ಸುದ್ದಿಗಳು

ಅಮೇರಿಕಾದಲ್ಲಿ ಪ್ರದರ್ಶನಗೊಳ್ಳುತ್ತಿರುವ ಪುನೀತ್ ರಾಜ್ ಕುಮಾರ್ ನಿರ್ಮಾಣದ ಸಿನಿಮಾ.

ಬೆಂಗಳೂರು, ಏ.19:

‘ಕವಲುದಾರಿ’ ಚಿತ್ರ ಸದ್ಯ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಇದಾಗಿದ್ದು, ಈಗಾಗಲೇ ಸಿನಿಮಾ ನೋಡಿದ ಪ್ರೇಕ್ಷಕರು ಸಿನಿಮಾದ ಕಥೆಯನ್ನು ಮೆಚ್ಚಿಕೊಂಡಿದ್ದಾರೆ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ಕಥೆಯನ್ನು ಜನರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದ ನಿರ್ದೇಶಕ ಹೇಮಂತ್ ಈ ಕಥೆಯನ್ನು ಜನರಿಗೆ ತಿಳುಸುವಲ್ಲಿಯೂ ಯಶಸ್ವಿಯಾಗುತ್ತಿದ್ದಾರೆ.

ಪುನೀತ್ ಹೇಳಿದ್ದೇನು..?

ಇದೀಗ ಈ ಚಿತ್ರ ಕರ್ನಾಟಕ ಅಷ್ಟೇ ಅಲ್ಲದೆ ಹೊರ ದೇಶಕ್ಕೂ ಲಗ್ಗೆ ಇಟ್ಟಿದೆ. ‘ಕವಲುದಾರಿ’ ಸಿನಿಮಾ ಅಮೇರಿಕಾಕ್ಕೆ ಪಯಣ ಬೆಳೆಸಿದೆ. ಇತ್ತೀಚೆಗಷ್ಟೇ ಈ ಸಿನಿಮಾ ಅಮೇರಿಕಾದಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇನ್ನೂ ಈ ಬಗ್ಗೆ ನಟ ಪುನೀತ್ ಮಾತನಾಡಿದ್ದು, ಸಿನಿಮಾ ಯಶಸ್ವಿ ಬಗ್ಗೆ ಹೇಳಿಕೊಂಡಿದ್ದಾರೆ.

ರಿಲೀಸ್ ಬಗ್ಗೆ ಪುನೀತ್ ಮಾತು

‘ಕವಲುದಾರಿ’ ಸಿನಿಮಾ ನೋಡಿ ನಿಮ್ಮ ಸ್ನೇಹಿತರಿಗೂ ಹೇಳಿ ಚೆನ್ನಾಗಿ ಪ್ರಮೋಟ್ ಮಾಡಿದ್ದೀರಾ. ಅದಕ್ಕೆ ನಾನು ಚಿರರುಣಿ. ಅಮೇರಿಕಾದಲ್ಲಿರುವ ಕನ್ನಡಿಗರು ನಿಮ್ಮ ಹತ್ತಿರದ ಸಿನಿಮಾ ಥಿಯೇಟರ್‌ ನಲ್ಲಿ ಸಿನಿಮಾ ನೋಡಿ.. ಸಿನಿಮಾ ಬಗ್ಗೆಯ ಮಾತುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ ಎಂದಿದ್ದಾರೆ.

ನಟನಾ ಲೋಕದಲ್ಲಿ ಪ್ರೇಮ ಪರ್ವ

#kavaludari #puneethrajkumar #sandalwood #kannadamovies #prkproductions

Tags

Related Articles