ಸುದ್ದಿಗಳು

ರಾಘಣ್ಣ ಅಭಿನಯದ ‘ಅಮ್ಮನ ಮನೆ’ ಚಿತ್ರಕ್ಕೆ ಅಪ್ಪು ಕಡೆಯಿಂದ ವೈಶಿಷ್ಟ್ಯತೆಯ ವಿಶ್, ನೀವೇ ಒಮ್ಮೆ ನೋಡಿ…?

ಬೆಂಗಳೂರು, ಮಾ.08:

ಅಮ್ಮನ ಮನೆ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ರಾಘವೇಂದ್ರ ರಾಜ್ ಕುಮಾರ್ 14 ವರ್ಷಗಳ ನಂತರ ನಟಿಸುತ್ತಿರುವ ಸಿನಿಮಾ ಇಂದು ತೆರೆ ಕಂಡಿದೆ. ನೋಡಿದ ಪ್ರೇಕ್ಷಕರು ಕೂಡ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಇದೀಗ ರಾಘವೇಂದ್ರ ರಾಜ್‌ಕುಮಾರ್‌ ಗೆ ಪುನೀತ್ ಪ್ರೀತಿಯಿಂದ ವಿಶ್ ಮಾಡಿದ್ದಾರೆ.

ಅಣ್ಣನಿಗಾಗಿ ತಮ್ಮ ವಿಡಿಯೋ ಡೆಡಿಕೇಟ್

ಹೌದು, ಸದ್ಯ ಇಂದು ಬಿಡುಗಡೆಯಾಗಿರುವ ಅಮ್ಮನ ಮನೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ನಟ ಪುನೀತ್ ಅಣ್ಣನಿಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಇನ್ನು ಈ ಸಂಬಂಧ ವಿಡಿಯೋವೊಂದನ್ನು ಡೆಡಿಕೇಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ರಾಘವೇಂದ್ರ ರಾಜ್ ಕುಮಾರ್ ಹಾಗೂ ರಾಜ್‌ಕುಮಾರ್ ಅವರ ಹಳೆಯ ಫೋಟೋಗಳು, ಅಣ್ಣ ತಮ್ಮಂದಿರು ಜೊತೆಗಿರುವ ಫೋಟೋಗಳನ್ನು ಎಡಿಟ್ ಮಾಡಿ ವಿಡಿಯೋ ಮಾಡಿದ್ದಾರೆ. ಇನ್ನು ಮೂರು ಜನ ಅಣ್ಣ ತಮ್ಮಂದಿರು ಜೊತೆಗಿರುವ ಫೊಟೋ ಇದಾಗಿದೆ. ಇನ್ನು ವಿಧಿಯಾಟದ ಎನ್ನುವ ಹಾಡನ್ನು ರಾಘವೇಂದ್ರ ರಾಜ್‌ಕುಮಾರ್ ಆಡಿದ್ದರು. ಅದನ್ನು ಹಿನ್ನೆಲೆ ಹಾಡಾಗಿ ಬಳಸಿಕೊಂಡಿದ್ದಾರೆ.

ವಿಭಿನ್ನ ಪಾತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್

‘ಅಮ್ಮನ ಮನೆ’ ಎನ್ನುವ ಸಿನಿಮಾದಲ್ಲಿ ರಾಘಣ್ಣ ಒಂದು ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನೂ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ ನಿಖಿಲ್ ಮಂಜು. ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ ಆತ್ಮಶ್ರೀ ನಿಖಿಲ್ ಮಂಜು ಹಾಗೂ ಆರ್.ಎಸ್.ಕುಮಾರ್, ಸದ್ಯ ಬಿಡುಗಡೆಯಾಗಿರುವ ಈ ಸಿನಿಮಾ 100 ದಿನ ಯಶಸ್ವಿ ಪ್ರದರ್ಶನ ಕಾಣಲಿ ಅನ್ನೋದು ಅಭಿಮಾನಿಗಳ ಆಶಯ.

 

View this post on Instagram

 

All the best for #AmmanaMane Raghanna…..

A post shared by Puneeth Rajkumar (@puneethrajkumar.official) on

#puneethrajkumar #raghavendrarajkumar #ammanamanekannadamovie #balkaninews

Tags