ಸುದ್ದಿಗಳು

ಪವರ್ ಸ್ಟಾರ್ ವರ್ಕೌಟ್ ಗೆ ರಾಘಣ್ಣ ಫಿದಾ!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಯುವರತ್ನ ಚಿತ್ರದಲ್ಲಿ ಬ್ಯುಸಿ. ಪವರ್​ಫುಲ್​ ನಟನೆ ಮಾತ್ರವಲ್ಲ, ಆ್ಯಕ್ಷನ್, ಪವರ್​ಫುಲ್​ ಡ್ಯಾನ್ಸ್ ನಲ್ಲೂ ಸೂಪರ್.. ಅಷ್ಟರ ಮಟ್ಟಿಗೆ ಅಪ್ಪು ಈಗಲೂ ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ.

ಇದೀಗ ಸೋಷಿಯಲ್ ಮಿಡಿಯಾದಲ್ಲಿ ಅಪ್ಪು ವರ್ಕೌಟ್ ವಿಡಿಯೋ ವೈರಲ್ ಆಗಿದೆ. ಬ್ಯಾಟಲ್ ರೋಪ್ಸ್, ಪುಶ್ ಅಪ್, ಲೆಗ್ ಸ್ಟ್ರೆಚ್ , ಫ್ರಾಗ್ ಜಂಪ್ ಹೀಗೆ ಪುನೀತ್​ ಅನೇಕ ರೀತಿಯ ವರ್ಕೌಟ್ ಮಾಡ್ತಾರೆ.

ಪುನೀತ್ ಈ ಎನರ್ಜಿಗೆ ಕಾರಣ, ಅವರ ವರ್ಕೌಟ್, ಅಪ್ಪು ಪ್ರತಿದಿನ ವ್ಯಾಯಾಮ ಮರೆಯೋದಿಲ್ಲ. ಜಿಮ್‍ ಮಾತ್ರವನ್ನೇ ಅವರು  ಅವಲಂಬಿಸಿಯೂ ಇಲ್ಲ. ಜಿಮ್ನಾಸ್ಟಿಕ್‍ ಕಲಿತಿರುವ ಅಪ್ಪು , ನಿಂತಲ್ಲೇ ಪಲ್ಟಿ ಹೊಡಿತಾರೆ. ಅಷ್ಟರ ಮಟ್ಟಿಗೆ ಅಪ್ಪು ಈಗಲೂ ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ.

 

View this post on Instagram

 

A post shared by Puneeth Rajkumar (@puneethrajkumar.official) on

ಪುನೀತ್ ವರ್ಕೌಟ್ ಗೆ ರಾಘವೇಂದ್ರ ರಾಜ್ ಕುಮಾರ್ ಕೂಡ ಕಾಮೆಂಟ್ ಮಾಡಿದ್ದಾರೆ. “ನಿಮ್ಮ ಕಠಿಣ ಪರಿಶ್ರಮದ ಬಗ್ಗೆ ಹೆಮ್ಮೆಪಡುವೆ. ಲವ್ ಯು ಬ್ರೋ ಯಶಸ್ಸಿನ ಏಕೈಕ ರಹಸ್ಯ ಹಾರ್ಡ್ ವರ್ಕ್. ದೇವರು ನಿಮ್ಮೊಂದಿಗೆ ಇರಲಿ” ಎಂದು ಬರೆದಿದ್ದಾರೆ

ದ್ವಿಪಾತ್ರದಲ್ಲಿ ಪ್ರಿಯಾಂಕಾ ಉಪೇಂದ್ರ

#puneethrajkumar #sandalwood #puneethworkout

 

Tags