ಸುದ್ದಿಗಳು

‘ನಟಸಾರ್ವಭೌಮ’ನ ಹೊಸ ವಿಭಿನ್ನ ಪೋಸ್ಟರ್!!

ಪುನೀತ್ ರಾಜ್‍ಕುಮಾರ್ ಅಭಿನಯದ ಸಿನಿಮಾಗಳಲ್ಲಿ ಒಳ್ಳೆಯ ಡ್ಯಾನ್ಸ್ ಇರುತ್ತದೆ

ಬೆಂಗಳೂರು,ಡಿ.15: ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ನಟಸಾರ್ವಭೌಮ’ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ.. ಈ ಚಿತ್ರವನ್ನು ‘ಗೂಗ್ಲಿ’ ಖ್ಯಾತಿಯ ಪವನ್ ಒಡೆಯರ್ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಪುನೀತ್ ರಾಜಕುಮಾರ್ ಒಂದು ಹೊಸ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಪುನೀತ್ ಅವರ ಹೇರ್ ಸ್ಟೈಲ್ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಅಪ್ಪು ಹಾಗೂ ಅನುಪಮ ಅವರ ಕೆಮಿಸ್ಟ್ರಿ ಬೊಂಬಾಟ್ ಆಗಿ ಮೂಡಿಬಂದಿದೆ..  ಅಷ್ಟೇ ಅಲ್ಲದೆ ರಚಿತಾ ರಾಮ್ ಕೂಡ ಈ ಚಿತ್ರದ ಪ್ರಮುಖ ನಾಯಕ.. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಸಿನಿಮಾಗಳಲ್ಲಿ ಒಳ್ಳೆಯ ಡ್ಯಾನ್ಸ್ ಇರುತ್ತದೆ. ನಟಸಾರ್ವಭೌಮ ಚಿತ್ರದಲ್ಲೂ ಭರ್ಜರಿ ಸ್ಟೆಪ್‍ಗಳಿವೆಯಂತೆ.

Image may contain: 1 person, text

ಚಿತ್ರದ ಶೀರ್ಷಿಕೆ ಸಾಹಿತ್ಯ

ಇನ್ನು ಈ ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದ್ದು ಪುನೀತ್ ಎಂದೂ ಕಾಣದ ಹೊಸ ಲುಕ್ ನಲ್ಲಿ ಮಿಂಚಿದ್ದಾರೆ..ಈ ಚಿತ್ರಕ್ಕೆ ನಿರ್ದೇಶಕ ಪವನ್ ಒಡೆಯರ್ ಅವರೇ ಚಿತ್ರದ ಶೀರ್ಷಿಕೆ ಸಾಹಿತ್ಯ ಬರೆದಿದ್ದಾರೆ, ಅದೇ ಪುನೀತ್ ರಾಜ್‍ಕುಮಾರ್ ಅವರ ಇಂಟ್ರೊಡಕ್ಷನ್ ಹಾಡು ಕೂಡ ಹೌದು.. . ಇನ್ನು ಮುಂದಿನ ತಿಂಗಳು ಜನವರಿ 26ರಂದು ನಟಸಾರ್ವಭೌಮ ತೆರೆಗೆ ಬರಲಿದೆ…

Image may contain: 1 person, text

Tags