ಸುದ್ದಿಗಳು

ನಟ ಸಾರ್ವಭೌಮಕ್ಕೆ ರಚಿತಾ ನಾಯಕಿ ಕನ್ಫರ್ಮ್!!

ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಚಿತ್ರ ನಟಸಾರ್ವಭೌಮದ ಪೋಸ್ಟರ್ ಹಾಗೂ ಟೀಸರ್ ಬಡುಗಡೆಯಾಗಿ ಸಾಕಷ್ಟು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ರಚಿತಾರಾಮ್ ಅವರೇ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಆದರೆ ರಚಿತಾ ಅವರು ನಾಯಕಿಯಾಗಿ ಪುನೀತ್ ಗೆ ಬೇಡವೆಂದು ಜಾಲಾತಾಣಗಳಲ್ಲಿ ಅಭಿಮಾನಿಗಳು ಬರೆದು ಹಾಕಿದ್ದರು. ಈಗಾಗಲೇ ರಚಿತಾ ರಾಮ್ ಅಭಿನಯದ ಶೂಟಿಂಗ್ ಬಹುಪಾಲು ಮುಗಿದಿದೆ. ರಚಿತಾ ರಾಮ್ ಜೊತೆ ಚಿತ್ರದಲ್ಲಿ ಇನ್ನೊಬ್ಬರು ನಾಯಕಿಯೂ ಇದ್ದಾರಂತೆ. ಹೀರೋಯಿನ್ ಹೆಸರು ಫೈನಲ್ ಆಗಿದೆಯಂತೆ. ಆದರೆ ಚಿತ್ರತಂಡ ನಟಿಯ ಹೆಸರನ್ನು ಹೇಳಿಲ್ಲ. ಈಗಾಗಲೇ ಚಿತ್ರದ ಶೇ.45ರಷ್ಟು ಭಾಗದ ಶೂಟಿಂಗ್ ಮುಗಿದಿದೆ.

ನಟ ಸಾರ್ವಭೌಮ ಚಿತ್ರದಲ್ಲಿ ಇನ್ನು ರಚಿತಾ ರಾಮ್ ಅಭಿನಯದ ಕೆಲವೇ ಸೀನ್ ಗಳ ಶೂಟಿಂಗ್ ಮಾತ್ರ ಬಾಕಿ ಇದೆ. ಕಳೆದ ವಾರವಷ್ಟೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಟಸಾರ್ವಭೌಮ ಚಿತ್ರದ ಶೂಟಿಂಗ್ ಬಳ್ಳಾರಿಯಲ್ಲಿ ನಡೆದಿತ್ತು. ತೋರಣಗಲ್ ನಲ್ಲಿರುವ ಜಿಂದಾಲ್ ಏರ್ಪೋರ್ಟ್ನಲ್ಲಿ ಚಿತ್ರದ ಚಿತ್ರೀಕರಣ ನಡೆದಿತ್ತು. ನಟ ಸಾರ್ವಭೌಮ ಚಿತ್ರವನ್ನು ಪವನ್ ಒಡೆಯರ್ ನಿರ್ದೇಶಿಸುತ್ತಿದ್ದಾರೆ.

Tags