ಸುದ್ದಿಗಳು

‘ಪ್ಯಾರಿಸ್ ಪ್ಯಾರಿಸ್’ಗೆ ಸೆನ್ಸಾರ್ ಸಮಸ್ಯೆ: ಕಾಜೋಲ್ ಕೊಟ್ಟ ಉತ್ತರ ಹೀಗಿತ್ತು…

‘ಕ್ವೀನ್’ ತಮಿಳು ರಿಮೇಕ್ ‘ಪ್ಯಾರಿಸ್ ಪ್ಯಾರಿಸ್’ ಸೆನ್ಸಾರ್ ಸಮಸ್ಯೆ ಎದುರಿಸುತ್ತಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ‘ಪ್ಯಾರಿಸ್ ಪ್ಯಾರಿಸ್’ ನಾಯಕಿ ಕಾಜೋಲ್ ಅಗರ್ವಾಲ್ “‘ಪ್ಯಾರಿಸ್ ಪ್ಯಾರಿಸ್’ ನಂತಹ ಚಿತ್ರ ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಕೇಳಿದರೆ ನನಗೆ ಆಶ್ಚರ್ಯವಾಗುತ್ತದೆ. ನಾವು ಮೂಲ ಚಿತ್ರದಿಂದ ಏನನ್ನೂ ಬದಲಾಯಿಸಿಲ್ಲ ಅಥವಾ ಹೆಚ್ಚಿನದನ್ನು ಸೇರಿಸಿಲ್ಲ. ಆದರೂ ಸಮಸ್ಯೆ ಎದುರಿಸುತ್ತಿದೆ. ‘ಕ್ವೀನ್’ ರೀಮೇಕ್ ಇತರ ಭಾಷೆಗಳಲ್ಲಿ ಯಾವುದೇ ಸೆನ್ಸಾರ್ ಸಮಸ್ಯೆಗಳನ್ನು ಎದುರಿಸಲಿಲ್ಲ. ಆದರೆ ತಮಿಳು ಸೆನ್ಸಾರ್ ಮಂಡಳಿಯ ನಿಯಮಗಳು ಹಾಗೆ ಇರಬಹುದು!” ಎಂದು ತಿಳಿಸಿದ್ದಾರೆ.

Image result for kajal agarwal breast press scene

ತೆಲುಗು, ಕನ್ನಡ ಮತ್ತು ಮಲಯಾಳಂನ ಭಾಷೆಯ ‘ಕ್ವೀನ್’ ರೀಮೇಕ್ ಗೆ ಹೋಲಿಸಿದರೆ, ತಮಿಳು ರೀಮೇಕ್ ನಲ್ಲಿ ಹೆಚ್ಚು ಬೋಲ್ಡ್ ದೃಶ್ಯಗಳಿವೆ. ಕಾಜಲ್ ಅವರ ಸ್ತನವನ್ನು ಪ್ರೆಸ್ ಮಾಡುವ ದೃಶ್ಯವು ಈಗಾಗಲೇ ಸಂಚಲನ ಸೃಷ್ಟಿಸಿದೆ.

ತಮಿಳು ಆವೃತ್ತಿಯಲ್ಲಿ ವಯಸ್ಕರ ಸಂಭಾಷಣೆ ಮತ್ತು ಬಾತ್ ರೂಮ್ ನಲ್ಲಿ ಉಡುಪು ಬದಲಾಯಿಸುವ ದೃಶ್ಯಗಳಿವೆ. ಆದರೆ ದಕ್ಷಿಣ ಭಾರತದ ಇತರ ಯಾವುದೇ ಆವೃತ್ತಿಗಳಲ್ಲಿ ಈ ವಿವಾದಾತ್ಮಕ ಅಂಶಗಳಿಲ್ಲ. ಅದಕ್ಕಾಗಿಯೇ ಚಿತ್ರ ಯಾವುದೇ ವಿವಾದವಿಲ್ಲದೆ ಬಿಡುಗಡೆಯಾಯಿತು. ಆದರೆ, ‘ಪ್ಯಾರಿಸ್ ಪ್ಯಾರಿಸ್’ ಮಾತ್ರ ಬಿಡುಗಡೆಗೆ ಭಾರೀ ಅಡೆತಡೆಗಳನ್ನು ಎದುರಿಸುತ್ತಿದೆ.

ತೆರೆ ಮೇಲೆ ಬರಲಿದೆ ಇನ್ಫೋಸಿಸ್ ನಾರಾಯಣ ಮೂರ್ತಿ ಜೀವನಾಧಾರಿತ ಚಿತ್ರ

#balkaninews #parisparis #kajalagarwal #censor

Tags