ಸುದ್ದಿಗಳು

ನೀನು ನನಗೆ ಜನಿಸಿದಂತೆ ಭಾಸವಾಗುತ್ತದೆ … ಹ್ಯಾಪಿ ಬರ್ತ್ ಡೇ ಮೈ ಲವ್”

ಬೆಂಗಳೂರು,ಮಾ.8:

ನಟಿ ರಾಧಿಕಾ ಪಂಡಿತ್ ತಮ್ಮ ಹುಟ್ಟು ಹಬ್ಬವನ್ನು  ಗುರುವಾರವಷ್ಟೇ ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಯಶ್ ತಮ್ಗಮ ಮುದ್ದಿನ ಪತ್ನಿಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ…

ನಿನಗೆ ಧನ್ಯವಾದ

ಇನ್ನುನಟ ಯಶ್ ಅವರು ಟ್ವೀಟ್ಟರ್, ಇನ್ ಸ್ಟಾಗ್ರಾಂನಲ್ಲಿ ಫೋಟೋ ಹಾಕಿ ತಮ್ಮ ಮುದ್ದಿನ  ಪತ್ನಿಗೆ ಪ್ರೀತಿಯಿಂದ ಶುಭಾಶಯ ತಿಳಿಸಿದ್ದಾರೆ. ಯಶ್ ಅವರು, “ಜೀವನವು ಸುಂದರವಾಗಿದೆ ಜೀವನದಲ್ಲಿ ನಾನು ಏನು ಮಾಡುತ್ತಿದ್ದೇನೆ ಎಂಬುದಕ್ಕಿಂತ, ಆದರೆ ನನ್ನ ಜೀವನದಲ್ಲಿ ನಾನು ಯಾರನ್ನಾದರೂ ಹೊಂದಿದ್ದೇನೆ ಎಂಬುದು ಮುಖ್ಯ… ನಿನಗೆ ಧನ್ಯವಾದ. ನೀನು ನನಗೆ ಜನಿಸಿದಂತೆ ಭಾಸವಾಗುತ್ತದೆ … ಹ್ಯಾಪಿ ಬರ್ತ್ ಡೇ ಮೈ ಲವ್” ಎಂದು ಟ್ವೀಟ್ ಮಡಿದ್ದಾರೆ.

ಬೆಂಗಳೂರಿನಲ್ಲಿ ಆಚರಿಸಿಕೊಳ್ಳುತ್ತಿಲ್ಲ

ಯಶ್ ಹಾಗೂ ರಾಧಿಕಾ ಫೋಟೋ ಹಾಕಿಕೊಂಡಿದ್ದಾರೆ… ಯಶ್ ರಾಧಿಕಾ ಅವರನ್ನು ತಮ್ಮ ಕೈಗಳಿಂದ ಅಪ್ಪಿಕೊಂಡು ಅವರನ್ನೇ ನೋಡುತ್ತಿದ್ದಾರೆ..ರಾಧಿಕಾ ತಮ್ಮ ಹುಟ್ಟು ಹಬ್ಬವನ್ನು ಪ್ರತಿ ಬಾರಿ ತಮ್ಮ ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುತ್ತಾರೆ.. ಆದರೆ ಈ ಬಾರಿ ಮಾತ್ರ ಬೆಂಗಳೂರಿನಲ್ಲಿ ಆಚರಿಸಿಕೊಳ್ಳುತ್ತಿಲ್ಲ ಎಂದು ವಿಡಿಯೋ ಮೂಲಕ ಹೇಳಿದ್ದರು..

ಪ್ರೇಕ್ಷಕರಿಗೆ ತಿನ್ನಲು ರೆಡಿಯಾಯ್ತು ‘ಗಿರ್ಮಿಟ್ಟು’

Tags