ಸುದ್ದಿಗಳು

ಯಶ್ ಗಾಗಿಯೇ ‘ರಾಣಾ’ ಕಥೆ: ಶಿವಣ್ಣ ನಟಿಸುತ್ತಿಲ್ಲ..!!!

ಇತ್ತೀಚೆಗಷ್ಟೇ ಸಾಕಷ್ಟು ಸದ್ದು ಮಾಡುತ್ತಿರುವ ಸುದ್ದಿ

ಬೆಂಗಳೂರು.ಫೆ.12

ಎ.ಹರ್ಷ ನಿರ್ದೇಶನದಲ್ಲಿ ಮೂಡಿ ಬರಲು ಸಿದ್ದವಾಗಿರುವ ‘ರಾಣಾ’ ಚಿತ್ರದಲ್ಲಿ ಬದಲಾವಣೆಯಾಗಿದ್ದು, ರಾಕಿಂಗ್ ಸ್ಟಾರ್ ಯಶ್ ಬದಲಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಇತ್ತೀಚೆಗಷ್ಟೇ ಸಾಕಷ್ಟು ಸದ್ದು ಮಾಡಿತ್ತು. ಈ ಬಗ್ಗೆ ಸ್ವತಃ ನಿರ್ದೇಶಕರೇ ಮಾತನಾಡಿದ್ದಾರೆ.
ಯಶ್.. ಅವರೇ ನಟಿಸಲಿದ್ದಾರೆ.

“ಇದೆಲ್ಲಾ ಸತ್ಯಕ್ಕೆ ದೂರವಾದ ಮಾಹಿತಿ. ಯಶ್ ಜೊತೆಗೆ ‘ರಾಣಾ’ ಆಗುವುದು ನೂರಕ್ಕೆ ನೂರು ನಿಜ. ಅವರೇ ನಾಯಕನಟರಾಗಿ ನಟಿಸಲಿದ್ದಾರೆ. ಅದರಲ್ಲಿ ಯಾವುದೇ ಬದಲಾವಣೆಗಳಿಲ್ಲ. ಈಗ ಕೇಳಿ ಬರುತ್ತಿರುವ ಸುದ್ದಿಯಲ್ಲಿ ಯಾವುದೇ ತಿರುಳಿಲ್ಲ. ಒಂದು ವೇಳೆ ಅಂಥ ಬದಲಾವಣೆಗಳಾಗಿದ್ದರೆ ನಾನೇ ಮುಂದೆ ಬಂದು ಹೇಳುತ್ತಿದ್ದೆ’ ಎಂದು ನಿರ್ದೇಶಕ ಎ. ಹರ್ಷ ಹೇಳಿದ್ದಾರೆ.

ಇದು ಯಶ್ ರಿಗಾಗಿ ಬರೆದ ಕಥೆ

“ಈಗಾಗಲೇ ರಾಣಾ.. ಚಿತ್ರಕ್ಕೆ ಸಂಬಂಧಿತ ಕೆಲಸಗಳು ಬಹುತೇಕ ಕೊನೆಯ ಹಂತದಲ್ಲಿವೆ. ಸದ್ಯ ಯಶ್ ‘ಕೆ.ಜಿ.ಎಫ್ 2’ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರದ ನಂತರ ನಮ್ಮ ಚಿತ್ರದ ಕೆಲಸಗಳು ಶುರುವಾಗುತ್ತವೆ. ಅಂದರೆ 2020ರ ವೇಳೆಗೆ ನಮ್ಮ ಸಿನಿಮಾದಲ್ಲಿ ಯಶ್ ಭಾಗವಹಿಸಲಿದ್ದಾರೆ. ಇನ್ನು ನಾನು ಶಿವರಾಜ್ಕುಮಾರ್ ಅವರ ದೊಡ್ಡ ಅಭಿಮಾನಿ. ಅವರ ಜೊತೆಗೆ ಇನ್ನೊಂದು ಸಿನಿಮಾ ಮಾಡುವ ಅವಕಾಶ ಸಿಕ್ಕರೆ, ಅವರಿಗಾಗಿಯೇ ಬೇರೆ ಕಥೆ ಸಿದ್ಧ ಮಾಡಿಕೊಳ್ಳುತ್ತೇನೆಯೇ ಹೊರತು, ಬೇರೆ ಹೀರೋಗಾಗಿ ಮಾಡಿದ ಕಥೆಯನ್ನು ಶಿವಣ್ಣಗೆ ಮಾಡುವುದಿಲ್ಲ” ಎಂದು ಹೇಳಿದ್ದಾರೆ.

ಜಯಣ್ಣ ಕಂಬೈನ್ಸ್ ನ ಸಿನಿಮಾ

ಈಗಾಗಲೇ ‘ಜಾನು’, ‘ಡ್ರಾಮಾ’, ‘ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿ’, ಗೂಗ್ಲಿ’, ‘ಗಜಕೇಸರಿ’ ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ಮಿಸಿರುವ ಜಯಣ್ಣ ಕಂಬೈನ್ಸ್ ಈ ‘ರಾಣಾ’ ಚಿತ್ರವನ್ನು ಸಹ ನಿರ್ಮಿಸುತ್ತಿದೆ. ಇದರೊಂದಿಗೆ ‘ಮೈ ನೇಮ್ ಈಸ್ ಕಿರಾತಕ’ ಚಿತ್ರವೂ ಸಹ ಇದೇ ಬ್ಯಾನರ್ ನ ಮತ್ತೊಂದು ಚಿತ್ರ. ಹೀಗಾಗಿ ಈ ಸಿನಿಮಾ ತಡವಾಗಿಯಾದರೂ ಸಹ ಖಂಡಿತ ಶುರುವಾಗುತ್ತದೆ.

ಇನ್ನು ಎ. ಹರ್ಷ ನಿರ್ದೇಶನ, ನಿಖಿಲ್ಕುಮಾರ್ ನಟನೆಯ ‘ಸೀತಾರಾಮ ಕಲ್ಯಾಣ’ ಚಿತ್ರ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದ್ದು, ಸದ್ಯ 25ನೇ ದಿನದತ್ತ ದಾಪುಗಾಲಿಡುತ್ತಿದೆ.

ಖಾಕಿ ತೊಟ್ಟು ಖದರ್ ತೋರಿಸಲು ರೆಡಿಯಾದ ಚಿರು!!

#raana, #balkaninews #filmnews, #kannadasuddigalu, #shivarajkumar, #yash, #nikhilkumar,

Tags