ಸುದ್ದಿಗಳು

ಸಾರ್ವಭೌಮ ಚಿತ್ರೀಕರಣ ಮತ್ತೆ ಆರಂಭ!!

ಈಗೆಲ್ಲಿದ್ದರೂ ಚುನಾವಣೆ ಬಿಸಿ. ಎಲ್ಲರ ಕಣ್ಣು  ಚುನಾವಣೆಯ ಮೇಲಿದೆ. ಇನ್ನೇನು ಚುನಾವಣೆ ಬಿಸಿ ತಣ್ಣಗಾಗಲಿದೆ. ಸ್ಯಾಂಡಲ್ ವುಡ್ ಮಂದಿ ಮತ್ತೆ ತಮ ಕೆಲಸದತ್ತ ತೊಡಗಿದ್ದಾರೆ. ಪವನ್ ಒಡೆಯರ್ ನಿರ್ದೇಶನದ ಪುನೀತ್ ರಾಜ್ ಕುಮಾರ್ ಅಭಿನಯದ ಸಾರ್ವಭೌಮ ಚಿತ್ರದ ಎರಡನೇ ಭಾಗದ ಶೂಟಿಂಗ್ ಇಂದು ಆರಂಭವಾಗಿದೆ.

ರಾಕ್ ಲೈನ್ ಪ್ರೊಡಕ್ಷನ್  ನಲ್ಲಿ ಮೂಡಿ ಬರುತ್ತಿರುವ ನಟಸಾರ್ವಭೌಮ ಶೂಟಿಂಗ್ ಮಾರ್ಚ್ ನಲ್ಲಿ ಆರಂಭವಾಗಿತ್ತು. ಇದೀಗ ನೆಲಮಂಗಲದ ಹತ್ತಿರ ಫೈಟಿಂಗ್ ಸೀನ್ಸ್ ಮತ್ತು ಕೆಲವು ಸನ್ನಿವೇಶಗಳು ಚಿತ್ರೀಕರಣಗೊಳ್ಳುತ್ತಿವೆ.

ಪುನೀತ್ ಅವರ ಜೊತೆ ಹಿರಿಯ ನಟಿ ಸರೋಜಾ ದೇವಿ ಕೂಡ ಇಂದು ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ. ಈ ಚಿತ್ರದಲ್ಲಿ ರಚಿತರಾಮ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ

ಬಾಹುಬಲಿ ಚಿತ್ರದ ಖ್ಯಾತಿಯ ಪ್ರಭಾಕರನ್ ಅವರು ಸಹ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.. ಡಿ.ಇಮ್ಮಮ್ ಅವರ ಸಂಗೀತ ಹಾಗೂ ವೈದಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

 

Tags