ಸುದ್ದಿಗಳು

‘ಡಾಲಿ’ ಧನಂಜಯ್ ಗೆ ಜೋಡಿಯಾದ ಡಿಂಪಲ್ ಕ್ವಿನ್ ರಚಿತಾ ರಾಮ್…!!!

ಡಿ-ಬಾಸ್ ದರ್ಶನ್ ನಟನೆಯ ‘ಬುಲ್ ಬುಲ್’ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಚಿತಾ ರಾಮ್, ಆನಂತರ ಗಣೇಶ್, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ಶ್ರೀ ಮುರುಳಿ, ಉಪೇಂದ್ರ, ಸೇರಿದಂತೆ ಅನೇಕ ಸೂಪರ್ ಸ್ಟಾರ್ ಗಳೊಂದಿಗೆ ನಟಿಸಿದ್ದಾರೆ.

ಅಂದಹಾಗೆ ರಚಿತಾ ರಾಮ್, ಇನ್ನೂ ‘ಡಾಲಿ’ ಧನಂಜಯ್ ಗೆ ಫೇರ್ ಆಗಿ ನಟಿಸಿಲ್ಲವಲ್ಲ ಎಂದು ನೀವು ಕೇಳಬಹುದು. ಅದಕ್ಕೀಗ ಸಮಯ ಬಂದಿದೆ ಎನ್ನಬಹುದು. ಹೌದು, ಎಲ್ಲವೂ ಅಂದುಕೊಂಡಂತಾದರೆ, ‘ಡಾಲಿ’ ಚಿತ್ರಕ್ಕೆ ರಚಿತಾ ನಾಯಕಿಯಾಗಿ ಬರುವುದು ಖಚಿತವೆನ್ನುತ್ತಿದ್ದಾರೆ ಚಿತ್ರದ ನಿರ್ಮಾಪಕ ಯೋಗೇಶ್ ನಾರಾಯಣ್.

ಸದ್ಯ ರಚಿತಾ ರಾಮ್ ‘ಆಯುಷ್ಮಾನ್ ಭವ’ ಹಾಗೂ ‘100’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಸಮಯ ಮತ್ತು ಹಣಕಾಸಿನ ವಿಚಾರ ಹೊಂದಿಕೆಯಾದಲ್ಲಿ ಅವರನ್ನು ತಮ್ಮ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡಲು ನಿರ್ಧರಿಸಿದ್ದಾರೆ ನಿರ್ಮಾಪಕರು.

ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಲಕ್ಕಿ ಹೀರೋಹಿನ್ ಎಂದು ಜನಪ್ರಿಯರಾಗಿರುವ ರಚಿತಾ ರಾಮ್, ಇದೀಗ ಧನಂಜಯ್ ರಿಗೂ ನಾಯಕಿಯಾಗಿ ನಟಿಸುವುದು ಖಂಡಿತಾ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದಷ್ಟು ಬೇಗ ಈ ಕುರಿತು ಚಿತ್ರತಂಡ ಸ್ಪಷ್ಟಪಡಿಸಲಿದೆ.

ಕೂದಲಿನ ಕಾಂತಿ ಹೆಚ್ಚಿಸುವ ತೆಂಗಿನಹಾಲಿನ ಕಂಡೀಶನರ್..!

#rachitharam #acting #with #dollydhananjay  #kannadafilm, #kannadamovie, #kannadanews, #kannadanewmovie, #kannadacine, #latestkannadamovie, #sandalwoodmovies  ‍#kannadasuddigalu

Tags