ಸುದ್ದಿಗಳು

“ಹ್ಯಾಪಿ ಬರ್ತಡೇ ಟು ಮೈ ಪರ್ಫೆಕ್ಟ್ ಮ್ಯಾಚ್” ರಾಧಿಕಾ ಪೋಸ್ಟ್ ಡಿಲೀಟ್ ಮಾಡಿದ್ಯಾಕೆ?

ಬೆಂಗಳೂರು,ಜ.11: ಮೊನ್ನೆಯಷ್ಟೇ ಯಶ್ ತಮ್ಮ ಹುಟ್ಟು ಹಬ್ಬವನ್ನು ಅಂಬರೀಶ್ ನಿಧನದ ಕಾರಣಕ್ಕೆ ಆಚರಿಸಿಕೊಂಡಿಲ್ಲ.. ಇನ್ನು ಅನೇಕರು ಯಶ್ ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದರು.. ಚಂದನವನದ ಸಿಂಡ್ರೆಲಾ ರಾಧಿಕಾ ತನ್ನ ಪತಿಗೆ ಸರಳವಾಗಿ ಸಾಮಾಜಿಕ ಜಾಲತಾಣದಲ್ಲಿ “ಹ್ಯಾಪಿ ಬರ್ತಡೇ ಟು ಮೈ ಪರ್ಫೆಕ್ಟ್ ಮ್ಯಾಚ್” ಎಂದು ಬರೆದಿದ್ದರು.. ಈಗ ಈ ಪೋಸ್ಟ್ ಡಿಲೀಟ್ ಆಗಿದೆ  ಎಂದು ರಾಧಿಕಾ ಯಶ್ ಕುರಿತಾಗಿ ಫೇಸ್‌ಬುಕ್‌ ನಲ್ಲಿ ಬರೆದುಕೊಂಡಿದ್ದರು. ಆದರೆ ಈಗ್ ಆ ಪೋಸ್ಟ್ ಡಿಲೀಟ್ ಆಗಿದೆ.

Radhika Pandith s Yash Birthday Wishes post deleted from Social Media

ಬೇಸರಗೊಂಡು ಪೋಸ್ಟ್ ಡಿಲೀಟ್

ನಟ ಯಶ್‌ ಅವರು ಈ ಬಾರಿ ತಮ್ಮ ಹುಟ್ಟುಹಬ್ಬ ಆಚರಣೆಗೆ ನಿರಾಕರಿಸಿದ್ದರಿಂದ ಬೇಸರಗೊಂಡು ಅಭಿಮಾನಿ ರವಿ  ಯಶ್ ನಿವಾಸದ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಅಭಿಮಾನಿ ಮೃತಪಟ್ಟಿದ್ದರು. ಇನ್ನು ಯಶ್ ಕೂಡ ಮನನೊಂದು ಎಲ್ಲರಲ್ಲೂ ಇಂತಹ ಕೆಲಸ ಯಾರೂ ಮಾಡಬೇಡಿ ಎಂದು ಕೇಳಿದ್ದರು.. ಈಗ ರಾಧಿಕಾ ಕೂಡ ಮನನೊಂದು ಇದೇ ಕಾರಣಕ್ಕೆ ಪೋಸ್ಟ್ ಡಿಲೀಟ್ ಮಾಡಿದರಾ? ಎಂಬುದು ತಿಳಿದಿಲ್ಲ

#balkaninews #radhikapandit

Tags