ಸುದ್ದಿಗಳು

ಬಂದೇ ಬಿಟ್ಟರು ‘ಪುಣ್ಯಾತ್ ಗಿತ್ತೀರು’

ಬೆಂಗಳೂರು, ಮಾ.21:

ಕನ್ನಡದಲ್ಲಿ ನಾಯಕಿ ಪ್ರಧಾನ ಚಿತ್ರಗಳು ತುಂಬಾ ಕಡಿಮೆ. ಅದೇ ಕಾರಣದಿಂದ ಇದೀಗ ಹೆಣ್ಮಕ್ಕಳ ಸಿನಿಮಾ ‘ಪುಣ್ಯಾತ್ ​ಗಿತ್ತೀರು’ ಇದೇ ತಿಂಗಳು ತೆರೆ ಮೇಲೆ ಬರಲಿದೆ. ಇದರಲ್ಲಿ ನಾಲ್ಕು ನಾಯಕಿಯರು. ಈ ನಾಲ್ಕು ಜನ ನಾಯಕಿಯರು ತಮ್ಮ ಜೀವನದಲ್ಲಿ ಅನುಭವಿಸುವ ಸುಖ ಮತ್ತು ದುಃಖಗಳೇ ಈ ಕಥೆಯ ಮುಖ್ಯ ಜೀವಾಳ. ಮಮತಾ ರಾವುತ್​, ಐಶ್ವರ್ಯ, ದಿವ್ಯ ಶ್ರೀ ಹಾಗೂ ಸಂಭ್ರಮ ಈ ಚಿತ್ರದ ನಾಲ್ಕು ನಾಯಕಿಯರು.

‘ಪುಣ್ಯಾತ್ ​ಗಿತ್ತೀರು’ ಚಿತ್ರದಲ್ಲಿ ಆರತಿ ಪಾತ್ರದಲ್ಲಿ ನಟಿಸಿರುವ ಮಮತ್ ರಾವುತ್ ಇಂದು ಬಣ್ಣದ ಲೋಕದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದರೆ ಅದಕ್ಕೆ ಮಾಲಾಶ್ರೀ ಸ್ಫೂರ್ತಿ. ಈ ಚಿತ್ರದ ಸಂದರ್ಭ ಅವರು ಅದನ್ನು ನೆನಪಿಸಿಕೊಳ್ಳಲು ಮರೆಯಲಿಲ್ಲ. ಬಾಯ್ಬಡ್ಕಿ ಭವ್ಯ ಪಾತ್ರದಲ್ಲಿ ಐಶ್ವರ್ಯ ಕಾಣಿಸಿಕೊಂಡಿದ್ದಾರೆ. ಮಾತಿನ ಮಲ್ಲಿಯಾಗಿ ಕಾಣಿಸಿಕೊಂಡಿರುವ ಭವ್ಯ ಪಾತ್ರ ವೀಕ್ಷಕರ ತಲೆ ಚಿಟ್ ಹಿಡಿಸುವಂತ ಪಾತ್ರ ಎಂದು ಹೇಳಬಹುದು.

ಇನ್ನು ಕಾಮಿಡಿ ಕಿಲಾಡಿಗಳ ಮೂಲಕ ಮನೆ ಮಾತಾಗಿರುವ ದಿವ್ಯ ಶ್ರೀ ಈ ಚಿತ್ರದಲ್ಲಿ ಮೀಟರ್ ಮಂಜುಳಾ ಪಾತ್ರಕ್ಕೆ ಜೀವ ತುಂಬಿದ್ದಾರೆ.  ಟಾಮ್ ಬಾಯ್ ಗೆಟಪ್​​ ನ ಮೂಲಕ ಸಿನಿ ಪ್ರಯರ ಎದುರು ಬರಲಿರುವ ದಿವ್ಯಾಶ್ರೀ ಈ ಚಿತ್ರದಲ್ಲಿ  ಸಿಗರೇಟ್ ಸಹ ಸೇದುತ್ತಾರೆ. ಲಾಸ್ಟ್ ಬಟ್ ನಾಟ್ ಲೀಸ್ಟ್ ಎಂಬಂತೆ ಈ ಚಿತ್ರದ ಚಿತ್ರದ ನಾಲ್ಕನೇ ನಾಯಕಿ ಸಂಭ್ರಮ.ಇವರು ಸುಳ್ಳಿ ಸುಜಾತ ಪಾತ್ರದಲ್ಲಿ ಅಭಿನಯಿಸುತ್ತಿದ್ದು  ಎಲ್ಲರಿಗೂ ಸುಳ್ಳು ಹೇಳಿ ಪರಿಸ್ಥಿತಿಯಿಂದ ಎಸ್ಕೇಪ್​ ಆಗುವುದು ಇವರ ಕೆಲಸ!

ನಿರ್ದೇಶಕ ರಾಜು ಹಾಗೂ ನಿರ್ಮಾಪಕ ಸತ್ಯನಾರಾಯಣ ಅವರು ಇದೇ ಮಾರ್ಚ್ ತಿಂಗಳು ಸಿನಿಮಾವನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ಈ ಚಿತ್ರದ ಮೂಲಕ ಹೊಸ ಸಂಗೀತ ನಿರ್ದೇಶಕರು ಚಂದನವನಕ್ಕೆ ಕಾಲಿಡಲಿದ್ದಾರೆ. ನಾಲ್ಕು ಹಾಡುಗಳಿಗೆ ರಾಗ ಸಂಯೋಜನೆ ಮಾಡುವ ಮೂಲಕ ರಾಮನುಜ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಜೊತೆಗೆ ತ್ರಿಭುವನ್​ ಮಾಸ್ಟರ್ ನೃತ್ಯ ನಿರ್ದೇಶನ ‘ಪುಣ್ಯಾತ್​ಗಿತ್ತೀರು’ ಗಿದೆ.

2020 ರ ಬೇಸಿಗೆಗೆ ಬರಲಿದ್ದಾನೆ ‘ರಾಬರ್ಟ್’ !!

#sandalwood #kannadamovies #balkaninews mamatarao #divyashree

Tags