ಸುದ್ದಿಗಳು

ಗಾಂಧಿನಗರದಲ್ಲಿ ದಿವಾಕರ್ ‘ರೇಸ್’ ಪ್ರಾರಂಭ!!

ಬೆಂಗಳೂರು,ಮೇ.15: ಬಿಗ್ ಬಾಸ್ ರನ್ನರ್ ದಿವಾಕರ್ ಅವರು ಗಾಂಧಿನಗರದಲ್ಲಿ ತಮ್ಮ ರೇಸ್ ಪ್ರಾರಂಭ ಮಾಡಿದ್ದಾರೆ.

ಬಿಗ್ ಬಾಸ್ ಮೂಲಕ ಚಿರ ಪರಿಚಿತರಾಗಿ, ರನ್ನರ್ ಅಪ್ ಸ್ಥಾನ ಗಳೀಸುವ ಮೂಲಕ ಇಡೀ ಕರ್ನಾಟಕಕ್ಕೆ ಗುರುತಾದ ನಟ ಹಾಗೂ ಬಿಗ್ ಬಾಸ್ ಸ್ಪರ್ಧಿ ದಿವಾಕರ್ ಸದ್ಯ ಗಾಂಧಿನಗರದಲ್ಲಿ ತಮ್ಮ ಹವಾ ಸೃಷ್ಟಿ ಮಾಡಲು ಹೊರಟಿದ್ದಾರೆ. ವಿಭಿನ್ನ ಕಾನ್ಸೆಪ್ಟ್ ನೊಂದಿಗೆ ರೇಸ್ ಮೂಲಕ ಜನರನ್ನು ರಂಜಿಸೋದಿಕ್ಕೆ ದಿವಾಕರ್ ರೆಡಿಯಾಗಿದ್ದು, ಇತ್ತೀಚೆಗೆ ಈ ಸಿನಿಮಾದ ಟ್ರೇಲರ್ ಹಾಗೂ ಆಡಿಯೋ ಲಾಂಚ್ ಕಾರ್ಯಕ್ರಮ ನಡೆದಿದೆ.

Image may contain: 4 people, sunglasses, beard and text

ವಿಭಿನ್ನ ಕಥೆಯ ರೇಸ್

ರೇಸ್ ಎಂಬ ವಿಭಿನ್ನ ಟೈಟಲ್ ಮೂಲಕ ಸದ್ದು ಮಾಡುತ್ತಿದ್ದಾರೆ ದಿವಾಕರ್. ಸದ್ಯ ಟ್ರೇಲರ್ ಹಾಗೂ ಸಾಂಗ್ಸ್ ಮೂಲಕ ಸೌಂಡ್ ಮಾಡಲು ರೆಡಿಯಾದ ಈ ಸಿನಿಮಾಗೆ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ ಹೇಮಂತ್. ಅಂದಹಾಗೆ ಈ ಸಿನಿಮಾದಲ್ಲಿ ನಾಯಕನಾಗಿ ಸಂತೋಷ್ ಹಾಗೂ ಬಿಗ್ ಬಾಸ್ ಖ್ಯಾತಿಯ ದಿವಾಕರ್ ಕಾಣಿಸಿಕೊಂಡಿದ್ದಾರೆ. ದಿವಾಕರ್ ಪೋಲಿಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಚಿತ್ರದಲ್ಲಿ ನಾಯಕಿಯಾಗಿ ಅಂಜನಿ ಪಾತ್ರದಲ್ಲಿ ರಕ್ಷಾ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಪೋಸ್ಟರ್‌ಗಳಿಂದಲೇ ರೇಸ್ ಸಿನಿಮಾ ಸದ್ದು ಮಾಡಿದೆ. ಇದೀಗ ಟ್ರೇಲರ್ ಮೂಲಕ ಮತ್ತಷ್ಟು ಸದ್ದು ಜೋರಾಗಿದೆ.

ಹೇಗಿದೆ ಟ್ರೇಲರ್..?

ಹೌದು, ಬಿಡುಗಡೆಯಾದ ಟ್ರೇಲರ್‌ನಲ್ಲಿ ಯಾರೋ ಕೆಲೆ ಮಾಡಲು ಮುಂದಾಗುವ ದೃಷ್ಯಗಳು. ಹಾಗೂ ಕೊಲೆ ಮಾಡಲು ಮುಂದಾದವರನ್ನು ಹಿಡಿಯಲು ಪ್ರಯತ್ನ ಪಡುವ ದಿವಾಕರ್, ಮತ್ತೊಂದು ಕಡೆ ಸಸ್ಪೆನ್ಸ್ ನಲ್ಲಿಯೇ ಸಾಗುವ ಕಥೆ, ಹೀಗೆ ವಿಭಿನ್ನವಾಗಿ ಮೂಡಿ ಬಂದಿದೆ.

ಸಂತೋಷ್ ಆನಂದ್ ರಾಮ್ ರಿಂದ ಟ್ರೇಲರ್ ಲಾಂಚ್

ಇನ್ನು ಈ ಚಿತ್ರದಲ್ಲಿ ಕಲರ್ ಫುಲ್ ಸಾಂಗ್ಸ್ ಇರಲಿವೆ. ಇನ್ನು ಆಡಿಯೋ ಹಾಗ ಟ್ರೇಲರ್ ಲಾಂಚ್ ನ ಸಂದರ್ಭದಲ್ಲಿ ಲಹರಿ ವೇಲು, ನಿರ್ದೇಶಕ ಕೆ.ಮಾದೇಶ್ ಹಾಗೂ ಸಂತೋಷ್ ಆನಂದ್ ರಾಮ್ ಭಾಗಿಯಾಗಿದ್ರು. ಇನ್ನು ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ ವೆಂಕಟ್ ರಾವ್. ಇನ್ನು ಚಿತ್ರದ ನಿರ್ದೇಶಕ ಈ ಮೊದ್ಲು ಸಾಕಷ್ಟು ಸಿನಿಮಾಗೆ ಸಹ ನಿರ್ದೇಶಕ ರಾಗಿ ಕಾರ್ಯನಿರ್ವಹಿಸಿದ್ದಾರೆ. ಒಟ್ನಲ್ಲಿ ಚಿತ್ರದ ಟ್ರೇಲರ್ ಹಾಗೂ ಆಡಿಯೋ ಸಾಂಗ್ಸ್ ರಿಲೀಸ್ ಮಾಡಿರೋ ಚಿತ್ರತಂಡ ಸದ್ಯದಲ್ಲಿಯೇ ತೆರೆಗೆ ಬರಲು ರೆಡಿಯಾಗಿದೆ. ಇನ್ನು ಈ ಸಿನಿಮಾದಲ್ಲಿ ಏನೇಲ್ಲಾ ಸ್ಪೆಷಲ್ ಎಲಿಮೆಂಟ್ ಇರ್ತಾವೆ ಅಂತಾ ಕಾದು ನೋಡ್ಬೇಕು…

ಕೊಡಗಿನೊಳಗೊಂದು ನಿಗೂಢ “ರತ್ನಮಂಜರಿ”!

#racekanandamovie #bigbossdiwakar #sandalwood

 

Tags

Related Articles