ಸುದ್ದಿಗಳು

ಮತ್ತೆ ಗೆಸ್ಟ್ ರೋಲ್ ಮಾಡುತ್ತಿರುವ ಪುನೀತ್ ರಾಜ್ ಕುಮಾರ್..!!!

ಡ್ಯಾನಿಶ್ ಸೇಠ್ ಚಿತ್ರದಲ್ಲಿ ಪವರ್ ಸ್ಟಾರ್

ಬೆಂಗಳೂರು.ಜ.11: ಪಿ.ಆರ್.ಕೆ ಸಂಸ್ಥೆಯ ಮೂಲಕ ಪುನೀತ್ ರಾಜ್ ಕುಮಾರ್ ಹೆಸರಿಡದ ಚಿತ್ರವೊಂದನ್ನು ನಿರ್ಮಿಸುತ್ತಿದ್ದು, ಡ್ಯಾನಿಶ್ ಸೇಠ್ ನಾಯಕನಟರಾಗಿ ನಟಿಸುತ್ತಿದ್ದಾರೆ. ವಿಶೇಷವೆಂದರೆ ಈ ಚಿತ್ರದಲ್ಲಿ ಪುನೀತ್ ಅತಿಥಿ ನಟರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಗೆಸ್ಟ್ ರೋಲ್ ಪಾತ್ರದಲ್ಲಿ ಅಪ್ಪು

ಈಗಾಗಲೇ ಪುನೀತ್ ‘ಕಟಕ’ ಚಿತ್ರದಲ್ಲಿ ಕ್ಲೈಮ್ಯಾಕ್ಸ್ ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೊಂದು ಸಂದೇಶ ಹೇಳಿದ್ದರು. ಇದಾದ ಬಳಿಕ ‘ಹಂಬಲ್ ಪೊಲಿಟಿಷಿಯನ್ ನೋಗರಾಜ್’ ಚಿತ್ರದಲ್ಲಿ ಸ್ವತಃ ನಾಯಕನಟ ಪುನೀತ್ ರಾಜ್ ಕುಮಾರ್ ಆಗಿಯೇ ಅಭಿನಯಿಸಿದ್ದರು. ಇದಾದ ಬಳಿಕ ಮತ್ಯಾವ ಚಿತ್ರದಲ್ಲೂ ಅವರು ಗೆಸ್ಟ್ ರೋಲ್ ಆಗಿ ಅಭಿನಯಿಸಿರಲಿಲ್ಲ.

ಮತ್ತೆ ಗೆಸ್ಟ್ ರೋಲ್ ನಲ್ಲಿ

ಪುನೀತ್ ರಾಜ್ ಕುಮಾರ್ ಇದೀಗ ತಮ್ಮದೇ ಸಂಸ್ಥೆಯಿಂದ ನಿರ್ಮಸುತ್ತಿರುವ ಚಿತ್ರದಲ್ಲಿ ಗೆಸ್ಟ್ ರೋಲ್ ಮಾಡುತ್ತಿದ್ದಾರೆ. ಹೀಗಾಗಿ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲಗಳು ಮೂಡುತ್ತಿವೆ. ಇನ್ನು ಈ ಚಿತ್ರವನ್ನು ‘ಹ್ಯಾಪಿ ನ್ಯೂ ಇಯರ್’ ಖ್ಯಾತಿಯ ಪನ್ನಗಾಭರಣ ನಿರ್ದೇಶನ ಮಾಡುತ್ತಿದ್ದಾರೆ.

ಪುನೀತ್ ರಾಜ್ ಕುಮಾರ್ ಪಿ.ಆರ್.ಕೆ . ಹೆಸರಲ್ಲಿ ಆಡಿಯೋ ಕಂಪೆನಿ ತೆರೆದಿದ್ದು, ಅದೀಗ ಅದ್ಭುತ ಯಶ ಕಂಡಿರುವುದೆಲ್ಲಾ ನಮ್ಮ ಕಣ್ಣ ಮುಂದಿದೆ. ಒಳ್ಳೆಯ ಚಿತ್ರಗಳಿಗೆ ಪ್ರೋತ್ಸಾಹ ನೀಡಬೇಕು, ಹೊಸ ಪ್ರತಿಭೆಗಳಿಗೆ ಸಾಥ್ ನೀಡಬೇಕೆಂಬ ಇರಾದೆಯಿಂದಲೇ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

#punith #balkaninews #filmnews, #kannadasuddigalu, #dyanishshet

Tags