ಸುದ್ದಿಗಳು

ಒಂದೇ ಸಿನಿಮಾದಲ್ಲಿ ನಟಿಸಲು ಮುಂದಾದ ಪುನೀತ್ – ಶಿವಣ್ಣ

ಬೆಂಗಳೂರು, ಏ.22:

ಡಾ.ರಾಜ್‌ ಕುಮಾರ್ ಮಕ್ಕಳು ಒಂದೇ ಸಿನಿಮಾದಲ್ಲಿ ನಟಿಸಬೇಕು, ನಟಿಸೋದನ್ನು ನೋಡಬೇಕು ಅನ್ನೋದು ಅಭಿಮಾನಿಗಳಿಗೆ ಬಹು ಕಾಲದಿಂದ ಇರುವ ಮಹಾದಾಸೆ. ಇದು ಪಾರ್ವತಮ್ಮ ಅವರ ಆಸೆ ಕೂಡ ಆಗಿತ್ತು. ಆದರೆ ಅದು ಇಲ್ಲಿಯವರೆಗೂ ಸಾಧ್ಯವಾಗಿರಲಿಲ್ಲ. ಇದೀಗ ಈ ಆಸೆ ನೆರವೇರುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಪೌರಾಣಿಕ ಸಿನಿಮಾದಲ್ಲಿ ಅಣ್ಣ-ತಮ್ಮ..?

ಹೌದು, ‘ಭರತ ಬಾಹುಬಲಿ’ ಎಂಬ ಪೌರಾಣಿಕ ಸಿನಿಮಾ ಮೂಲಕ ಶಿವಣ್ಣ – ಪುನೀತ್ ನಟಿಸುತ್ತಿದ್ದಾರೆ ಎಂಬ ಮಾತುಗಳು ದಟ್ಟವಾಗಿವೆ. ಆದರೆ ಈಗಾಗಲೇ ಭರತ ಬಾಹುಬಲಿ ಚಿತ್ರದಲ್ಲಿ ಚಿಕ್ಕಣ್ಣ ಮಂಜು ಮಾಂಡವ್ಯ ನಟಿಸುತ್ತಿದ್ದಾರೆ. ಈ ಸಿನಿಮಾ ಜೊತೆಗೆ ಮತ್ತೊಂದು ಇದೇ ಟೈಟಲ್ ಸಿನಿಮಾ ಬರುತ್ತಾ ಎನ್ನುವ ಕುತೂಹಲ ಅಭಿಮಾನಿಗಳದ್ದಾಗಿದೆ.

ಚಿಕ್ಕಣ್ಣ – ಮಂಜು ಸಿನಿಮಾದಲ್ಲಿ ನಟನೆ..?

ಇನ್ನೊಂದು ಮೂಲಗಳ ಪ್ರಕಾರ ಮಂಜು ಮಾಂಡವ್ಯ ಹಾಗೂ ಚಿಕ್ಕಣ್ಣ ಸಿನಿಮಾದಲ್ಲಿಯೇ ಬಂದೋಗುತ್ತಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಆದರೆ ಯಾವ ವಿಚಾರವನ್ನು ಸಿನಿಮಾ ತಂಡ ಖಚಿತಪಡಿಸಿಲ್ಲ. ಈ ಸಿನಿಮಾದಲ್ಲಿ ಈ ಪಾತ್ರಗಳು ಬಂದು ಹೋಗುತ್ತವೆ. ಹಾಗಾಗಿ ಈ ಚಿತ್ರದಲ್ಲಿಯೇ ನಟಿಸುತ್ತಾರಾ ಎಂಬ ಮಾತು ಕೇಳಿ ಬರುತ್ತಿವೆ. ಅಕಸ್ಮಾತ್ ಈ ಇಬ್ಬರು ನಟರು ಒಂದೇ ಸಿನಿಮಾದಲ್ಲಿ ನಟಿಸಿದ್ದೇ ಆಗಿದ್ದಲ್ಲಿ ಅಭಿಮಾನಿಗಳಿಗೆ ದೊಡ್ಡ ಹಬ್ಬವೇ ಆಗಿರುತ್ತದೆ.

ನನ್ನ ಮೇಲೆ ಬೆಟ್ಟಿಂಗ್ ಕಟ್ಟಬೇಡಿ ಅಂದಿದ್ದೇಕೆ ಸುಮಲತಾ..?

#shivarajkumar #puneethrajkumar #shivarajkumarandpuneethrajkumar #balkaninews #bharathabahubali

Tags