ಸುದ್ದಿಗಳು

ಹೊಸ ಅವತಾರದಲ್ಲಿ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ

ಬೆಂಗಳೂರು, ಮೇ.23:

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ನಿರ್ಮಾಣ ಜವಾಬ್ದಾರಿ ಹೊತ್ತಿರುವ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು ಸದ್ಯ ಸಿನಿಮಾ ಬ್ಯುಸಿಯಲ್ಲಿದ್ದಾರೆ. ಈಗಾಗಲೇ ಸಿನಿಮಾ ಶೂಟಿಂಗ್ ನಡೆಯುತ್ತಿದ್ದು, ಬಹುಭಾಷೆಯಲ್ಲಿ ಬಿಡುಗಡೆಯಾಗಲಿದೆ. ಸದ್ಯ ಪುಷ್ಕರ್ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದರ ಜೊತೆಗೆ ಕುತೂಹಲ ಹುಟ್ಟುಹಾಕಿದೆ.

ಕುತೂಹಲ ಮೂಡಿಸಿದ ಟ್ಯಾಗ್ ಲೈನ್

ಹೌದು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಹೊಸ ಫೋಟೋವೊಂದನ್ನು ಹಂಚಿಕೊಂಡಿದ್ದು,  ಈ ಫೋಟೋದಲ್ಲಿ ಪುಷ್ಕರ್ ಖಡಕ್‌ ಲುಕ್‌ ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಫೋಟೋ ಗೆ ಟ್ಯಾಗ್ ಲೈನ್ ನೀಡಿದ್ದು, ಹೊಸ ಜರ್ನಿ ಶುರುವಾಗಲಿದೆ ಎಂದು ಬರೆದುಕೊಂಡಿದ್ದಾರೆ. ಸದ್ಯ ಇದನ್ನು ನೋಡಿದವರಿಗೆ ನಿಜಕ್ಕೂ ಕುತೂಹಲ ಆಗಿರೋದಂತೂ ಸತ್ಯ. ಯಾಕಂದರೆ ಪುಷ್ಕರ್ ಹೊಸ ಸಿನಿಮಾದಲ್ಲಿ ಏನಾದರೂ ನಟಿಸುತ್ತಿದ್ದಾರಾ ಎಂಬ ಪ್ರಶ್ನೆ ಕಾಡತೊಡಗಿದೆ. ಸದ್ಯ ಇದಕ್ಕೆ ಪುಷ್ಕರ್ ಉತ್ತರಿಸಬೇಕಾಗಿದೆ.

‘ಪೈಲ್ವಾನ್’ ಸಿನಿಮಾ: ಬಯಲಾಯ್ತು ಸುನೀಲ್ ಶೆಟ್ಟಿ ಪಾತ್ರ

#PushkaraMallikarjunaiah #PushkaraMallikarjunaiahmovies #PushkaraMallikarjunaiahinstagram #PushkaraMallikarjunaiahtwitter

Tags