೆಗೆ ರೆಡಿಯಾಗಿದೆ. ಇನ್ನು ‘ಮಾಯಾಬಜಾರ್’, ಡ್ಯಾನೀಶ್ ಸೇಠ್ ಅಭಿನಯ ಮಾಡುತ್ತಿರುವ ಸಿನಿಮಾ ಕೂಡ ಇವರ ನಿರ್ಮಾಣ ಸಂಸ್ಥೆಯದ್ದೇ. ಅಷ್ಟೇ ಅಲ್ಲ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್ ನಟಿಸುತ್ತಿರುವ ಹೆಸರಿಡದ ಚಿತ್ರ ಕೂಡ ಪಿಆರ್‌ಕೆ ನಿರ್ಮಾಣ ಸಂಸ್ಥೆಯದ್ದೇ. ಒಟ್ಟಿನಲ್ಲಿ ಒಂದಲ್ಲ ಒಂದು ಸಿನಿಮಾಗಳ ಮೂಲಕ ನಿರ್ಮಾಣ ಸಂಸ್ಥೆಯ ಮೂಲಕ ಸಾಕಷ್ಟು ಪ್ರಾಜೆಕ್ಟ್ ಗಳನ್ನು ಈ ನಟ ಕೈಯಲ್ಲಿಡಿದಿದ್ದಾರೆ.

‘ಮಾಲ್ಗುಡಿ ಡೇಸ್’ ಹೆಸರಿನಲ್ಲಿ ಸಿನಿಮಾ ಶುರು: ಫಸ್ಟ್ ಲುಕ್ ಬಿಡುಗಡೆ ಮಾಡಿದ ಪುನೀತ್ ರಾಜ್ ಕುಮಾರ್

#puneethrajkumar #puneethrajkumarmovies #balkaninews #puneethrajkumarupcomingmovies #puneethfans #sandalwood #kannadamovies

Tags