ಸುದ್ದಿಗಳು

ಬಿಡುಗಡೆಗೆ ರೆಡಿಯಾದ ಬಿಗ್ ಬಾಸ್ ದಿವಾಕರನ ‘ರೇಸ್’ !!

ಬೆಂಗಳೂರು,ಮೇ.20: ಬಿಗ್ ಬಾಸ್ ರನ್ನರ್ ಅಪ್ ದಿವಾಕರ್ ಅವರು ಗಾಂಧಿನಗರದಲ್ಲಿ ತಮ್ಮ ‘ರೇಸ್’ ಪ್ರಾರಂಭ ಮಾಡಿದ್ದಾರೆ. ಬಿಗ್ ಬಾಸ್ ಮೂಲಕ ಚಿರ ಪರಿಚಿತರಾಗಿ, ರನ್ನರ್ ಅಪ್ ಸ್ಥಾನ ಗಳಿಸುವ ಮೂಲಕ ಇಡೀ ಕರ್ನಾಟಕಕ್ಕೆ ಗುರುತಾದ ನಟ ಹಾಗೂ ಬಿಗ್ ಬಾಸ್ ಸ್ಪರ್ಧಿ ದಿವಾಕರ್ ಸದ್ಯ ಗಾಂಧಿನಗರದಲ್ಲಿ ತಮ್ಮ ಹವಾ ಸೃಷ್ಟಿ ಮಾಡಲು ಹೊರಟಿದ್ದಾರೆ. ವಿಭಿನ್ನ ಕಾನ್ಸೆಪ್ಟ್ ನೊಂದಿಗೆ ರೇಸ್ ಮೂಲಕ ಜನರನ್ನು ರಂಜಿಸೋದಿಕ್ಕೆ ದಿವಾಕರ್ ರೆಡಿಯಾಗಿದ್ದು ಇತ್ತೀಚೆಗಷ್ಟೇ ಈ ಸಿನಿಮಾದ ಆಡಿಯೋ ಮತ್ತು ಟ್ರೇಲರ್ ಲಾಂಚ್ ಕಾರ್ಯಕ್ರಮ ನಡೆಯಿತು. ಅತಿಥಿಗಳಾಗಿ ‘ಲಹರಿ’ ವೇಲು, ನಿರ್ದೇಶಕರಾದ ಕೆ. ಮಾದೇಶ್, ಸಂತೋಷ್ ಆನಂದ್​ರಾಮ್ ಆಗಮಿಸಿ, ‘ರೇಸ್’ ಬಳಗಕ್ಕೆ ಶುಭ ಹಾರೈಸಿದರು

Prajavani

ಇದೇ 24ರಂದು ಬಿಡುಗಡೆ

ಈ ಚಿತ್ರವು ಇದೇ 24ರಂದು ಬಿಡುಗಡೆಯಾಗಲು ಸಿದ್ದವಾಗಿದೆ.. ತೆಲುಗು ಮೂಲದ ಹೇಮಂತ್ ಕೃಷ್ಣ ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. 18 ವರ್ಷಗಳಿಂದ ಟಾಲಿವುಡ್​ನಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಅವರಿಗಿದೆ. ಮೊದಲ ಚಿತ್ರವನ್ನು ಕನ್ನಡದಲ್ಲೇ ಮಾಡಬೇಕೆಂಬ ಬಯಕೆಯಿಂದ ‘ರೇಸ್’ ಸಿದ್ಧಗೊಳಿಸಿದ್ದಾರೆ.

Image result for ದಿವಾಕರ್ ‘ರೇಸ್

ಸಸ್ಪೆನ್ಸ್ ನಲ್ಲಿಯೇ ಸಾಗುವ ಕಥೆ

ಟ್ರೇಲರ್‌ನಲ್ಲಿ ಯಾರೋ ಕೊಲೆ ಮಾಡಲು ಮುಂದಾಗುವ ದೃಶ್ಯಗಳು ಹಾಗೂ ಕೊಲೆ ಮಾಡಲು ಮುಂದಾದವರನ್ನು ಹಿಡಿಯಲು ಪ್ರಯತ್ನ ಪಡುವ ದಿವಾಕರ್, ಮತ್ತೊಂದು ಕಡೆ ಸಸ್ಪೆನ್ಸ್ ನಲ್ಲಿಯೇ ಸಾಗುವ ಕಥೆ, ವಿಭಿನ್ನವಾಗಿ ಮೂಡಿ ಬಂದಿದೆ.

ಎಸ್ವಿಆರ್ ಬ್ಯಾನರ್ನಡಿಯಲ್ಲಿ ಸಿನಿಮಾ

ಎಸ್​ವಿಆರ್ ಬ್ಯಾನರ್​ ನಡಿಯಲ್ಲಿ ಈ ಚಿತ್ರಕ್ಕೆ ವೆಂಕಟ್ ರಾವ್  ಬಂಡವಾಳ ಹೂಡಿದ್ದಾರೆ. ‘ಪ್ರಾಣ ಕೊಡುವೆ ಗೆಳತಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಕ್ಷಾ ಶೆಣೈ ‘ರೇಸ್’ ಚಿತ್ರಕ್ಕೆ ನಾಯಕಿ. ಈ ಚಿತ್ರವು  ಮೇ.24 ರಂದು ಬಿಡುಗಡೆಗೆ ಸಿದ್ಧವಾಗಿದ್ದು ಏನೆಲ್ಲಾ ಸ್ಪೆಷಲ್ ಎಲಿಮೆಂಟ್ ಇರುತ್ತೆ ಎಂದು ನೋಡಬೇಕಾದರೆ ಚಿತ್ರಮಂದಿರಕ್ಕೆ ಹೋಗಿ ಚಿತ್ರನೋಡಲೇ ಬೇಕು..

ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ ಕಮಲ್ ಹಾಸನ್

#bigbossdiwakar #racemovie #releasedate #may24

 

Tags