ಸುದ್ದಿಗಳು

ದರ್ಶನ್ ಹಾಗೂ ಪುನೀತ್ ಇದೀಗ ‘ದಿಗ್ಗಜರು’…!!!

ದಿಗ್ಗಜರು ಎಂಬ ಪದಗಳು ಕೇಳಿದ ತಕ್ಷಣವೇ ನೆನಪಾಗುವುದು ಸಾಹಸ ಸಿಂಹ ವಿಷ್ಣುವರ್ಧನ್ ಮತ್ತು ರೆಬೆಲ್ ಸ್ಟಾರ್ ಅಂಬರೀಶ್. ಇವರಿಬ್ಬರೂ ಜೊತೆಯಾಗಿ ನಟಿಸಿರುವ ‘ದಿಗ್ಗಜರು’ ಚಿತ್ರವು ಎವರ್ಗ್ರೀನ್ ಸಿನಿಮಾವಾಗಿದೆ.

ಮತ್ತೊಂದು ವಿಶೇಷವೆಂದರೆ, ವಿಷ್ಣು-ಅಂಬಿಯ ಸ್ನೇಹ ಬರೀ ಸಿನಿ ಜಗತ್ತಿನಲ್ಲಿ ಮಾತ್ರವಲ್ಲದೇ ನಿಜ ಜೀವನದಲ್ಲೂ ಅಪ್ಪಟ ಸ್ನೇಹಿತರೇ ಆಗಿದ್ದರು. ಅದು ಅಂದು, ಇಂದು, ಎಂದೆಂದೂ ಅಜರಾಮರ.ಇವರಿಬ್ಬರ ಸ್ನೇಹದ ಬಳಿಕ ಸ್ಯಾಂಡಲ್ ವುಡ್ ನಲ್ಲಿ ದರ್ಶನ್ ಮತ್ತು ಸುದೀಪ್ ಅವರುಗಳ ಸ್ನೇಹ ಅದೇ ಹಾದಿಯಲ್ಲಿ ಸಾಗಿತ್ತು. ಕಾಲಕ್ರಮೇಣ ಇವರಿಬ್ಬರ ಸ್ನೇಹದಲ್ಲಿ ಬಿರುಕು ಮೂಡಿತು. ಅದೆಲ್ಲಾ ಇರಲಿ, ಇದೀಗ ದರ್ಶನ್ ಹಾಗೂ ಪುನೀತ್ ರ ಸ್ನೇಹದ ಬಗ್ಗೆ ಮಾತುಗಳು ಕೇಳಿ ಬಂದಿವೆ.

ಹೌದು, ಈ ಇಬ್ಬರು ಸ್ಟಾರ್ ಗಳು ಕನ್ನಡ ಚಿತ್ರರಂಗದ ದಿಗ್ಗಜರು ಎಂಬ ಮಾತನ್ನು ಈ ಇಬ್ಬರ ಜೊತೆ ನಟಿಸಿರುವ ಹಿರಿಯ ನಟರಾದ ಕೆ. ಎಸ್ ಅಶ್ವಥ್ ರವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ದರ್ಶನ್ ಮತ್ತು ಪುನೀತ್ ರಾಜ್ ಕುಮಾರ್ ಅವರುಗಳು ನಾ ಕಂಡ ದಿಗ್ಗಜರು. ನಾನು ಎಷ್ಟೋ ಜನರನ್ನು ನೋಡದೆ ಒಂದೆರಡು ಹಂತ ಹತ್ತಿದ್ರೆ ತಲೆನೇ ನಿಲ್ಲಲ್ಲಾ. ಈ ದಿಗ್ಗಜರು ಅಸಾಮಾನ್ಯ ಎತ್ತರಕ್ಕೆ ಬೆಳೆದರೂ ವಿನಯ, ವಿಶಾಲ ಹೃದಯವಂತಿಕೆ, ನನ್ನಂತಹ ಸಾಮಾನ್ಯರ ಹತ್ತಿರನೂ ಇವರು ತೋರುವ ನಡವಳಿಕೆ ಎಷ್ಟೋ ಜನರಿಗೆ ಪಾಠ’ ಎಂದು ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಇದು, ಒಂದು ಲೆಕ್ಕದಲ್ಲಿ ನಿಜವೂ ಹೌದು, ಏಕೆಂದರೆ, ಈ ಇಬ್ಬರು ನಟರಲ್ಲಿ ಒಬ್ಬರನ್ನು ರಾಜಕುಮಾರ್ ಎಂದರೆ, ಇನ್ನೊಬ್ಬರನ್ನು ಯಜಮಾನ ಎನ್ನುತ್ತಾರೆ. ಇವರಿಬ್ಬರೂ ‘ಅರಸು’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಅವಕಾಶ ಸಿಕ್ಕರೇ, ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ.

ಅಂದ ಹಾಗೆ ಶಂಕರ್ ಅಶ್ವಥ್ ರು ದರ್ಶನ್ ರೊಂದಿಗೆ ‘ಯಜಮಾನ’ ಚಿತ್ರದಲ್ಲಿ ನಟಿಸಿದ್ದರು. ಇದೀಗ ಪುನೀತ್ ಜೊತೆಗೆ ‘ಯುವರತ್ನ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಹೀಗಾಗಿ, ಇಬ್ಬರ ವ್ಯಕ್ತಿತ್ವವನ್ನ ಬಹಳ ಹತ್ತಿರದಿಂದ ನೋಡಿದ ಈ ಹಿರಿಯ ನಟರು ಸ್ಟಾರ್ ನಟರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಗೆ ರಾಧಿಕಾ ಪಂಡಿತ್ ಸ್ಪರ್ಧಿ…!!?!!

#punithrajkumar, #darshan, #diggajaru, #balkaninews #filmnews #kannadasuddigalu #shankarashwath

Tags