ಸುದ್ದಿಗಳು

ಆರ್ ಚಂದ್ರುಗೆ ಒಲಿದು ಬಂತು ಉತ್ತಮ ನಿರ್ದೇಶಕ ಪ್ರಶಸ್ತಿ

‘ಬ್ರಹ್ಮ’ ಚಿತ್ರದ ಬಳಿಕ ಮತ್ತೊಮ್ಮೆ ನಟ ಉಪೇಂದ್ರರೊಂದಿಗೆ, ಆರ್ ಚಂದ್ರು ‘ಐ ಲವ್ ಯೂ’ ಸಿನಿಮಾ ಮಾಡಿದರು. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಗೆದ್ದಿದ್ದು ಅಲ್ಲದೇ ಯಶಸ್ವಿ 75 ನೇ ದಿನದತ್ತ ಮುನ್ನುಗ್ಗುತ್ತಿದೆ.

ಸದ್ಯ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರದ ಚಿತ್ರದ ನಿರ್ದೇಶನಕ್ಕಾಗಿ ಆರ್ ಚಂದ್ರು ಅವರಿಗೆ ಉತ್ತಮ ನಿರ್ದೇಶಕ ಪ್ರಶಸ್ತಿ ಒಲಿದು ಬಂದಿದೆ. ಕರ್ನಾಟಕ ಚಿತ್ರ ರಸಿಕರ ಸಂಘ (ರಿ) ಬೆಂಗಳೂರು, ಈ ಸಂಘದವರು ಈ ಪ್ರಶಸ್ತಿಯನ್ನು ನೀಡಿದ್ದಾರೆ.

‘ಐ ಲವ್ ಯೂ’ ಚಿತ್ರದ ಚಿತ್ರರಂಗದಲ್ಲಿ ಮತ್ತೊಮ್ಮೆ ಉಪ್ಪಿ ಹವಾ ಜೋರಾಗಿದೆ. ಈ ಚಿತ್ರದ ಮೂಲಕ ಆರ್ ಚಂದ್ರು ಮತ್ತೊಮ್ಮೆ ತಮ್ಮ ಟ್ಯಾಲೆಂಟ್ ಪ್ರೂವ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಶಿವಣ್ಣನಿಗೆ ‘ಜಂಗಮ’ ಸಿನಿಮಾ ಮಾಡಲು ಅಣಿಯಾಗುತ್ತಿದ್ದಾರೆ.

ಕನ್ನಡ ಚಿತ್ರ ರಸಿಕರ ಸಂಘವು ಪ್ರತಿ ವರ್ಷವೂ ಬಿಡುಗಡೆಯಾದ ಕನ್ನಡ ಚಿತ್ರಗಳಲ್ಲಿನ ಶ್ರೇಷ್ಠರಿಗೆ, ದೂರದರ್ಶನ ಕಲಾವಿದರಿಗೆ, ತಂತ್ರಜ್ಞರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಾ ಬಂದಿದೆ. ಇದೀಗ ‘ಐ ಲವ್ ಯೂ’ ಚಿತ್ರದ ನಿರ್ದೇಶನಕ್ಕಾಗಿ ಆರ್ ಚಂದ್ರು ಅವರಿಗೆ ಉತ್ತಮ ನಿರ್ದೇಶಕ ಪ್ರಶಸ್ತಿ ಸಿಕ್ಕಿದೆ.

ಹೊಸ ಸಂಚಲನ ಸೃಷ್ಟಿಸಿದ ಟಾಲಿವುಡ್ ಪ್ರಿನ್ಸ್!!?!!

#rchandru #bestdirector award #iloveyou, #upendra, #rachitharam #kannadafilm, #kannadamovie, #kannadanews, #kannadanewmovie, #kannadacine, #latestkannadamovie, #sandalwoodmovies  ‍#kannadasuddigalu

Tags