ಸುದ್ದಿಗಳು

ರಾಧಿಕಾ ತಾನು ಗರ್ಭಿಣಿ ಅಂತ ತಿಳಿದ ತಕ್ಷಣ ಯಶ್ ಗೆ , ಹೀಗೆ ತಿಳಿಸಿದ್ರಂತೆ!!

ಯಶ್ ಮಾತ್ರ ಅಂದು ಬೆಂಗಳೂರಿನಲ್ಲಿ ಇರಲಿಲ್ಲ

ಬೆಂಗಳೂರು,.21: ಚಂದನವನದ ಸಿಂಡ್ರೆಲಾ ರಾಧಿಕಾ ಪಂಡಿತ್  ತುಂಬು ಗರ್ಭಿಣಿ.. ಹಾಗಾಗಿ ಅವರ ಸೀಮಂತ ಮೊನ್ನೆಯಷ್ಟೇ ಅದ್ಧೂರಿಯಾಗಿ ನಡೆದಿದೆ. ರಾಧಿಕಾ ಆಸೆಯಂತೆ ರಾಕಿಂಗ್ ಯಶ್ ಸೀಮಂತ ಶಾಸ್ತ್ರವನ್ನು ತಾಜ್ವೆಸ್ಟೆಂಡ್ನಲ್ಲೇ ಮಾಡಿ ಮುಗಿಸಿದ್ದಾರೆ. ಚಿತ್ರರಂಗದ ಆಪ್ತರು ಹಾಗೂ ಸಂಬಧಿಕರು ಈ ಸಂದರ್ಭದಲ್ಲಿ ನೆರೆದಿದ್ದರು. ಇದೇ ಸಂದರ್ಭದಲ್ಲಿ ತಾನು ಗರ್ಭಿಣಿಯಾದ ಕುರಿತು ಯಶ್ ಗೆ ಹೇಳಿರುವ ವಿಚಾರವನ್ನು ಮೆಲುಕು ಹಾಕಿದ್ದಾರೆ…

Image result for radhika yash baby shower

ಯಶ್ ಪ್ರತಿಕ್ರಿಯೆ ಹೇಗಿತ್ತು?

ಈ ಹೊತ್ತಲ್ಲಿ ತಾನು ಗರ್ಭಿಣಿ ಅಂತ ಹೇಳಿದಾಗ ಯಶ್ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ರಾಧಿಕಾ ಬಿಚ್ಚಿಟ್ಟಿದ್ದಾರೆ… ರಾಕಿಂಗ್ ಸ್ಟಾರ್ ಯಶ್ ತಂದೆಯಾಗುತ್ತಿರುವ ವಿಚಾರವನ್ನು ರಾಧಿಕಾ ಅವರು ವಿಡಿಯೋ ಮೂಲಕ  ತಮ್ಮ ಸಂತಸವನ್ನು ಹಂಚಿಕೊಂಡಿದ್ದರು.

ವಿಡಿಯೋ ಕಾಲ್ ಮೂಲಕ `ಐಯಾಮ್ ಪ್ರೆಗ್ನೆಂಟ್ಎಂದ ರಾಧಿಕಾ

ಹೌದು, ಏಪ್ರಿಲ್ 23 ಯಶ್-ರಾಧಿಕಾ ಅವರಿಗೆ ಮರೆಯಲಾಗದ ದಿನ. ಯಾಕೆಂದರೆ ಅಂದೇ ರಾಧಿಕಾಗೆ ತಾನು ಗರ್ಭಿಣಿ ಅಂತ ತಿಳಿದಿದ್ದು.. ಗರ್ಭಿಣಿ ಅಂತ ತಿಳಿದಿದ್ದೇ ತಡ, ತಕ್ಷಣ ಪತಿ ಯಶ್ ಬಳಿ ಹೇಳಿಕೊಳ್ಳೋಕೆ ಚಡಪಡಿಸುತ್ತಿದ್ದರಂತೆ. ಯಶ್ ಮಾತ್ರ ಅಂದು ಬೆಂಗಳೂರಿನಲ್ಲಿ ಇರಲಿಲ್ಲ, ಬದಲಾಗಿ  ಮೈಸೂರಿನಲ್ಲಿದ್ದರು. ಆದರೂ ರಾಧಿಕಾ ಅವರು ಯಶ್‍ಗೆ ವಿಡಿಯೋ ಕಾಲ್ ಮೂಲಕ `ಐಯಾಮ್ ಪ್ರೆಗ್ನೆಂಟ್’ ಎಂದು ಸಂತಸದ ವಿಚಾರವನ್ನು ರಾಧಿಕಾ ಹೇಳಿದ್ದರಂತೆ.

Image result for radhika yash baby shower

ಕೇವಲ ಮೂರೇ ಮೂರು ಗಂಟೆ

ಇನ್ನು ತಾನು ಅಪ್ಪನಾಗುತ್ತಿರುವ ಖುಷಿಯ ವಿಚಾರವನ್ನು ಕೇಳಿದ್ದೇ ತಡ, ಯಶ್ ಮೈಸೂರಿನಿಂದ ಹೂ, ಹಣ್ಣು, ಸ್ವೀಟ್ಸ್ ಖರೀದಿಸಿ ಕೇವಲ ಮೂರೇ ಮೂರು ಗಂಟೆಯಲ್ಲಿ ರಾಧಿಕಾ ಮುಂದೆ ಪ್ರತ್ಯಕ್ಷವಾಗಿದ್ದರು. ಯಶ್ ಒಬ್ಬ ಒಳ್ಳೆಯ ಸ್ನೇಹಿತ ಎನ್ನುವ ರಾಧಿಕಾ, ಯಶ್‍ ನಂತಹ ಅಪ್ಪನನ್ನು ಪಡೆಯೋದಕ್ಕೆ ನನ್ನ ಮಗು ಏಳೇಳು ಜನ್ಮದ ಪುಣ್ಯಮಾಡಿದೆ ಅಂತ ಹೇಳಿಕೊಂಡಿದ್ದಾರೆ.

ಸೀಮಂತ ಸಂಭ್ರಮದಲ್ಲಿ ರಾಧಿಕಾಗೆ ಲಕ್ಕಿ ಹ್ಯಾಂಡ್ಸ್ ಕಿಟ್ ಕೊಟ್ಟು ಸದಾಕಾಲ ಖುಷಿಯಾಗಿ ಬಾಳೋಣ ಅಂತ ಭಾಷೆ ಕೊಟ್ಟಿದ್ದಾರೆ.  ಇನ್ನು ಡಿಸೆಂಬರ್ 9 ರಂದು ವೈದ್ಯರು ರಾಧಿಕಾ ಮಗುವಿನ ಆಗಮನಕ್ಕೆ ದಿನಾಂಕ ನಿಗದಿ ಮಾಡಿದ್ದಾರೆ..

 

 

Tags

Related Articles