ಸುದ್ದಿಗಳು

ದುಡ್ಡು ಕೊಟ್ರೆ ಸಾಕು! ಸಿನೆಮಾ ಒಪ್ಕೊತೀನಿ…!

ರಾಧಿಕಾ ಆಪ್ಟೆಯ ನೇರ ನುಡಿ...

ಮುಂಬೈ.ಸೆ.7: ಬಾಲಿವುಡ್ ನ ಬಿರುಗಾಳಿ ರಾಧಿಕಾ ಆಪ್ಟೆ, ತಮ್ಮ ಆದ್ಯತೆಗಳನ್ನು ವ್ಯಕ್ತಪಡಿಸುವ ವಿಚಾರದಲ್ಲಿ ತುಂಬಾ ಬೋಲ್ಡ್ ಹುಡುಗಿ. ‘ನಾನೀಗ ಸಿನಿಮಾದಲ್ಲಿ ನಟನೆ ಮಾಡಿ ಹೆಸರು ಮಾಡಬೇಕು, ಭಾರೀ ಜನಪ್ರಿಯತೆ ಗಳಿಸಬೇಕು ಅನ್ನುವಂಥದ್ದೇನೂ ಇಲ್ಲ, ಬೇರೆ ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ, ಬರೀ ಹಣಕ್ಕಾಗಿ ಅಷ್ಟೇ ಕೆಲಸ ಮಾಡಲು ನಾನು ರೆಡಿ ಇದ್ದೀನಿ.’ ಅನ್ನುವುದು ರಾಧಿಕಾ ಆಪ್ಟೆಯ ಗಟ್ಟಿ ಮಾತು.ಯಾವ ಕೆಲಸದಲ್ಲೂ ಹಂಡ್ರೆಡ್ ಪರ್ಸೆಂಟ್ ತೃಪ್ತಿ ಇರಲ್ಲ

ಯಾವುದೇ ವೃತ್ತಿಯೂ ನೂರಕ್ಕೆ ನೂರರಷ್ಟು ಸಂಪೂರ್ಣ ಸಂತೃಪ್ತಿ ತಂದುಕೊಡಲಾರದು, ಹೊಟ್ಟೆಪಾಡಿಗಾಗಿ ಮತ್ತು ಲೈಫ್ ಸ್ಟೈಲ್  ನಿರ್ವಹಣೆ ಮಾಡಲು ಹಣ ಬೇಕಾಗುತ್ತದೆ, ಹೀಗಾಗಿ, ನಾವು ಹಿಂದೆ ಮುಂದೆ ನೋಡದೆ ಕೆಲಸ ಒಪ್ಪಿಕೊಳ್ಳಬೇಕಾಗುತ್ತದೆ ಅನ್ನುತ್ತಾರೆ ರಾಧಿಕಾ ಆಪ್ಟೆ. ಇದು, ನನಗೊಬ್ಬಳಿಗೆ ಮಾತ್ರವಲ್ಲ, ಸಮಾಜದ ಬಹುತೇಕ ಜನರಿಗೂ ಅನಿವಾರ್ಯ ಅನ್ನುವ ರಾಧಿಕಾ ಆಪ್ಟೆಯ ಲೋಕಾನುಭವದ ಮಾತನ್ನು ನಿರಾಕರಿಸುವುದು ಸಾಧ್ಯವಿಲ್ಲ. ನೀವು ಯಾರೇ ಆಗಿದ್ದರೂ ಕೂಡ, ಸಾಕಷ್ಟು ಶ್ರಮಪಡದೆ ಇದ್ದಲ್ಲಿ, ಯಶಸ್ಸು ಸಿಗುವುದಿಲ್ಲ ಎನ್ನುವ ರಾಧಿಕಾ, ಅದೃಷ್ಟವೂ ನಿಮಗೆ ಸಾಥ್ ನೀಡಬೇಕು ಅನ್ನುತ್ತಾರೆ.

Tags