ವೈರಲ್ ನ್ಯೂಸ್ಸುದ್ದಿಗಳು

ಮೊದಲ ಬಾರಿಗೆ ನಿರೂಪಣೆಯ ಜವಾಬ್ದಾರಿ ಹೊತ್ತ ಡಿಂಪಲ್ ಕ್ವೀನ್

ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಕನ್ನಡ ಚಿತ್ರರಂಗದ ಬಹುಬೇಡಿಕೆ ನಟಿ. ಯಾವುದೇ ಪಾತ್ರ ಕೊಟ್ಟರೂ ಜೈ ಎನ್ನುವ ರಚಿತಾ ಗ್ಲಾಮರ್ ಗೂ ಸೈ, ಟ್ರೆಡಿಷನಲ್ ಗೂ ಜೈ ಎನ್ನುತ್ತಾರೆ. ಇದೀಗ ರಚಿತಾ ರಾಮ್ ಮೊಟ್ಟ ಮೊದಲ ಬಾರಿಗೆ ಕಾರ್ಯಕ್ರಮವೊಂದನ್ನು ನಿರೂಪಣೆ ಮಾಡಿದ್ದಾರೆ.ಹೌದು, ಒಬ್ಬ ನಟಿ, ಡ್ಯಾನ್ಸರ್, ತೀರ್ಪುಗಾರ್ತಿಯಾಗಿ ಕಣ್ಮನ ಸೆಳೆದಿದ್ದ ಡಿಂಪಲ್ ಕ್ವೀನ್ ಇದೀಗ ಆ್ಯಂಕರಿಂಗ್ ಮಾಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ವರ್ಷ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮ ನಡೆಯುತ್ತದೆ. ಅದರಂತೆ ಈ ವರ್ಷವೂ ಕೂಡ ಕಿರುತೆರೆಯಲ್ಲಿ ಶ್ರಮವಹಿಸಿರುವ ಕಲಾವಿದರು ಹಾಗೂ ತಂತ್ರಜ್ಞನರಿಗೆ ಸನ್ಮಾನಿಸುವ ಸಲುವಾಗಿ ಅನುಬಂಧ ಅವಾರ್ಡ್ಸ್ ನನ್ನು ಮಾಡಲಾಗುತ್ತದೆ. ಆದರೆ ಪ್ರತಿ ಬಾರಿ ಅಕುಲ್, ವಿಜಯ್ ರಾಘವೇಂದ್ರ ಹೀಗೆ ಇನ್ನೇತರರು ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದರು. ಅದರೆ, ಈ ಬಾರಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅನುಬಂಧ ಅವಾರ್ಡ್ಸ್ 2019 ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ದಾರೆ.ಮೊದಲನೇ ಬಾರಿ ನಿರೂಪಣೆ ಮಾಡಿರುವ ಖುಷಿಯಲ್ಲಿರುವ ರಚಿತಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ‘ಫಸ್ಟ್ ಟೈಮ್ ಆ್ಯಂಕರಿಂಗ್ ಮಾಡಿರೋದು, ಚೆನ್ನಾಗಿದ್ರೆ ವೆಲ್ ಡನ್ ರಚಿತಾ ಎಂದು ಹೇಳಿ. ತಪ್ಪಾಗಿದ್ರೆ ನನ್ ಡಿಂಪಲ್ ನೋಡಿ ಕ್ಷಮಿಸಿ’ ಎಂದಿದ್ದಾರೆ.

ಟ್ರೆಂಡಿಂಗ್ ಫೋಟೊ: ಬಿಳಿ ಬಿಕಿನಿಯಲ್ಲಿ ಮಲೈಕಾ

#rachitharam #rachitharammovies #rachitharaminstagram #rachitharamfacebook #rachitharamcomedytalkies #rachitharamanchoring #rachitharamanubandhawards2019 #anubandhaawards2019

Tags