ಸುದ್ದಿಗಳು

ಸೈನಿಕನ ಪಾತ್ರದಲ್ಲಿ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ…!!!

‘ಕಿರಿಕ್ ಪಾರ್ಟಿ’, ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸೇರಿದಂತೆ ಅನೇಕ ಚಿತ್ರಗಳನ್ನು ನಿರ್ಮಿಸಿರುವ ಪುಷ್ಕರ್ ಮಲ್ಲಿಕಾರ್ಜುನಯ್ಯ ಇದೀಗ ನಟನೆಯತ್ತ ತಮ್ಮ ಚಿತ್ತ ಹರಿಸಿದ್ದಾರೆ. ವಿಶೇಷವೆಂದರೆ, ನಿನ್ನೆ(ಆ.15) ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಸೈನಿಕನ ವೇಷ ಧರಿಸಿದ್ದು, ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇದರಲ್ಲೇನು ವಿಶೇಷ ಅಂತೀರಾ, ಖಂಡಿತಾ ಇದೆ. ನಿರ್ಮಾಪಕರಾಗಿರುವ ಪುಷ್ಕರ್ ರವರು ಇದೀಗ ನಟನೆಯತ್ತ ಗಮನ ಹರಿಸಿದ್ದು, ಸೈನಿಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಹಾಗೆಯೇ ಅದಕ್ಕಾಗಿ ಭರ್ಜರಿ ಸಿದ್ದತೆ ನಡೆಸುತ್ತಿದ್ದಾರೆ. ಅಂದ ಹಾಗೆ ಇದು ಇವರು ನಟಿಸುತ್ತಿರುವ ಮೂರನೇಯ ಚಿತ್ರವಾಗಿದೆ.

ಈಗಾಗಲೇ ರಾಗಿಣಿ ನಾಯಕತ್ವದ ‘ದಿ ಟೆರರಿಸ್ಟ್’ ಚಿತ್ರದಲ್ಲಿ ಪುಷ್ಕರ್ ತನಿಖಾಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಇನ್ನು ಡಿಸೆಂಬರ್ ನಲ್ಲಿ ಅವರು ನಾಯಕನಟರಾಗಿ ಕಾಣಿಸಿಕೊಳ್ಳುವ ಸಿನಿಮಾ ಶುರುವಾಗಲಿದೆ. ಇದಾದ ಬಳಿಕ ಸೈನಿಕರ ಕಥೆಯನ್ನು ಒಳಗೊಂಡ ಸಿನಿಮಾ ಪ್ರಾರಂಭವಾಗುತ್ತದೆ.

‘ಇತ್ತಿಚೆಗೆ ನನಗೆ ನಟನಾಗಬೇಕೆಂದು ಅನಿಸಿತು. ಸದ್ಯ ನನ್ನ ನಿರ್ಮಾಣದಲ್ಲಿ ಐದಾರು ಸಿನಿಮಾಗಳು ಬರುತ್ತಿವೆ. ಹಾಗೆಯೇ ಸೈನಿಕರ ಕಥೆಯನ್ನು ಸಿನಿಮಾ ಮಾಡಬೇಕೆಂದು, ಅದರಲ್ಲಿ ನಾನೇ ನಟಿಸಬೇಕೆಂದು ಕನಸು ಕಂಡೆ. ಹಾಗೆಯೇ ಇದೇ ನನ್ನ ಮೊದಲ ಸಿನಿಮಾ ಆಗಬೇಕೆಂದುಕೊಂಡಿದ್ದೆ. ಆದರೆ, ಇದು ದೊಡ್ಡ ಸಿನಿಮಾ, ಸುಮಾರು 2 ವರ್ಷಗಳು ಬೇಕಾಗಬಹುದು. ಅದಕ್ಕೂ ಮುನ್ನ ನನ್ನ ನಟನೆಯಲ್ಲಿ ಬೇರೆ ಸಿನಿಮಾಗಳು ಮೂಡಿ ಬರಲಿವೆ’ ಎನ್ನುತ್ತಾರೆ ಪುಷ್ಕರ್.

ಸ್ವಾರ್ಥಕ್ಕಾಗಿ ಕನ್ನಡಿಗರ ಬಳಿ ಬರುವ ಪರಭಾಷಾ ಸ್ಟಾರ್ ಗಳೇ ಎಲ್ಲಿದ್ದೀರಿ..?: ಯುವರಾಜ್ ಕುಮಾರ್

#pushkarmallikarjunaih #producer #playSolderRole

Tags