ಸುದ್ದಿಗಳು

ಹೊಸ ಅವತಾರದಲ್ಲಿ ರಚಿತಾ ರಾಮ್

‘ಸೀತಾ ರಾಮ ಕಲ್ಯಾಣ’ ಚಿತ್ರದ ಪೋಟೋ ಸದ್ದು ಮಾಡುತ್ತಿದೆ

ಬೆಂಗಳೂರು, ಸ.11: ಚಂದನವನದ ಲಕ್ಕಿ ನಾಯಕಿ ಅಂತಾನೇ ಜನಪ್ರಿಯವಾಗಿರುವ ರಚಿತಾ ರಾಮ್ ಪೋಟೋವೊಂದು ಸದ್ದು ಮಾಡುತ್ತಿದೆ. ಸದ್ಯ ‘ಸೀತಾ ರಾಮ ಕಲ್ಯಾಣ’ ಚಿತ್ರದ ಚಿತ್ರೀಕರಣದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ಅವರು , ತಮ್ಮ ಇನ್ಸ್ಟಾಗ್ರಾಂ ನಲ್ಲಿ ಒಂದು ಫೋಟೋ ಅಪ್ಲೋಡ್ ಮಾಡಿದ್ದಾರೆ.

ಗಮನ ಸೆಳೆದ ಫೋಟೋ

ರಚಿತಾ ರಾಮ್ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಫೋಟೋವನ್ನು ಅಪ್ಲೋಡ್ ಮಾಡಿರುವ ಈ ಪೋಟೋದಲ್ಲಿ ಅವರು ಹಣೆ ತುಂಬ ಕುಂಕುಮ ಬಳಿದುಕೊಂಡಿದ್ದಾರೆ. ಈ ಫೋಟೋ ಸಾಕಷ್ಟು ಸದ್ದು ಮಾಡುತ್ತಿದ್ದು ಕುತೂಹಲ ಮೂಡಿಸುವಂತಿದೆ.

ರಚಿತಾ ಚಿತ್ರಗಳು

ಸದ್ಯ ನಿಖಿಲ್ ಜೊತೆಗೆ ‘ಸೀತಾ ರಾಮ ಕಲ್ಯಾಣ’ ಚಿತ್ರದಲ್ಲಿ ನಟಿಸುತ್ತಿರುವ ರಚಿತಾ, ಉಪೇಂದ್ರರೊಂದಿಗೆ ‘ಉಪ್ಪಿ ರುಪಿ’ ಮತ್ತು ‘ಐ ಲವ್ ಯೂ’, ಪುನೀತ್ ರಾಜ್ ಕುಮಾರ್ ಜೊತೆಗೆ ‘ನಟ ಸಾರ್ವಭೌಮ’ ಹಾಗೂ ಮಹಿಳಾ ಪ್ರಾಧ್ಯಾನ್ಯತೆಯ ‘ಎಪ್ರಿಲ್’ ನಲ್ಲಿಯೂ ನಟಿಸುತ್ತಿದ್ದಾರೆ.

 

View this post on Instagram

 

Let it shine..✨ #goodvibesonly✨#onthesetof#Seetharamakalyana????✌???? Pc- @rock_phanni_

A post shared by Rachita Ram (@rachita_instaofficial) on

Tags