ಸುದ್ದಿಗಳು

ನಂದಿ ಬೆಟ್ಟದಲ್ಲಿ ಜಾಲಿ ಡ್ರೈವ್ ಮಾಡಿದ ಪವರ್ ಸ್ಟಾರ್…!!!

ಪುನೀತ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ “ಯುವರತ್ನ” ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಈಗಾಗಲೇ ಈ ಚಿತ್ರತಂಡದಿಂದ ದಿನೇ ದಿನೇ ಹೊಸ ಹೊಸ ಸುದ್ದಿಗಳು ಹೊರಬರುತ್ತಿದೆ. ಇದೀಗ ವಿಶೇಷವೆಂದರೇ, ಪುನೀತ್ ರಾಜ್ ಕುಮಾರ್ ಇತ್ತೀಚೆಗಷ್ಟೇ ತಮ್ಮ ಸ್ನೇಹಿತರೊಟ್ಟಿಗೆ ನಂದಿಬೆಟ್ಟಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಹೌದು, ಕಳೆದ ವಾರವಷ್ಟೇ ಪುನೀತ್ ರಾಜ್ ಕುಮಾರ್ ತಮ್ಮ ಸ್ನೇಹಿತರೊಟ್ಟಿಗೆ ಮಿನಿ ಕೂಪರ್ ಕಾರಿನಲ್ಲಿ ನಂದಿಬೆಟ್ಟಕ್ಕೆ ಡ್ರೈವ್ ಮಾಡಿಕೊಂಡು ತೆರಳಿದ್ದರು. ಈ ವೇಳೆ ನಂದಿ ಬೆಟ್ಟಕ್ಕೆ ಪ್ರಯಾಣ ಬೆಳೆಸಿದ ವಿಡಿಯೋವನ್ನು ಪುನೀತ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮುಂಚಿನಿಂದಲೂ ಪುನೀತ್ ಚಿತ್ರೀಕರಣದಿಂದ ಸ್ವಲ್ಪ ಬಿಡುವು ಸಿಕ್ಕರೆ ಸಾಕು ತಮ್ಮ ಸ್ನೇಹಿತರೊಡನೆ ನಂದಿ ಬೆಟ್ಟಕ್ಕೆ ಸೈಕಲ್ ಏರಿ ಪ್ರಯಾಣ ಬೆಳೆಸುತ್ತಿದ್ದರು. ಇಷ್ಟೇ ಅಲ್ಲದೇ ತಮ್ಮ ನೆಚ್ಚಿನ ಕಾರಿನಲ್ಲಿ ಲಾಂಗ್ ಡ್ರೈವ್ ಹೋಗುತ್ತಿದ್ದರು.

ಇದೀಗ ಪುನೀತ್ ಹಾಕಿರುವ ವಿಡಿಯೋ ಕಂಡು ಅವರ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪುನೀತ್ ರಾಜ್ ಕುಮಾರ್ ರವರ ಜೊತೆ ವಿನಯ್ ರಾಜ್ ಕುಮಾರ್ ಹಾಗೂ ಫೋಟೊಗ್ರಾಫರ್ ಚಂದನ್ ಗೌಡ ಕೂಡ ಜೊತೆಗಿದ್ದರು.

ಸದ್ಯ ನಂದಿ ಬೆಟ್ಟದಲ್ಲಿ ‘ಯುವರತ್ನ’ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ‘ಯುವರತ್ನ’ ಚಿತ್ರತಂಡ ಬಹುತಾರಾಗಣ ಹೊಂದಿದ್ದು, ಪುನೀತ್ ಗೆ ನಾಯಕಿಯಾಗಿ ಸಯ್ಯೇಶಾ ಅಗರ್ ವಾಲ್ ಕಾಣಿಸಿಕೊಳ್ಳುತ್ತಿದ್ದಾರೆ. ಇಷ್ಟೇ ಅಲ್ಲದೇ ಪ್ರಕಾಶ್ ರಾಜ್, ದಿಗಂತ್, ಸೋನು ಗೌಡ, ರಾಧಿಕಾ ಶರತ್ ಕುಮಾರ್ ಹೀಗೆ ಅನೇಕ ಕಲಾವಿದರು ನಟಿಸುತ್ತಿದ್ದಾರೆ.

 

View this post on Instagram

 

Drive to Nandi Hills 🚗, #Yuvarathnaa Shoot….

A post shared by Puneeth Rajkumar (@puneethrajkumar.official) on

ಅನುಪಮಾ ‘ನೋ’ ಎಂದಿದಕ್ಕೆ ಸಮಂತಾ ಓಕೆ ಅಂದ್ರಾ..!!??!!

#balkaninews #sandalwood #puneethrajkumar #puneethrajkumarmovies #kannadamovies #yuvaratnashooting #yuvaratna #nandibettahills

Tags