ಸುದ್ದಿಗಳು

ಚಿನ್ನದ ಗೊಂಬೆಯಂತಾದ ರಾಧಿಕಾ ಕುಮಾರಸ್ವಾಮಿ…!

ಫೋಟೋಶೂಟ್ ಮಾಡಿಸಿಕೊಂಡ ರಾಧಿಕಾ

ನಟಿ ಮತ್ತು ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಕನ್ನಡ ಚಲನಚಿತ್ರದ ಜನಪ್ರಿಯ ನಟಿಯರಲ್ಲೊಬ್ಬರು.

ಬೆಂಗಳೂರು, ಸೆ.05:  ನಟಿ ಮತ್ತು ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಕನ್ನಡ ಚಲನಚಿತ್ರದ ಜನಪ್ರಿಯ ನಟಿಯರಲ್ಲೊಬ್ಬರು. ‘ನೀಲ ಮೇಘಾ ಶಾಮ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.  ನಂತರ 2002 ರಲ್ಲಿ ವಿಜಯ್ ರಾಘವೇಂದ್ರ ಅವರ ಜೊತೆ ‘ನಿನಗಾಗಿ’ ಚಿತ್ರದಲ್ಲಿ ಅಭಿನಯಿಸಿ ಬಹುಬೇಡಿಕೆಯ ನಟಿಯಾದರು. ಆನಂತರ ಹಲವಾರು ಹಿಟ್ ಚಿತ್ರಗಳಲ್ಲಿ ನಟಿಸಿದರು.ಸ್ವೀಟಿ ಮೂಲಕ ಮರಳಿ ಚಿತ್ರರಂಗಕ್ಕೆ

ಕೆಲವು ವೈಯಕ್ತಿಕ ಕಾರಣಗಳಿಂದ ಚಿತ್ರರಂಗದಿಂದ ದೂರವಿದ್ದ ರಾಧಿಕ ‘ಸ್ವೀಟಿ’  ಸಿನಿಮಾದ ಮೂಲಕ ರೀ ಎಂಟ್ರಿ ಕೊಡುವ ಮೂಲಕ ಚಂದನವನದಲ್ಲಿ ಮತ್ತೊಮ್ಮೆ ಹಲವಾರು ಸಿನಿಮಾಗಳಲ್ಲಿ ನಿರತರಾಗಿದ್ದಲ್ಲದೇ,  ರಿಯಾಲಿಟಿ ಶೋಗಳಲ್ಲಿಯೂ ಕೂಡಾ ಕಾಣಿಸಿಕೊಂಡರು.ಭೈರಾದೇವಿ ಸಿನಿಮಾ

ಇದೀಗ ರಾಧಿಕಾ, ತಮ್ಮದೇ ಬ್ಯಾನರ್ ನ ‘ಭೈರಾದೇವಿ’ ಸಿನಿಮಾದಲ್ಲಿ ನಿರತರಾಗಿದ್ದಾರೆ. ರವಿಚಂದ್ರನ್ ಜೊತೆಗಿನ ‘ರಾಜೇಂದ್ರ ಪೊನ್ನಪ್ಪ’ , ಅರ್ಜುನ್ ಸರ್ಜಾ ಜೊತೆಗೆ ‘ಕಾಂಟ್ರ್ಯಾಕ್ಟ್’ , ಹಾಗೂ ‘ದಮಯಂತಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೀಗ ರಾಧಿಕಾ ಪೋಟೋಶೂಟ್ ಮಾಡಿಸುವುದರೊಂದಿಗೆ  ಮತ್ತೊಮ್ಮೆ ಸುದ್ದಿಗೆ ಬಂದಿದ್ದಾರೆ.ಆಭರಣ ಮಳಿಗೆಯ ಬ್ರ್ಯಾಂಡ್ ಅಂಬಾಸಿಡರ್

ಇತ್ತೀಚೆಗೆ ರಾಧಿಕಾ ಕುಮಾರಸ್ವಾಮಿ ‘ಜ್ಯುವೆಲ್ಸ್ ಆಫ್ ಇಂಡಿಯಾ’ ಆಭರಣ ಬ್ರ್ಯಾಂಡ್ ವೊಂದಕ್ಕೆ ಅಂಬಾಸಿಡರ್ ಆಗಿರುವುದರೊಂದಿಗೆ, ಗೌರಿ ಹಬ್ಬದ ವಿಶೇಷವಾಗಿ ಬಣ್ಣ ಬಣ್ಣದ ಸೀರೆ, ಡೈಮೆಂಡ್, ಚಿನ್ನದ  ಆಭರಣಗಳನ್ನು ಧರಿಸುವ ಮೂಲಕ  ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಆಭರಣ ಮಳಿಗೆಯ ಅಂಬಾಸಿಡರ್ ಆಗಿರುವ ಇವರು ವೈಶಿಷ್ಟ್ಯ ರೀತಿಯಲ್ಲಿ ಫೋಸ್ ಗಳನ್ನು ಕೊಟ್ಟು ಮೋಹಕವಾಗಿ ಕಾಣಿಸಿಕೊಂಡಿದ್ದಾರೆ.  

Tags

Related Articles