ಸುದ್ದಿಗಳು

ಪುನೀತ್ ತುಳು ಹಾಡಿನ ಮೇಕಿಂಗ್ ವಿಡಿಯೋ ಹೇಗಿದೆ ಗೊತ್ತೇ..?

ಪುನೀತ್ ಹಾಡಿರುವ 'ಉಮಿಲ್' ತುಳು ಚಿತ್ರದ ಹಾಡಿನ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದೆ.

ಬೆಂಗಳೂರು, ಸೆ.21: ಸದ್ಯ ಪುನೀತ್ ನಟನೆಗೆ ಎಷ್ಟು ಪ್ರಾಮುಖ್ಯತೆ ಇದೆಯೋ ಅಷ್ಟೆ ಪ್ರಾಮುಖ್ಯತೆ ಅವರ ಧ್ವನಿಗೂ ಇದೆ. ಈಗಾಗಲೇ ಅನೇಕ ಕನ್ನಡ ಹಾಡುಗಳನ್ನು ಹಾಡಿರುವ ಪುನೀತ್ ಇಮೇಜ್ ಹೆಚ್ಚಿಸುವಂತಿದೆ. ಇದೀಗ ಮೊದಲ ಬಾರಿಗೆ ಪುನೀತ್ ರಾಜ್‌ಕುಮಾರ್ ತುಳು ಹಾಡನ್ನು ಹಾಡಿದ್ದಾರೆ. ಇದೀಗ ಈ ಹಾಡಿನ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದೆ.

‘ಉಮಿಲ್’ ಟೈಟಲ್ ಹಾಡಿಗೆ  ಪುನೀತ್ ಧ್ವನಿ

ಹೌದು, ಉಮಿಲ್ ಎಂಬ ತುಳು ಚಿತ್ರದ ಟೈಟಲ್ ಹಾಡಿಗೆ  ಪುನೀತ್ ಧ್ವನಿಯಾಗಿದ್ದಾರೆ. ಈಗಾಗಲೇ ಈ ಸಿನಿಮಾದ ಹಾಡು ಅದ್ಭುತವಾಗಿ ಮೂಡಿ ಬಂದಿದೆ. ‘ರಾವುಂದೋ ರಾವುಂದೋ ಬತ್ತುಂಡು ಉಮಿಲ್’ ಎನ್ನುವ ಹಾಡನ್ನು ಪುನೀತ್ ಚೆನ್ನಾಗಿ ಹಾಡಿದ್ದಾರೆ. ಇನ್ನು ಈ ಹಾಡಿಗೆ ತುಳು ಅಭಿಮಾನಿಗಳು ಕೂಡಾ ಫಿದಾ ಆಗಿದ್ದಾರೆ. ಇನ್ನು ‘ಉಮಿಲ್’ ಅಂದರೆ ಸೊಳ್ಳೆ ಎಂದರ್ಥ. ಈ ಹಾಡು ಪುನೀತ್ ಗೆ ಹೊಸದಾದರು ಎಲ್ಲೂ ತಪ್ಪಿಲ್ಲದೆ ಅದ್ಭುತವಾಗಿ ಕಂಠಸಿರಿ ನೀಡಿದ್ದಾರೆ.ತಪ್ಪಿದ್ದರೆ ಕ್ಷಮಿಸಿ ಎಂದ ಪುನೀತ್

ಇನ್ನು ಪುನೀತ್ ಹಾಡಿಗೂ ಮುನ್ನವೇ ಎಲ್ಲಾದರೂ ತಪ್ಪು ಮಾಡಿದರೆ ಕ್ಷಮಿಸಿ ಎನ್ನುವ ಮಾತನ್ನು ಹೇಳಿದ್ದಾರೆ.  ಈ ಸಿನಿಮಾವನ್ನು ರಂಜಿತ್ ಸುವರ್ಣ ನಿರ್ದೇಶನ ಮಾಡಿದ್ದಾರೆ. ನವೀನ್ ಡಿ ಪಡೀಲ್, ಭೋಮರಾಜ ವಾಮಂಜೂರ್ ಸೇರಿದಂತೆ ಹಲವಾರು ಮಂದಿಯ ತಾರಾಬಳಗವಿದೆ. ಈ ಸಿನಿಮಾವನ್ನು ಮೂರು ಮಂದಿ ನಿರ್ಮಿಸಿದ್ದಾರೆ. ಕೀರ್ತನ್ ಬಂಡಾರಿ ಈ ಸಿನಿಮಾಕ್ಕೆ ಸಾಹಿತ್ಯ ನೀಡಿದ್ದಾರೆ. ಪೂಜಾ ಶೆಟ್ಟಿ ಈ ಸಿನಿಮಾ ನಾಯಕಿಯಾಗಿ ಅಭಿನಯಸಿದ್ದಾರೆ.

 

Tags