ಸುದ್ದಿಗಳು

ಸಿನಿಮಾ ಬಿಟ್ಟು ಕ್ರಿಕೆಟರ್ ಆದ ರಚ್ಚು..!!

ನಟಿ ರಚಿತಾ ರಾಮ್ ಇದೀಗ ನಟನೆ ಬಿಟ್ಟು ಕ್ರಿಕೆಟರ್ ಆಗಿ ಬಿಟ್ಟರಾ ಅಂತ ಮೇಲ್ನೋಟಕ್ಕೆ ಅನಿಸಬಹುದು. ಅಥವಾ ಯಾವುದಾದರೂ ಸಿನಿಮಾದಲ್ಲಿ ಕ್ರಿಕೆಟರ್ ಪಾತ್ರ ಮಾಡುತ್ತಿದ್ದಾರಾ ಎಂಬ ಅನುಮಾನ ಬರುವುದು ಗ್ಯಾರಂಟಿ.

ರಚಿತಾ ರಾಮ್, ದರ್ಶನ್ ಅವರ ‘ಬುಲ್ ಬುಲ್’ ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗದಲ್ಲಿ ತನ್ನ ನಟನೆಯ ಖಾತೆಯನ್ನು ತೆರೆದರು. ಅಲ್ಲಿಂದ ಹಿಂತಿರುಗಿ ನೋಡದ ಅವರು ಸದ್ಯದ ಮಟ್ಟಿಗೆ ನಂಬರ್ 1 ನಟಿಯಾಗಿದ್ದಾರೆ.

ಕನ್ನಡದ ಹಲವಾರು ನಟರೊಂದಿಗೆ ತೆರೆಯನ್ನು ಹಂಚಿಕೊಂಡ ರಚಿತಾ, ಸದ್ಯ ‘ಸೀತಾರಾಮ ಕಲ್ಯಾಣ’, ‘ಐ ಲವ್ ಯೂ’, ‘ನಟ ಸಾರ್ವಭೌಮ’, ‘ಏಪ್ರೀಲ್’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಇದೀಗ ಸಿನಿಮಾ ಚಿತ್ರೀಕರಣದ ಬಿಡುವಿನ ವೇಳೆ ರಚಿತಾ ಚಿತ್ರತಂಡದ ಸ್ನೇಹಿತರ ಜೊತೆ ಬ್ಯಾಟ್ ಹಿಡಿದು ಸರಳವಾಗಿ ಆಗಿ ಕ್ರಿಕೆಟ್ ಆಡಿದ್ದಾರೆ. ಅದನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಕ್ರಿಕೆಟ್ ಆಡಿದ್ದು ಎಂದರೆ ಬ್ಯಾಟಿಂಗ್ ಮಾಡಿದ್ದು ಮಾತ್ರ, ಬೌಲಿಂಗ್ ಕೂಡ ಹಾಕಬೇಕು ಎಂದಾಗ ಆಟ ಸಾಕು ಎಂದರಂತೆ..!

ಚಿತ್ರದ ಚಿತ್ರೀಕರಣದ ವೇಳೆಯಲ್ಲಿ ಕ್ರಿಕೆಟ್ ಆಡುತ್ತಿದ್ದ ಪೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮೆಚ್ಚುಗೆ ಗಳಿಸುತ್ತ ಸದ್ದು ಮಾಡುತ್ತಿವೆ…

Tags

Related Articles