ಸುದ್ದಿಗಳು

ವೆಬ್ ಸರಣಿಯತ್ತ ಗಮನ ಹರಿಸಿದ ಪವರ್ ಸ್ಟಾರ್..!!!

ನಟನೆಯ ಜೊತೆಗೆ ನಿರ್ಮಾಣದತ್ತಲೂ ಪುನೀತ್ ಗಮನ

ಬೆಂಗಳೂರು.ಫೆ.19

ಈಗ ಸಾಮಾಜಿಕ ಜಾಲತಾಣದ ಬಳಕೆ ಹೆಚ್ಚಾಗುತ್ತಿದ್ದಂತೆ ಅನೇಕರು ವಿವಿಧ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಅವುಗಳಲ್ಲಿ ವೆಬ್ ಸರಣಿಗಳು ಸಹ ಒಂದು. ಹೌದು, ಕಳೆದ ಎರಡು ವರ್ಷಗಳಿಂದ ಕನ್ನಡದಲ್ಲಿಯೂ ವೆಬ್ ಸಿರೀಸ್ ಗಳು ಮೂಡಿ ಬರುತ್ತಿದ್ದು, ಎಲ್ಲರ ಗಮನ ಸೆಳೆಯುತ್ತಿವೆ.

ಪುನೀತ್ ರಿಂದ ವೆಬ್ ಸರಣಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈಗ ನಟನೆಯೊಂದಿಗೆ ತಮ್ಮದೇ ಆಡಿಯೋ ಸಂಸ್ಥೆಯನ್ನು ತೆರೆದಿದ್ದಾರೆ. ಹಾಗೆಯೇ ‘ಪಿ.ಆರ್.ಕೆ’ ಸಂಸ್ಥೆಯ ಮೂಲಕ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಈಗ ಅವರು ವೆಬ್ ಸರಣಿಗಳತ್ತ ಮುಖ ಮಾಡಿದ್ದಾರೆ.

ಕಳೆದ ವರ್ಷ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮ್ಮ ‘ಶ್ರೀ ಮುತ್ತು’ ಪ್ರೊಡಕ್ಷನ್ ಹೌಸ್ ನಿಂದ ‘ಹೇಟ್ ಯೂ ರೋಮಿಯೋ’ ಎಂಬ ವೆಬ್ ಸರಣಿ ಶುರು ಮಾಡಿದ್ದರು. ಅದು ಇನ್ನೇನು ರಿಲೀಸ್ ಆಗಲಿದೆ. ಈಗ ಪುನೀತ್ ಅವರ ಸರಧಿ.

‘ಸಿನಿಮಾ ಮತ್ತು ಕ್ರಿಯೇಟಿವ್ ಕೆಲಸಗಳು ನನಗೆ ಫ್ಯಾಷನ್. ನನ್ನ ಅಣ್ಣನ ಮಗಳು ನಿವೇದಿತಾ ವೆಬ್ ಸೀರಿಸ್ ಮಾಡ್ತಾ ಇದ್ದಾಳೆ. ನನಗೆ ಬಹಳ ಖುಷಿ ಇದೆ. ವೆಬ್ ಸೀರಿಸ್ ಹೊಸ ಟ್ರೆಂಡ್ ಹುಟ್ಟು ಹಾಕುತ್ತಿದೆ. ಈಗಾಗಲೇ ನಾಲ್ಕು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದೇನೆ. ಅದರಲ್ಲಿ ಒಂದು ಬಿಡುಗಡೆಗೆ ಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ವೆಬ್ ಸೀರಿಸ್ ಸಹ ಮಾಡುವ ಯೋಚನೆ ಮಾಡಿದ್ದೇನೆ’ ಎಂದು ಪುನೀತ್ ಹೇಳಿದ್ದಾರೆ.

ಕುತೂಹಲ ಮೂಡಿಸಿರುವ ವೆಬ್ ಸರಣಿಗಳು

ಈಗಾಗಲೇ ನಟ ಉಪೇಂದ್ರ ಸಹ ‘ಜೋಶಿಲೆ’ ವೆಬ್ ಸರಣಿಯಲ್ಲಿ ನಟಿಸಿದ್ದರು. ಇನ್ನು ‘ಅಂಬಿ ನಿಂಗೆ ವಯಸ್ಸಾಯ್ತೋ ‘ ಚಿತ್ರದ ನಿರ್ದೇಶಕ ಗುರುದತ್ ಗಾಣಿಗ ಸಹ ವೆಬ್ ಸೀರಿಸ್ ನಿರ್ದೇಶನಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಕಿರುತೆರೆಗೆ ಡಾ.ಭಾರತಿ ವಿಷ್ಣುವರ್ಧನ್ ಹೊಸ ಇನ್ನಿಂಗ್ಸ್ ಆರಂಭ

#punitharajkumar, #balkaninews #filmnews, #kannadasuddigalu, #websiries,# upendra, #joshile, #shivarajkumar

Tags

Related Articles