ಸುದ್ದಿಗಳು

ಅಪ್ಪುಗೆ ಬೆಳ್ಳಿಯ ಕಿರೀಟ ಗಿಫ್ಟ್ ಮಾಡಿದ ಅಭಿಮಾನಿ

ಇಂದು 44 ನೇ ಬರ್ತಡೇ ಆಚರಿಸಿಕೊಂಡ ಅಪ್ಪು

ಬೆಂಗಳೂರು.ಮಾ.17: ನಟ ಪುನೀತ್ ರಾಜ್ ಕುಮಾರ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇದೀಗ ಅಪ್ಪುಗೆ ಅಭಿಮಾನಿಯಿಂದ ಬೆಳ್ಳಿಯ ಕಿರೀಟ ಗಿಫ್ಟ್ ಮಾಡಿದ್ದಾರೆ.

ಕೋಟ್ಯಾಂತರ ಅಭಿಮಾನಿಗಳ ಪಾಲಿಕೆ ಪುನೀತ್ ರಾಜ್‍ಕುಮಾರ್ ಆರಾದ್ಯ ದೈವ. ನಿಜಕ್ಕೂ ಅಪ್ಪು ಅಭಿಮಾನಿಗಳು ಪುನೀತ್ ಅಂದರೆ ಅಥವಾ ಅವರ ಸಿನಿಮಾಗಳು ಅಂದರೆ ಸಾಕು ಕಾದಿದ್ದು ನೋಡುತ್ತಾರೆ. ಅಪ್ಪು ಸಿಕ್ಕರೆ ಸಾಕು ಅಭಿಮಾನಿಗಳು ಪ್ರೀತಿಯಿಂದ ಮುತ್ತಿಡುತ್ತಾರೆ. ಇದೀಗ ಪುನೀತ್ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಯೊಬ್ಬರು ಪುನೀತ್ ಗೆ ಬೆಳ್ಳಿಯ ಕಿರೀಟ ನೀಡಿದ್ದಾರೆ.


ಪುನೀತ್ ಗೆ ಬೆಳ್ಳಿ ಕಿರೀಟ

ಹೌದು, ಪುನೀತ್ ರಾಜ್‍ಕುಮಾರ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ಅಭಿನಾನಿಗಳಿಂದ ಬೆಳ್ಳಿ ಕಿರೀಟ ಗಿಫ್ಟ್ ಮಾಡಲಾಗಿದೆ. ಹೊಸಕೋಟೆಯಿಂದ ಬಂದ ಅಭಿಮಾನಿಗಳಿಂದ ಉಡುಗೊರೆ ಇದಾಗಿದೆ. 1ಕೆಜಿ 150ಗ್ರಾಂ ತೂಕದ ಬೆಳ್ಳಿ ಕಿರೀಟವನ್ನು ರಾಜೇಂದ್ರ ಎಂಬುವವರು ಅಪ್ಪುಗೆ ಗಿಫ್ಟ್ ನೀಡಿದ್ದಾರೆ. ಇನ್ನು ಈ 60 ಸಾವಿರ ರೂಪಾಯಿ ಬೆಲೆ ಬಾಳುವ ಬೆಳ್ಳಿ ಕಿರೀಟ ಇದಾಗಿದೆ.

ಅಭಿಮಾನಿಗಳ ಗಿಫ್ಟ್

ಸದ್ಯ ಅಪ್ಪು ಅಭಿಮಾನಿಗಳು ಅಪ್ಪು ಮಾತಿನಂತೆ ಹಾರ ತುರಾಯಿ ಕೇಕ್ ತರದೆ ಇದೀಗ ವಿಭಿನ್ನವಾಗಿ ಹುಟ್ಟುಹಬ್ಬ ಮಾಡುತ್ತಿದ್ದಾರೆ. ಸದ್ಯ ಈ ಹುಟ್ಟುಹಬ್ಬದ ಪ್ರಯುಕ್ತ ಇದೀಗ ಬೆಳ್ಳಿ ಕಿರೀಟ ಸೇರಿದಂತೆ ಹಲವಾರು ಗಿಫ್ಟ್ ಗಳು ಬಂದಿವೆ. ಇನ್ನು ಸಿನಿ ಮಂದಿ ಹಾಗೂ ನಿರ್ದೇಶಕರು ಕೂಡ ಪುನೀತ್ ಸಿನಿಮಾದ ಫಸ್ಟ್ ಲುಕ್, ಟೀಸರ್ ಗಳನ್ನು ಲಾಂಚ್ ಮಾಡಿದ್ದಾರೆ.

ಅಪ್ಪು ಬರ್ತಡೇಗೆ ‘ಪಿ.ಆರ್.ಕೆ’ ಆಡಿಯೋ ಕಂಪನಿಯಿಂದ ಗಿಫ್ಟ್

#punithrajkumar, #birthday, #fangitf, #balkaninews #kannadasuddigalu, #filmnews

Tags