ಸುದ್ದಿಗಳು

ಪುನೀತ್ ರಾಜ್ ಕುಮಾರ್ ಗೆ ಹುಟ್ಟಹಬ್ಬಕ್ಕೆ ಸಿಕ್ಕ ವಿಶೇಷ ಗಿಫ್ಟ್

ಬೆಂಗಳೂರು.ಮಾ.17: ನಟ ಪುನೀತ್ ರಾಜ್ ಕುಮಾರ್ ಇಂದು 44ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಹುಟ್ಟುಹಬ್ಬದ ನಿಮಿತ್ತ ಅಭಿಮಾನಿಗಳು ಅಪ್ಪು ಮನೆ ಮುಂದೆ ಜಮಾಯಿಸಿ, ಶುಭಕೋರಿದರು.

ಅಂದಹಾಗೆ ಈ ಬಾರಿ ತನ್ನ ಹುಟ್ಟುಹಬ್ಬಕ್ಕೆ ಕೇಕ್ ಹಾಗೂ ಹಾರಗಳನ್ನು ತರಬೇಡಿ ಎಂದು ಪುನೀತ್ ರಾಜ್ ಕುಮಾರ್ ಈಗಾಗಲೇ ಅಭಿಮಾನಿಗಳ ಬಳಿ ಮನವಿ ಮಾಡಿಕೊಂಡಿದ್ದರು. ಅಲ್ಲದೆ ಇದಕ್ಕೆ ತಗಲುವ ವೆಚ್ಚವನ್ನು ಉತ್ತಮ ಕಾರ್ಯಗಳಿಗೆ ಉಪಯೋಗಿಸಿ ಎಂದು ಮನವಿ ಮಾಡಿದ್ದರು.

ಹೀಗಾಗಿ ಅಭಿಮಾನಿಗಳು ನಟನ ಮಾತಿಗೆ ಬೆಲೆಕೊಟ್ಟು ಕೇಕ್ ಹಾಗೂ ಹಾರಗಳನ್ನ ತಂದಿಲ್ಲ. ರಾತ್ರಿ ಪುನೀತ್ ರಾಜ್ ಕುಮಾರ್ ಮನೆಯಲ್ಲಿಲ್ಲದ ಕಾರಣ ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಲು ಕಾತರದಿಂದ ಕಾಯುತ್ತಿದ್ದರು. ಇಂದು ಬೆಳಗ್ಗೆ ಪುನೀತ್ ನಿವಾಸಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಶುಭ ಕೋರಿದರು.

ಎರಡು ಚಿತ್ರಗಳ ಫಸ್ಟ್ ಲುಕ್ ಬಿಡುಗಡೆ

ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪುನೀತ್ ಅಭಿನಯದ ‘ಯುವರತ್ನ’ ಹಾಗೂ ‘ಜೇಮ್ಸ್’ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಇನ್ನೂ ಹುಟ್ಟುಹಬ್ಬದ ಸಂದರ್ಭ ಮಾತನಾಡಿರುವ ನಟ ಪುನೀತ್ ರಾಜ್ ಕುಮಾರ್, ‘ಅಭಿಮಾನಿಗಳ ಪ್ರೀತಿಗೆ ಏನು ಹೇಳಬೇಕೋ ತೋಚುತ್ತಿಲ್ಲ. ಅಭಿಮಾನಿಗಳ ಪ್ರೀತಿಗಿಂತ ದೊಡ್ಡ ಉಡುಗೊರೆಯಿಲ್ಲ. ಇವರು ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡರೆ ಅದೇ ದೊಡ್ಡ ಬಹುಮಾನ. ಈ ವರ್ಷ ‘ಯುವರತ್ನ’ ಬಿಡುಗಡೆಯಾಗುತ್ತಿದೆ. ‘ಜೇಮ್ಸ್’ ಚಿತ್ರೀಕರಣದ ಬಗ್ಗೆ ಇನ್ನೂ ಯೋಚಿಸಿಲ್ಲ’ ಎಂದಿದ್ದಾರೆ.

“ಇನ್ನು ‘ಜೇಮ್ಸ್’ ಫಸ್ಟ್ ಪೋಸ್ಟರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿಕ್ಕ ವಯಸ್ಸಿಂದಲೂ ಗಿಫ್ಟ್ ಅಂದ್ರೆ ಇಷ್ಟ ಎಂದ ಪುನೀತ್ ರಾಜ್ ಕುಮಾರ್, ನಾನು 18 ವರ್ಷ ವಯಸ್ಸಿನವನಿದ್ದಾಗ ಅಮ್ಮ ಹಾಗೂ ಅಪ್ಪ ನನಗೆ ಕಾರ್ ಗಿಪ್ಟ್ ಮಾಡಿದ್ದರು. ಇದು ನನ್ನ ಜೀವನದ ಮರೆಯಲಾಗದ ಗಿಪ್ಟ್ . ಹಾಗೆಯೇ ಬೇಸಿಗೆಯ ಬಿರುಬಿಸಿಲಿನಿಂದ ಕಂಗಾಲಾಗುತ್ತಿರುವ ಪ್ರಾಣಿಗಳು ಹಾಗೂ ಪಕ್ಷಿಗಳಿಗಾಗಿ ಮನೆಮುಂದೆ ನೀರಿಟ್ಟು ಸಹಾಯ ಮಾಡಿ” ಎಂದು ಪುನೀತ್ ಮನವಿ ಮಾಡಿಕೊಂಡರು.

ರಾಯರ ಸನ್ನಿಧಾನದಲ್ಲಿ ಜಗ್ಗೇಶ್ ಹಾಗೂ ಪರಿಮಳ

#punithrajkumar, #birthday, #filmgift, #balkaninews #firstlook, #kannadasuddigalu, #yuvarathna, #james

Tags