ಸುದ್ದಿಗಳು

ಪುನೀತ್ ವಿಡಿಯೋದಲ್ಲಿ ಹೇಳಿದ್ದೇನು..?

ಬೆಂಗಳೂರು,ಏ.14: ಕವಲು ದಾರಿ ಸಿನಿಮಾ ಬಿಡುಗಡೆಯಾಗಿದೆ. ಈ ಬಗ್ಗೆ ನಟ ಪುನೀತ್ ರಾಜ್‌ಕುಮಾರ್ ಮಾತನಾಡಿದ್ದಾರೆ.

ರಿಷಿ ನಾಯಕನಟನಾಗಿ ಹಾಗೂ ಅನಂತ್ ನಾಗ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕವಲುದಾರಿ ಚಿತ್ರ ಬಿಡುಗಡೆಯಾಗಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ಕೂಡ ಸದ್ದು ಮಾಡುತ್ತಿರುವ ಈ ಚಿತ್ರ ಬಿಡುಗಡೆ ನಂತರವೂ ಸದ್ದು ಮಾಡುತ್ತಿದೆ. ಈ ಚಿತ್ರದ ಬಗ್ಗೆ ನಟ ಪುನೀತ್ ರಾಜ್‌ಕುಮಾರ್ ಮಾತನಾಡಿದ್ದಾರೆ.

ಧನ್ಯವಾದ ಹೇಳಿದ ನಟ ಪುನೀತ್

ರಾಮನವಮಿಯ ಶುಭಾಷಯ ಕೋರಿರುವ ಈ ನಟ, ಸಿನಿಮಾ ಯಶಸ್ವಿ ಪ್ರದರ್ಶನ್ ಆಗುತ್ತಿರುವ ಬಗ್ಗೆ ಮಾತನಾಡಿದ್ದಾರೆ. ಇನ್ನು ಈ ಸಿನಿಮಾ ನೋಡಿ ನಿಮ್ಮ ಸ್ನೇಹಿತರ ಜೊತೆ ನೋಡಿರುವುದು ಖುಷಿಯಾಗಿದೆ. ಪ್ರಮೋಟ್ ಮಾಡಿದ್ದೀರಾ. ಇಂಥಹ ಅಭಿಮಾನಕ್ಕೆ ನಾನೆಂದು ಚಿರರುಣಿ. ಇನ್ನು ಈ ಚಿತ್ರ ದೆಹಲಿ, ಮುಂಬೈ, ಚೆನೈ, ಹೈದ್ರಾಬಾದ್ ನಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಲ್ಲಿಯೂ ಪ್ರದರ್ಶನ ಇಂಕ್ರೀಜ್ ಆಗುತ್ತಿದೆ. ನಮ್ಮ ಕನ್ನಡಿರಿಗೆ ಹೇಳೋದು ಇಷ್ಟೆ ಸಿನಿಮಾವನ್ನು ಥೀಯೇಟರ್‌ಗೆ ಹೋಗಿ ನೋಡಿ. ಕನ್ನಡ ಸಿನಿಮಾಗಳನ್ನು ಬೆಳೆಸಿ ಎಂದಿದ್ದಾರೆ….

ಪಿ.ಆರ್.ಕೆ ಬ್ಯಾನರ್ ಚಿತ್ರ

ಇನ್ನು ಈ ಚಿತ್ರ ಪುನೀತ್ ರಾಜ್ ಕುಮಾರ್ ಅವರ ಪಿ.ಆರ್.ಕೆ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಮೊದಲ ಸಿನಿಮಾ ಇದು. ಹೇಮಂತ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಇನ್ನು ಚರಣ್ ರಾಜ್ ಸಂಗೀತ ನೀಡಿದ್ದಾರೆ. ಇನ್ನು ಚಿತ್ರದಲ್ಲಿ ಅನಂತನಾಗ್ ಸಾರ್, ರಿಷಿ ಸೇರಿದಂತೆ ಸಾಕಷ್ಟು ಮಂದಿ ತಾರಾಗಣವಿದೆ. ಥ್ರಿಲರ್ ಸಸ್ಪೆನ್ಸ್ ಚಿತ್ರವಾದ ಇದು ನೋಡುಗರಿಗೆ ಹೊಸ ಕಥೆಯನ್ನು ಹುಟ್ಟುಹಾಕುವಂತಿದೆ.

ಸೂರ್ಯ ಮತ್ತು ಮೋಹನ್ ಲಾಲ್ ನಟಿಸಿರುವ ‘ಕಪ್ಪಾನ್’ ಟೀಸರ್ ನಾಳೆ ಬಿಡುಗಡೆ!!

#sandalwood #puneethrajkuamr #kavaludari

Tags