ಸುದ್ದಿಗಳು

ಹೊಸ ಫೋಟೋ ಶೂಟ್ ನಲ್ಲಿ ಮಿಂದೆದ್ದ ಬುಲ್ ಬುಲ್ ಬೆಡಗಿ

ಬೆಂಗಳೂರು, ಏ.20:

‘ಸೀರೇಲಿ ಹುಡುಗೀರ ನೋಡ್ಲೇಬಾರದು..ನಿಲ್ಲೋಲ್ಲಾ ಟೆಂಪ್ರೇಚರು..ಸ್ಕೂಲಲ್ಲಿ ಹೇಳಿ ಕೊಡ್ಬಹುದಿತ್ತು ಹೇಳಿಲ್ಲ ನಮ್ ಟೀಚರು​’, ರನ್ನ ಚಿತ್ರದ ಈ ಹಾಡಿನಲ್ಲಿ ಸೀರೆಯಲ್ಲಿ ಮಿಂಚಿದ್ದ ಬುಲ್ ಬುಲ್ ಬೆಡಗಿ ಇದೀಗ ಹೊಸ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.

ಅದು ಕೂಡಾ ಸೀರೆಯಲ್ಲಿ!!!

ನಾಲ್ಕರಿಂದ ಐದು ವೆರೈಟಿಯ ಸೀರೆಯಲ್ಲಿ ರಚಿತಾ ರಾಮ್ ಬೊಂಬೆಯಂತೆ ಕಂಗೊಳಿಸಿದ್ದಾರೆ. ಬುಲ್ ಬುಲ್ ಬೆಡಗಿಯ ಈ ಸ್ಟೈಲಿಶ್ ಫೋಟೊ ಶೂಟ್ ನ ಮೇಕಿಂಗ್ ವಿಡಿಯೋ ಕೂಡಾ ರಿಲೀಸ್ ಆಗಿದೆ.

ರನ್ನದಲ್ಲಿ ಸೀರೆ ಉಟ್ಟು ಹಾಡಿಗೆ ಡ್ಯಾನ್ಸ್ ಮಾಡಿ ಪಡ್ಡೆ ಹುಡುಗರ ಮನ ಕದ್ದಿರುವ ರಚಿತಾ ರಾಮ್ ಇದೀಗ ಮತ್ತೊಮ್ಮೆ ಪಡ್ಡೆಹುಡುಗರ ಮನ ಕದಿಯಲು ತಯಾರಾಗಿ ಬಂದಿದ್ದಾರೆ.

ಸಿನಿಮಾ ಫೋಟೋಗ್ರಾಫರ್ ಚಂದನ್ ಗೌಡ ರಚಿತಾ ರಾಮ್​​ ಅವರ ಸುಂದರ ಫೋಟೋಗಳನ್ನು ತಮ್ಮ ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿದಿದ್ದಾರೆ.  ಮೋಹನ್ ಎಂಬವರು ರಚಿತಾ ರಾಮ್ ಗೆ ಮೇಕಪ್ ಮಾಡಿದ್ದು ಅರುಣ್ ಕಾಸ್ಟೂಮ್ ಡಿಸೈನ್ ಮಾಡಿದ್ದಾರೆ.

 

View this post on Instagram

 

#RachithaRam @rachita_instaofficial #ChandanPhotography

A post shared by Chandan Gowda (@chandan_gowda_photography) on

Image may contain: 1 person, smiling

“ಶ್ವೇತ” ಸುಂದರಿ…

#chandangowda #sandalwood #rachitharam #rachitharammovies #photoshoot

Tags