ಸುದ್ದಿಗಳು

ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ದ ಅಸಮಾಧಾನಗೊಂಡ ಪವರ್ ಸ್ಟಾರ್

ಕೊಡಗಿನ ಸಂತ್ರಸ್ತರಿಗೆ ನಟ ಪುನೀತ್ ಅವರು ಈಗಾಗಲೇ 1 ಲಕ್ಷ ರೂಪಾಯಿಯನ್ನು ಧಾನವಾಗಿ ನೀಡಿದ್ದಾರೆ.

ಕೊಡಗಿನ ಜನರಿಗೆ ಸಹಾಯ ಮಾಡುವ ವಿಚಾರವೊಂದರ ಕುರಿತಂತೆ ತಮ್ಮ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿರುವುದಕ್ಕೆ ಇದೀಗ ನಟ ಪುನೀತ್ ರಾಜ ಕುಮಾರ್ ಅವರು ಅಸಮಾಧಾನಗೊಂಡಿದ್ದಾರೆ.

ಬೆಂಗಳೂರು, ಆ.22: ಮಹಾಮಳೆಯಿಂದಾಗಿ ಕೇರಳ ರಾಜ್ಯ ಮತ್ತು ಕೊಡಗು ಜಿಲ್ಲೆಯಲ್ಲಿ ನೆರೆ ಪ್ರವಾಹ ಉಂಟಾಗಿದ್ದು, ಸಾಕಷ್ಟು ನೋವು ಸಂಭವಿಸಿದೆ. ಇದಕ್ಕಾಗಿ ನಟ ಪುನೀತ್ ಅವರು 1 ಲಕ್ಷ ರೂಪಾಯಿಯನ್ನು ಧಾನವಾಗಿ ನೀಡಿದ್ದಾರೆ.

ಸುಳ್ಳುಸುದ್ದಿಯ ವದಂತಿ

ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮವರ ಕಷ್ಟಕ್ಕೆ ನಾವೇ ಸ್ಪಂದಿಸಬೇಕು ಎನ್ನುವ ಮೂಲಕ, ತಮ್ಮದೊಂದು ತಂಡವನ್ನು ಕಟ್ಟಿ ಆ ಮೂಲಕ ಕೊಡಗು ಜನತೆಯ ಸಹಾಯಕ್ಕೆ ಮುಂದಾಗಿದ್ದರು. ಇದೀಗ ಈ ವಿಷಯದೊಂದಿಗೆ ಮತ್ತೊಂದು ಸುದ್ದಿಯೂ ಹಬ್ಬಿತ್ತು.

ಪುನೀತ್ ಅವರು ಕೊಡಗಿನಲ್ಲಿ ಸೂರು ಕಳೆದುಕೊಂಡವರಿಗೆ ಮನೆ ಕಟ್ಟಿಸಿಕೊಡಲ್ಲಿದ್ದಾರೆ ಎಂದು ಯಾರೋ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣ ಸೇರಿದಂತೆ ಕೆಲ ಮಾಧ್ಯಮಗಳಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿತ್ತು. ಈ ಬಗ್ಗೆ ಸ್ವತಃ ಪುನೀತ್ ಮಾತನಾಡಿದ್ದಾರೆ.

“ಈ ಸುದ್ದಿ ಶುದ್ಧ ಸುಳ್ಳು ನಾನು ಈ ರೀತಿಯ ಹೇಳಿಕೆ ನೀಡಿಲ್ಲ. ದಯವಿಟ್ಟು ಇಂತಹ ಹೇಳಿಕೆಯನ್ನು ಹಬ್ಬಿಸಬೇಡಿ. ಕೊಡಗಿನವರು ಈಗಾಗಲೇ ತಮ್ಮ ಮನೆ, ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡು, ಜೊತೆಗೆ ತಮ್ಮವರನ್ನೂ ಕಳೆದುಕೊಂಡು ನೋವಿನಲ್ಲಿರುವ ಅವರಿಗೆ ಸಹಾಯದ ಅವಶ್ಯಕತೆಯಿದೆ. ಆದರೆ ಸುಳ್ಳು ಸುದ್ದಿಗಲ್ಲ. ಎಲ್ಲರೂ ಅವರವರ ಶಕ್ತಾನುಸಾರ ಸಹಾಯ ಮಾಡಿದಾಗ ಕೊಡಗಿನ ಸಂತ್ರಸ್ತರು ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ” ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
.

Tags

Related Articles