ಸುದ್ದಿಗಳು

ಮೈಸೂರಿನಲ್ಲಿ ಭೇಟಿಯಾದ ಅಪ್ಪು ಆ್ಯಂಡ್ ಯಶ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ರಾಕಿಂಗ್ ಸ್ಟಾರ್ ಯಶ್… ಸ್ಯಾಂಡಲ್ ವುಡ್ ಸ್ಟಾರ್ ನಟರಲ್ಲೊಬ್ಬರು. ಇವರಿಬ್ಬರು ಮೈಸೂರಿನಲ್ಲಿ ಭೇಟಿಯಾಗಿ ತಮ್ಮ ಸಿನಿಮಾಗಳ ಕುರಿತಂತೆ ಮಾತನಾಡಿದ್ದಾರೆ.

ಹೌದು, ಇದೀಗ ಮೈಸೂರಿನಲ್ಲಿ ಸ್ಯಾಂಡಲ್ ವುಡ್ ನ ಈ ಕುಚುಕು ಗೆಳೆಯರು ಭೇಟಿಯಾಗಿ ಫೋಟೋವನ್ನು ತೆಗೆಸಿಕೊಂಡಿದ್ದಾರೆ. ಸದ್ಯ ‘ಕೆ.ಜಿ.ಎಫ್-2’ ಹಾಗೂ ‘ಯುವರತ್ನ’ ಚಿತ್ರಗಳ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ.

ಈ ಇಬ್ಬರು ಸ್ಟಾರ್ ಗಳು ಸದ್ಯ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಈ ನಡುವೆ ಒಬ್ಬರನ್ನೊಬ್ಬರು ಭೇಟಿಯಾಗಿದ್ದಾರೆ. ಅಂದ ಹಾಗೆ ಇಷ್ಟು ದಿನಗಳ ಕಾಲ ಮಂಡ್ಯದಲ್ಲಿ ದರ್ಶನ್ ಹಾಗೂ ಯಶ್ ಜೋಡೆತ್ತುಗಳಂತೆ ಚುನಾವಣಾ ಪ್ರಚಾರ ನಡೆಸಿ ಹವಾ ಸೃಷ್ಟಿಸಿದ್ದರು.

‘ಮಾರ್ಲಾಮಿ’ ಚಿತ್ರಕ್ಕೆ ಚಾಲನೆ ನೀಡಿದ ಬಿಗ್ ಬಾಸ್ ಪ್ರಥಮ್

#yash #and #punithrajkumar, #filmnews, #balkaninews #filmnews, #kannadasuddigalu

Tags