ಸುದ್ದಿಗಳು

ಕನ್ನಡದ ಉಡುಗೊರೆಗೆ ಖುಷಿಯಾದ ಪವರ್ ಸ್ಟಾರ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

ಬೆಂಗಳೂರು, ನ.21: ನಟ ಪುನೀತ್ ರಾಜ್‌ ಕುಮಾರ್‌ ಗೆ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಇದೀಗ ವಿಶೇಷವಾದ  ಉಡುಗೊರೆಯೊಂದು ಸಿಕ್ಕಿದೆ.

ಕನ್ನಡ ರಾಜ್ಯೋತ್ಸವ,  ಮದುವೆ ಸಮಾರಂಭ, ಸಿನಿಮಾ, ಹುಟ್ಟುಹಬ್ಬ ಹೀಗೆ ಬಹಳಷ್ಟು ರೀತಿಯಲ್ಲಿ ಅಭಿಮಾನಿಗಳಿಂದ ಸೆಲಿಬ್ರಿಟಿಗಳಿಗೆ ಉಡುಗೊರೆಗಳು  ಬರುತ್ತಲೇ ಇರುತ್ತವೆ. ಆದರೆ ಅದರಲ್ಲಿ ಕೆಲವೊಂದು ಉಡುಗೊರೆಗಳು ಮಾತ್ರ ಜನರಿಗೆ ತೋರ್ಪಡೆಯಾಗುತ್ತವೆ.  ಅದಕ್ಕೂ ಕಾರಣ ಅಂದರೆ ಅಂಥಹ ಉಡುಗೊರೆಗಳು ವಿಶೇಷವಾಗಿರುತ್ತವೆ. ಇದೀಗ ನಟ ಪುನೀತ್ ರಾಜ್‌ ಕುಮಾರ್ ಅವರಿಗೆ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಇಂಥಹದೊಂದು ಉಡುಗೊರೆ ಸಿಕ್ಕಿದೆ.

ಅಲೋಕ್ ಜಿ ಕಾಸರಗೋಡುರಿಂದ ಉಡುಗೊರೆ

ಹೌದು,  ನಟ ಪುನೀತ್ ರಾಜ್‌ ಕುಮಾರ್‌ ಗೆ ಇತ್ತೀಚೆಗೆ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಎನ್ನುವ ಕುಸರಿ ಕೆಲಸದ ಒಂದು ಬೋರ್ಡ್ ಅನ್ನು ಉಡುಗೊರೆಯಾಗಿ ನೀಡಲಾಗಿದೆ. ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಅವರ ದ್ವಿತೀಯ ಪುತ್ರ ಅಲೋಕ್ ಜಿ ಕಾಸರಗೋಡು ಇದನ್ನು ಉಡುಗೊರೆಯಾಗಿ ನೀಡಿದ್ದಾರೆ.

ಉಡುಗೊರೆ ನೋಡಿ ಪುನೀತ್ ಖುಷಿ

ಇದೊಂದು ಅದ್ಭುತ ಕಲಾ ಕುಸರಿಯಾಗಿದೆ. ಕನ್ನಡ ಎನ್ನುವ ಭಾಷೆಯೇ ಒಂದು ಅದ್ಭುತ ಪದ ಅಂಥಹದರಲ್ಲಿ ಅದನ್ನು ಕೆತ್ತಿ, ಅದಕ್ಕೊಂದು ರೂಪಕೊಟ್ಟು ಮಾಡುವ ಕೆಲಸ ಇನ್ನು ದೊಡ್ಡದು ಇಂಥಹ ಕೆಲಸಕ್ಕೆ ಇದೀಗ ಪುನೀತ್  ಮೆಚ್ಚುಗೆ ವ್ಯಕ್ತಪಡಿಸಿದ್ದು, ಜೊತೆಗೆ ಈ ಉಡುಗೊರೆಯಿಂದ ಖುಷಿಯಾಗಿದ್ದಾರೆ.

Tags

Related Articles