ಸುದ್ದಿಗಳು

ಕರುಣಾನಿಧಿ ಮನೆಗೆ ಪವರ್ ಸ್ಟಾರ್ ಭೇಟಿ….

ಬೆಂಗಳೂರು, ಆ.14: ಭಾರತದ ರಾಜಕೀಯ ಇತಿಹಾಸದಲ್ಲಿ ಎಂ.ಕರುಣಾನಿಧಿ ಎಂದರೆ ಬಂಗಾರದ ನಿಧಿಗೆ ಸಮಾನ ಅಂದ್ರೆ ಅದು ಅತೀಶಯೋಕ್ತಿಯಾಗಲಾರದು.. ತಮಿಳು ನಾಡು ಕಂಡ ಧೀಮಂತ ರಾಜಕೀಯ ನಾಯಕರಲ್ಲಿ ಕರುಣಾನಿಧಿ ಕೂಡಾ ಒಬ್ರು, ಕೇವಲ ರಾಜಕೀಯ ರಂಗದಲ್ಲಿ ಅಷ್ಟೇ ಅಲ್ದೆ, ಕಲೆ ಸಾಹಿತ್ಯ, ಕಥೆ, ಚಿತ್ರಕಥೆ ಹೀಗೆ ಸಿನಿಮಾ ರಂಗದಲ್ಲಿ ಕೂಡಾ ತಮ್ಮ ಚಾಪನ್ನ ಮೂಡಿಸಿದ್ರು..

ತಮಿಳು ಚಿತ್ರರಂಗಕ್ಕೆ ಕರುಣಾ ಅವರ ಕೊಡುಗೆ ಅಪಾರ

ಅತೀ ಚಿಕ್ಕವಯಸ್ಸಿನಲ್ಲೇ ರಾಜಕೀಯ ರಂಗವನ್ನ ಪ್ರವೇಶ ಮಾಡಿದ ತಮಿಳು ನಾಡಿನ ಮಾಜಿ ಸಿಎಂ ಕರುಣಾನಿಧಿ ಶಾಲಾ-ಕಾಲೇಜು ದಿನಗಳಿಂದಲೇ ಸಾಹಿತ್ಯ ಹಾಗೂ ಬರವಣಿಗೆಗಳಲ್ಲಿ ಆಸಕ್ತಿಯನ್ನ ಮೈಗೂಡಿಸಿಕೊಂಡವ್ರು.. ಮುಂದೆ ಅದು ಸಿನಿಮಾ ರಂಗಕ್ಕೆ ಕರುಣಾನಿಧಿಯವ್ರ ಕೊಡುಗೆಯಾಗಿ ಕೊಡಲು ಕಾರಣವಾಯಿತು..

ಸಿಎಂ ಆಗೋಕು ಮುಂಚೆ ಸಿನಿಮಾ ಕ್ಷೇತ್ರದಲ್ಲಿದ್ದರು ಎನ್ನುವುದು ತುಂಬಾನೇ ವಿಶೇಷ.. ತಮಿಳುನಾಡಿನ ಮುಖ್ಯಮಂತ್ರಿಗಳಿಗೂ ಮತ್ತು ಸಿನಿಮಾ ಜಗತ್ತಿಗೂ ಅವಿನಾಭಾವ ಸಂಬಂಧವಿದೆ.. ಹೌದು, ತಮಿಳುನಾಡಿನ ರಾಜಕೀಯ ಇತಿಹಾಸವನ್ನ ಒಂದು ಸಾರಿ ಗಮನ ಹರಿಸಿದ್ರೆ, ಸಿನಿಮಾ ಕಲಾವಿದರೇ ಅಲ್ಲಿ ಅಧಿಕಾರ ನಡೆಸಿದ್ದಾರೆ.. ಎಂ.ಜಿ ರಾಮಚಂದ್ರನ್, ಜೆ ಜಯಲಲಿತಾ ಹಾಗೂ ಎಂ.ಕರುಣಾನಿಧಿ ಪ್ರಮುಖರು ಸಿನಿಮಾ ರಂಗದಿಂದ ರಾಜಕೀಯ ಚುಕ್ಕಾಣೆಯನ್ನ ಹಿಡಿದವ್ರು.

ಸಾಂತ್ವನ ಹೇಳೀದ ಅಪ್ಪು

ಇತ್ತೀಚಿಗಷ್ಟೆ ತಮಿಳುನಾಡಿನ ಕರುಣಾನಿಧಿ ಅನಾರೋಗ್ಯದ ಕಾರಣ ಮರಣ ಹೊಂದಿದ್ದರು. ಈ ಹಿನ್ನೆಲೆ ಪುನೀತ್ ರಾಜ್‌ಕುಮಾರ್ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಚೆನೈನ ಗೋಪಾಪುರಂನಲ್ಲಿರುವ ಅವರ ಮೆನೆಗ ಭೇಟಿ ನೀಡಿರೋ ಅಪ್ಪು, ಕರುಣಾನಿಧಿ ಮಗನಿಗೆ ಧೈರ್ಯ ತುಂಬಿದ್ದಾರೆ. ನಮ್ಮ ತಂದೆ ರಾಜ್ ಕುಮಾರ್ ಅವರ ಅಪಹರಣವಾಗಿದ್ದ ವೇಳೆ ಕರುಣಾನಿಧಿ ಅವರು ತುಂಬಾ ಸಹಾಯ ಮಾಡಿದ್ದಾರೆ. ಅವರ ಕುಟುಂಬ ಮತ್ತು ನಮ್ಮ ಕುಟುಂಬದ ನಡುವೆ ಒಳ್ಳೆಯ ನಂಟು ಹೊಂದಿದ್ದೇವೆ. ಅವರ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದೇನೆ ಅಷ್ಟೇ ಎಂದರು ಮಾಧ್ಯಮ ಮಿತ್ರರಿಗೆ ಪುನೀತ್ ಹೇಳಿದ್ದಾರೆ.

Tags