ಸುದ್ದಿಗಳು

ನೈಜ ಘಟನೆಗಳ ‘ರಾಂಚಿ’ ಚಿತ್ರದ ಚಿತ್ರೀಕರಣ ಮುಕ್ತಾಯ

ಕಳ್ಳ ಪೋಲಿಸರ ನಡುವೆ ನಿರ್ದೇಶಕನ ಪರದಾಟ

ಬೆಂಗಳೂರು.ಮೇ.19: ಜಾರ್ಖಂಡ್ ಪೊಲೀಸರು 7 ವರ್ಷಗಳಿಂದ ಹುಡುಕುತ್ತಿದ್ದ ಅಂತಾರಾಜ್ಯ ದರೋಡೆಕೋರರನ್ನು ಬಂಧಿಸಲು ಸಹಾಯ ಮಾಡಿದ ಘಟನೆಯನ್ನಿಟ್ಟುಕೊಂಡು ಮಾಡಿರುವ ‘ರಾಂಚಿ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.

ಹೌದು, ರಂಗಭೂಮಿ ಹಿನ್ನೆಲೆಯ ನಿರ್ದೇಶಕ ಶಶಿಕಾಂತ್ 2009 ರ ಈ ಘಟನೆಯನ್ನಿಟ್ಟುಕೊಂಡು ಈ ಚಿತ್ರವನ್ನು ಮಾಡಿದ್ದು, ನಾಯಕನಾಗಿ ಪ್ರಭು ಮುಂಡ್ಕರ್ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಅವರದ್ದು, ನಿರ್ದೇಶಕನ ಪಾತ್ರ. ಸಿಂಧೂ ಮೂರ್ತಿ ಹಾಗೂ ದಿವ್ಯಾ ನಾಯಕಿಯಾಗಿದ್ದಾರೆ.

Image result for kannada film ranchi

ಅಂದ ಹಾಗೆ ಈ ಚಿತ್ರದ ಮುಖ್ಯ ಕಥೆ ರಾಂಚಿಯಲ್ಲಿ ನಡೆದಿದ್ದರಿಂದ ಚಿತ್ರವನ್ನೂ ಸಹ ಅಲ್ಲಿಯೇ ಶೂಟ್ ಮಾಡಲಾಗಿದೆ. ಈ ಚಿತ್ರಕ್ಕಾಗಿ ನಿರ್ದೇಶಕ ಶಶಿಕಾಂತ್ ರಿಗೆ ರಾಂಚಿಯ ಪೊಲೀಸ್ ಅಧಿಕಾರಿ ಪ್ರವೀಣ್ ಕುಮಾರ್ ಸಿಂಗ್ ಅವರು ಸಾಕಷ್ಟು ಸಹಾಯ ಮಾಡಿದ್ದಾರೆ. ಹಾಗೆಯೇ ಈ ಪೋಲೀಸ್ ಅಧಿಕಾರಿಯ ಪಾತ್ರವನ್ನು ತೋಥಾ ರಾಯ್ ಚೌಧರಿ ಮಾಡುತ್ತಿದ್ದಾರೆ.

2009 ರಲ್ಲಿ ನಿರ್ದೇಶಕ ಶಶಿಕಾಂತ್ ಅವರಿಗೆ ರಾಂಚಿಯಿಂದ, ತಾನು ಸರ್ಕಾರದ ಪರವಾಗಿ ಕರೆ ಮಾಡುತ್ತಿರುವುದಾಗಿ ಒಬ್ಬ ವ್ಯಕ್ತಿ ಕಾಲ್ ಮಾಡಿ ಹೇಳಿಕೊಂಡಿದ್ದಾನೆ. ಮಾತುಕತೆ ವೇಳೆ ಸಾಕ್ಷ್ಯ ಚಿತ್ರವನ್ನು ಮಾಡುವ ಕುರಿತು ವ್ಯಕ್ತಿ ಆಸಕ್ತಿ ತೋರಿದ್ದಾನೆ.

ವ್ಯಕ್ತಿಯ ಮಾತು ಕೇಳಿದ ನಿರ್ದೇಶಕ ಶಶಿಕಾಂತ್ ಅವರು ರಾಂಚಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರಿಗೆ ಆಘಾತವಾಗಿದೆ. ಕರೆ ಮಾಡಿದ್ದ ವ್ಯಕ್ತಿ ದರೋಡೆಕೋರರು ಎಂಬುದು ತಿಳಿದುಬಂದಿದೆ. ಬಳಿಕ ಹೇಗೋ ಪ್ರಾಣ ಉಳಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಬಳಿಕ ಸರ್ಕಾರ ಹಾಗೂ ಪೊಲೀಸರಿಗೆ ಸಹಾಯ ಮಾಡಿ ದರೋಡೆಕೋರರ ಗುಂಪು ಬಂಧಿಸಲು ಸಹಾಯ ಮಾಡಿದ್ದಾರೆ. ಇದೇ ಕಥೆಯನ್ನೇ ಇದೀಗ ನಿರ್ದೇಶಕ ಶಶಿಕಾಂತ್ ತೆರೆಗೆ ತರುತ್ತಿದ್ದಾರೆ.

ಇನ್ನು ನಿರ್ದೇಶಕ ಶಶಿಕಾಂತ್ ಈ ಹಿಂದೆ ‘ಬಾಲ್ ಪೆನ್’, ‘ಐಪಿಸಿ ಸೆಕ್ಷನ್ 300’ ಸಿನಿಮಾಗಳನ್ನು ಮಾಡಿದ್ದರು. ಈ ಬಾರಿ ನೈಜ ಘಟನೆ ಆಧಾರಿತ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಚಿತ್ರಕ್ಕೆ ಸಂದೀಪ್ ಚೌಟ ಸಂಗೀತವಿದೆ.

ಹರಿಪ್ರಿಯಾಗೆ ನೋಟೀಸ್..?

#raanchi, #movie, #completed, #balkaninews #filmnews, #kannadasuddigalu

Tags