ಸುದ್ದಿಗಳು

‘ರಾಧಾ ರಮಣ’ ಧಾರಾವಾಹಿಯಿಂದ ಹೊರನಡೆದ ರಾಧಾ ಮಿಸ್

ಬೆಂಗಳೂರು, ಏ.20:

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ‘ರಾಧಾ ರಮಣ’ ಧಾರಾವಾಹಿಯೂ ಒಂದು. ರಾಧಾ ಮಿಸ್, ರಮಣ್ ಪಾತ್ರವನ್ನು ಇಷ್ಟ ಪಡದವರಾರು ಹೇಳಿ? ಅದರಲ್ಲೂ ರಾಧಾ ಮಿಸ್ ಅವರ ಮುದ್ದು ಮುಖ, ಅವರು ಧರಿಸುವ ಬಟ್ಟೆ, ತೊಡುವ ಆಭರಣ, ಮನೋಜ್ಞ ಅಭಿನಯಕ್ಕೆ ಮನಸೋಲದವರಿಲ್ಲ!

ಇದೀಗ ರಾಧಾ ರಮಣ ಅಭಿಮಾನಿಗಳಿಗೆ ಒಂದು ಶಾಕಿಂಗ್ ನ್ಯೂಸ್ ಇದೆ. ರಾಧಾ ರಮಣದಲ್ಲಿ ರಮಣನ ಪ್ರೀತಿಯ ರಾಧಾ ಮಿಸ್ ಆಗಿದ್ದ ಆರಾಧನಾಳಾಗಿ ಮಿಂಚಿದ್ದ ಶ್ವೇತಾ ಪ್ರಸಾದ್ ಇನ್ನು ಮುಂದೆ ನಿಮ್ಮ ಮುಂದೆ ಬರುವುದಿಲ್ಲ! ಬರೋಬ್ಬರಿ ಎರಡೂವರೆ ವರುಷಗಳ ಕಾಲ ರಾಧಾ ಮಿಸ್ ಆಗಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಶ್ವೇತಾ ಪ್ರಸಾದ್ ಇದೀಗ ರಾಧಾ ರಮಣದಿಂದ ಹೊರ ಬರಲಿದ್ದಾರೆ.

Related image

ಕಿರುತೆರೆಯ ಶ್ವೇತಾ ಸುಂದರಿ ರಾಧಾ ರಮಣದಿಂದ ಹೊರಬರುವುದಕ್ಕೂ ಒಂದು ಕಾರಣವಿದೆ. ಅದುವೇ ಅಗ್ರಿಮೆಂಟ್. ಹೌದು. ರಾಧಾ ರಮಣ ಧಾರಾವಾಹಿಯಲ್ಲಿ ನಟಿಸುವ ಮೊದಲು ಶ್ವೇತಾ ಒಂದು ವರ್ಷಗಳ ಕಾಲ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆ ಒಪ್ಪಂದ ಮುಗಿದು ವರುಷಗಳೇ ಕಳೆದ ಕಾರಣ ಇದೀಗ ಶ್ವೇತಾ ರಾಧಾ ರಮಣದಿಂದ ಹೊರ ಬರುವ ನಿರ್ಧಾರ ಮಾಡಿದ್ದಾರೆ.

ಸುಮಾರು ವರ್ಷಗಳಿಂದ ಬಣ್ಣ ಹಚ್ಚುತ್ತಿರುವ ಶ್ವೇತಾ ಅವರಿಗೆ ಕೆಲವು ದಿನಗಳು ಬ್ರೇಕ್ ಬೇಕಂತೆ. ಅದೇ ಕಾರಣದಿಂದ ಅವರು ರಾಧಾ ರಮಣದಿಂದ ಹೊರ ಬಂದಿದ್ದಾರೆ. ಇನ್ನು  ಸಿನಿಮಾ ಆಫರ್ ಬಂದ ತಕ್ಷಣ ಕಿರುತೆರೆಯಿಂದ ಹಿರಿತೆರೆಗೆ ಹಲವರು ಕಾಲಿಡುತ್ತಾರೆ.  ಆದರೆ ಶ್ವೇತಾ ಮಾತ್ರ ಸ್ವಲ್ಪ ಭಿನ್ನ.  ಸ್ವಲ್ಪ ದಿನಗಳು ವಿಶ್ರಾತಿ ಪಡೆಯಲಿದು ನಂತರ ಮುಂದಿನ ನಿರ್ಧಾರದ ಬಗ್ಗೆ ಹೇಳಲಿದ್ದಾರೆ.

Image result for shwetha r prasad

ರಾಧಾ ಮಿಸ್ ಆಲಿಯಾಸ್ ಆರಾಧನಾ ಪಾತ್ರಧಾರಿಯಾಗಿ ನಿಮ್ಮ ಪ್ರೀತಿಯ ಶ್ವೇತಾ ಪ್ರಸಾದ್  ಇನ್ನು ಕೇವಲ ಹದಿನೈದು ದಿನಗಳು ಮಾತ್ರ ಧಾರಾವಾಹಿಯಲ್ಲಿ ಅಭಿನಯಿಸಲಿದ್ದಾರೆ. ಅರಾಧನಾ ಪಾತ್ರಧಾರಿಯ ಸಹಿ ಮೋಡಿ ಮಾಡಿ ಕಿರುತೆರೆ ವೀಕ್ಷಕರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದ ಶ್ವೇತಾ ಜಾಗಕ್ಕೆ ಬರುವ ಹೊಸ ರಾಧಾ ಮಿಸ್ ಹೇಗಿದ್ದಾರೆ, ಅವರನ್ನು ವೀಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೆ ಎಂದು ಕಾದು ನೋಡಬೇಕಷ್ಟೇ..

ಪತ್ನಿ ಸಾಹಿತ್ಯ ಸೀಮಂತ ಕಾರ್ಯಕ್ರಮದ ಸಂತಸದಲ್ಲಿ ಲೂಸ್ ಮಾದ ಯೋಗಿ

#balkaninews #sandalwood #kannadamovies #kannadaserial #radharamanakannadaserial #radharamanaserial #shwetharprasad

Tags