ಸುದ್ದಿಗಳು

ದೇಹದಾನ ಮಾಡಿ, ಮಾನವೀಯತೆ ಮೆರೆದ ಬಾಲಿವುಡ್ ನಟಿ!

ಮುಂಬೈ, ಆ.11: ಬಾಲಿವುಡ್ ಹಾಟ್ ಬೆಡಗಿ ರಾಧಿಕಾ ಆಪ್ಟೆ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ?, ಇವರು ಸಿನಿಮಾಗಳಲ್ಲಿ ನಟಿಸಿರುವುದು ಕಡಿಮೆಯಾದರೂ, ಸಾಮಾಜಿಕ ಮಾಧ್ಯಮಗಳಲ್ಲಿ ಮಾತ್ರ ತಮ್ಮ ವೈಯಕ್ತಿಕ ಸುದ್ದಿಗಳಿಂದ  ಭಾರೀ ಪ್ರಚಲಿತಳಾಗಿದ್ದಾಳೆ. ನಿರಂತರವಾಗಿ ಯಾವುದಾದರೊಂದು ಸುದ್ದಿಯಲ್ಲಿರುತ್ತಾ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ಈಕೆ, ಈಗ ಮಾನವೀಯ ಮೌಲ್ಯಾಧಾರಿತ ಸುದ್ದಿಯಲ್ಲಿರುವುದು ಕೇಳುಗರ ಹುಬ್ಬೇರಿಸುವಂತೆ ಮಾಡಿದೆ. ಅಸಲಿಗೆ ಏನಪಾ ವಿಚಾರ ಅಂತೀರಾ?.

ಮಾನವೀಯತೆಯ ಪ್ರತೀಕ

ಸುಕಾ ಸುಮ್ಮನೆ ಗಾಳಿಸುದ್ದಿಗೆ ತಮ್ಮನ್ನು ತಾವು ಸಿಕ್ಕಿಸಿಕೊಂಡು ಹಲವು  ವಿವಾದಗಳಿಗೆ ಕಾರಣವಾಗುತ್ತಿರುವ ಈ ನಟಿ, ಇದೀಗ ತಮ್ಮ ದೇಹದಾನ ಮಾಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ. ಹೌದು ನಿನ್ನೆ ಮುಂಬೈನ ಸಹ್ಯಾದ್ರಿ ಆಸ್ಪತ್ರೆಗೆ ಬೇಟಿ ನೀಡಿದ್ದ ಇವರು, ಮರಣದ ನಂತರ ತಮ್ಮ ದೇಹವನ್ನು ವೈದ್ಯಕೀಯ ಉಪಯೋಗಕ್ಕೆ ಬಳಸಿಕೊಳ್ಳಲು ಹಾಗೂ ತಮ್ಮ ಅಂಗಾಗಳನ್ನು ಇತರರಿಗೆ ವಿನಿಯೋಗ ಮಾಡಲು ನಿರ್ದರಿಸಿದ್ದಾರೆ. ಈ ನಿಟ್ಟಿನಲ್ಲಿ  ಆಸ್ಪತ್ರೆಯ ಒಪ್ಪಿಗೆ ಪತ್ರದಲ್ಲಿ ಸಹಿ ಹಾಕಿದ್ದಾರೆ. ಮಾನವೀಯತೆಯ ಪ್ರತೀಕವಾದ ರಾಧಿಕಾ ಆಪ್ಟೆ, ಇಂತಹ ಪುಣ್ಯ ಕಾರ್ಯಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿರುವುದು ಇತರರಿಗೆ ಸ್ಪೂರ್ತಿದಾಯಕವಾಗಿದೆ.

ನಮ್ಮ ನಾಡಿನ ಮಾದರಿ ವ್ಯಕ್ತಿಗಳು

ಇನ್ನೂ, ಈ ವಿಷಯಕ್ಕೆ ಸಂಬಂಧಿಸಿದಂತೆ ಕನ್ನಡ ನಾಡಿನ ವರನಟ ಡಾ. ರಾಜ್ ಕುಮಾರ್ ಅವರು ನೇತ್ರ ದಾನ ಮಾಡಿರುವುದನ್ನೂ, ಮತ್ತು ಹಿರಿಯ ನಟ ಲೋಕೇಶ್ ಅವರು ಸಾರ್ವಜನಿಕ ಆರೋಗ್ಯ ಇಲಾಖೆಗೆ ಇಡೀ ದೇಹದಾನ ಮಾಡಿರುವುದನ್ನೂ ಇಲ್ಲಿ ಸ್ಮರಿಸಬಹುದು. ಜೊತೆಗೆ ಇಂತಹ ಸಾಮಾಜಿಕ ಕಳಕಳಿಯುಳ್ಳ ಕೆಲಸಗಳಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡಿರುವ ಎಲ್ಲರನ್ನೂ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ.

Tags

Related Articles