ಸುದ್ದಿಗಳು

ಸಂಜು ಜೊತೆಗೆ ರಚಿತಾ ಡ್ಯೂಯೆಟ್..!!!

ರಿಯಲ್ ಸ್ಟಾರ್ ಉಪೇಂದ್ರರಿಗೆ ‘ಐ ಲವ್ ಯೂ’ ಹೇಳಿದ್ದ ಡಿಂಪಲ್ ಕ್ವೀನ್ ರಚಿತಾ ರಾಮ್ ಇದೀಗ ‘ಸಂಜು’ ಜೊತೆಗೆ ಡ್ಯೂಯೆಟ್ ಹಾಡಲಿದ್ದಾರೆ. ಹೌದು, ನಟಿ ರಚಿತಾ ಈಗಾಗಲೇ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರ ಗ್ಯಾಪ್ ನಲ್ಲಿಯೇ ‘ಸಂಜಯ್ ಅಲಿಯಾಸ್ ಸಂಜು’ವಿಗೆ ಜೊತೆಯಾಗಿದ್ದಾರೆ.

ಇತ್ತಿಚೆಗಷ್ಟೇ ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ಅಮರ್’ ಚಿತ್ರದ ಯಶಸ್ಸಿನ ಬಳಿಕ ನಿರ್ದೇಶಕ ನಾಗಶೇಖರ್ ‘ಸಂಜಯ್ ಅಲಿಯಾಸ್ ಸಂಜು’ ಸಿನಿಮಾ ಅನೌನ್ಸ್ ಮಾಡಿದ್ದರು. ಇದೀಗ ಚಿತ್ರಕ್ಕೆ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಆಯ್ಕೆಯಾಗಿದ್ದಾರೆ.

ಇದೊಂದು ವಿಭಿನ್ನ ಕಥಾಹಂದರವನ್ನು ಒಳಗೊಂಡ ಸಿನಿಮಾವಾಗಿದ್ದು, ಇದು ‘ಸಂಜು ವೆಡ್ಸ್ ಗೀತಾ’ ಚಿತ್ರದ ಸಿಕ್ವೇಲ್ ಇರಬಹುದಾ..? ಎಂಬ ಸುದ್ದಿಗಳು ಹರಡುತ್ತಿವೆ. ಈ ಬಗ್ಗೆ ನಿರ್ದೇಶಕರು ಸ್ಪಷ್ಟಪಡಿಸಿದ್ದು, ಈ ಚಿತ್ರಕ್ಕೂ ‘ಸಂಜು ವೆಡ್ಸ್ ಗೀತಾ’ ಚಿತ್ರಕ್ಕೂ ಯಾವುದೇ ಸಂಬಂಧವಿರುವುದಿಲ್ಲವಂತೆ. ಆದರೆ, ಈ ಚಿತ್ರವೂ ಸಹ ನಾಯಕಿ ಪ್ರಧಾನ ಚಿತ್ರವೆಂದಿದ್ದಾರೆ.ಸದ್ಯ ನಾಯಕನಿಗಾಗಿ ಚಿತ್ರತಂಡ ಹುಡುಕಾಟ ನಡೆಸುತ್ತಿದ್ದು, ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿತ್ತಿವೆ. ಅಂದ ಹಾಗೆ ರಚಿತಾ ಸದ್ಯ ‘ಆನಂದ್’, ‘ಏಕ್ ಲವ್ ಯಾ’, ‘100’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದು, ‘ರುಸ್ತುಂ’ ಇದೇ ಶುಕ್ರವಾರ ತೆರೆಗೆ ಬರುತ್ತಿದೆ.

ಸದ್ಯ ನಿರ್ದೇಶಕ ನಾಗಶೇಖರ್ ಬಾಲಿವುಡ್ ಕಡೆ ಮುಖ ಮಾಡಿ, ಖ್ಯಾತ ನಿರ್ಮಾಪಕ ಜೋಗಿಂದರ್ ಸಿಂಗ್ ಅವರ ಪುತ್ರ ಭವೀಶ್ ಅವರಿಗೆ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.ಈ ಸಿನಿಮಾ ಮುಗಿದ ಬಳಿಕ ‘ಸಂಜಯ್ ಅಲಿಯಾಸ್ ಸಂಜು’ ಸಿನಿಮಾವನ್ನು ಕೈಗೆತ್ತಿಕೊಳ್ಳಲಿದ್ದಾರೆ.

ಪೊಗರು ಚಿತ್ರದಲ್ಲಿ ‘ನಟೋರಿಯಸ್’ ಪಾತ್ರದಲ್ಲಿ ಆಕ್ಷನ್ ಪ್ರಿನ್ಸ್ !!

#rachitharam, #sanjyaaliyassanju, #filmnews, #balkaninews #filmnews, #kannadasuddigalu #100, #yekloveya

Tags